ಗೌರಿಬಿದನೂರು: ನಗರದ ಜನರು ಬಹಳ ವರ್ಷಗಳಿಂದ ವಿದ್ಯುತ್ ಚಿತಾಗಾರಕ್ಕೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಸಂಬಂಧಪಟ್ಟ ಸಚಿವ ರಹೀಂ ಖಾನ್ ಅವರಲ್ಲಿ ವಿಶೇಷವಾಗಿ ಮನವಿ ಮಾಡಿ, ಅವರ ಸಹಕಾರದಿಂದ ಈ ಯೋಜನೆಗೆ ಚಾಲನೆ ಸಿಕ್ಕಿದೆ ಎಂದು ಶಾಸಕ ಕೆ.ಎಚ್ .ಪುಟ್ಟಸ್ವಾಮಿಗೌಡ (MLA KH Puttaswamy Gowda)ಹೇಳಿದರು.
ನಗರದ ಕೆ.ಇ.ಬಿ ಹತ್ತಿರದ ರುದ್ರ ಭೂಮಿಯಲ್ಲಿ ಆಧುನಿಕ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಗುರುವಾರ ದಂದು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ನಗರದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಂತ್ಯಕ್ರಿಯೆಗೆ ಪೂರಕವಾದ ಆಧುನಿಕ ವ್ಯವಸ್ಥೆಯ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಜನರು ವಿದ್ಯುತ್ ಚಿತಾಗಾರಕ್ಕಾಗಿ ಬಹಳ ವರ್ಷಗಳಿಂದ ಮನವಿ ಮಾಡುತ್ತಿದ್ದರು. ಜನರ ಈ ಬೇಡಿಕೆಯನ್ನು ಸಂಬಂಧಪಟ್ಟ ಸಚಿವರಾದ ರಹೀಂ ಖಾನ್ ಅವರಲ್ಲಿ ವಿಶೇಷ ಮನವಿ ಮಾಡ ಲಾಗಿತ್ತು. ಅವರ ಸಹಕಾರದಿಂದ ಇಂದು ಈ ಯೋಜನೆಗೆ ಚಾಲನೆ ಸಿಕ್ಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: Gauribidanur News: ಅದ್ದೂರಿ ಅಂಬೇಡ್ಕರ್ ಜಯಂತಿಗೆ ನಿರ್ಧರಿಸಿದ ರವಿ ನಾರಾಯಣ ರೆಡ್ಡಿ ಗುಂಪು
ಜನಸಂಖ್ಯೆ ಹೆಚ್ಚಾದಂತೆ ಭೂಮಿಯ ಲಭ್ಯತೆ ಕಡಿಮೆಯಾಗುತ್ತಿದೆ. ಸ್ಮಶಾನಗಳಿಗೆ ಹೆಚ್ಚಿನ ಜಾಗ ಒದಗಿಸುವುದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಚಿತಾಗಾರವು ಅತ್ಯಂತ ಕಡಿಮೆ ಜಾಗದಲ್ಲಿ, ಕಡಿಮೆ ವೆಚ್ಚದಲ್ಲಿ ಮತ್ತು ಪರಿಸರ ಸ್ನೇಹಿಯಾಗಿ ಶವಸಂಸ್ಕಾರ ಮಾಡಲು ಸಹಕಾರಿ ಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ನಗರಸಭೆ ಪೌರಾಯುಕ್ತ ರಮೇಶ್, ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಮಾಜಿಸದಸ್ಯರಾದ ರೂಪಾಅನಂತರಾಜ್, ಅಮರ್, ರಾಜಕುಮಾರ್, ಶ್ರೀಕಾಂತ್, ಶ್ರೀರಾಮಯ್ಯ, ಕಲೀಂಉಲ್ಲಾ ಹಾಗೂ ಮುಖಂಡರಾದ ಆರ್. ಅಶೋಕ್ ಕುಮಾರ್, ಬಿ.ಆರ್.ಶ್ರೀನಿವಾಸ, ಅಲ್ಲಂಪಲ್ಲಿವೇಣು, ಎಸ್.ಎಲ್, ಅಬೂಬೇಕರ್, ಶ್ರೀನಿವಾಸಗೌಡ, ಬಾಲಕೃಷ್ಣ ಮತ್ತು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.