ಬಾಗೇಪಲ್ಲಿ: ತಾಲ್ಲೂಕಿನ ಮಿಟ್ಟೇಮರಿ ಗ್ರಾಮದ ಐತಿಹಾಸಿಕ ಶ್ರೀ ಸೀತಾರಾಮ ಲಕ್ಷ್ಮಣ ದೇವಸ್ಥಾನ ಕ್ಕೆ ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡರಾದ ಗುಂಜೂರು ಆರ್. ಶ್ರೀನಿವಾಸರೆಡ್ಡಿ ಭೇಟಿ ನೀಡಿ ಭಕ್ತಿಪೂರ್ವಕವಾಗಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ಗ್ರಾಮದ ಹಿರಿಯರು ಹಾಗೂ ಭಕ್ತರು ಆತ್ಮೀಯವಾಗಿ ಸ್ವಾಗತಿ ಸಿದರು. ಬಳಿಕ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆ, ಅರ್ಚನೆಗಳು ನೆರವೇರಿಸ ಲಾಯಿತು. ಈ ವೇಳೆ ಅವರು ಕ್ಷೇತ್ರದ ಜನರ ಆರೋಗ್ಯ, ಶಾಂತಿ, ಸಮೃದ್ಧಿ ಹಾಗೂ ಅಭಿವೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.
ಇದನ್ನೂ ಓದಿ: Bagepally News: ಮಾ.25ರಂದು ಬೆಂಗಳೂರಿನ ಫ್ರಿಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸರೆಡ್ಡಿ ಅವರು, ಧಾರ್ಮಿಕ ನಂಬಿಕೆಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಹೇಳಿದರು. ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವುದು ಅವಶ್ಯಕವಾಗಿದೆ. ಸೇವೆಯೇ ತಮ್ಮ ಪ್ರಮುಖ ಗುರಿಯಾಗಿದೆ. ಹಾಗೂ ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಲ್ಲ, ಸಮಾಜವನ್ನು ಒಂದಾಗಿ ಕಟ್ಟಿ ಹಿಡಿಯುವ ಶಕ್ತಿಕೇಂದ್ರಗಳಾಗಿವೆ. ದೇವಸ್ಥಾನಗಳಲ್ಲೇ ನೆಮ್ಮದಿ ಸಿಗಲಿದೆ. ದೇವರು ಎಲ್ಲರಿಗೂ ಒಂದೇ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮುರಳಿ, ಸತೀಶ್, ಅಂಜಿನಮ್ಮ, ರಘು, ರಾಜೇಶ್, ಆದಿ, ನಾಗರಾಜು, ರಮೇಶ್, ಶ್ರೀರಾಮರೆಡ್ಡಿ, ವಿವೇಕದ ನರಸಿಂಹಮೂರ್ತಿ ಭೈರೆಡ್ಡಿ, ನಾಗರಾಜು, ಗಿರೀಶ್, ಅರವಿಂದ್ ನಾರಾಯಣಸ್ವಾಮಿ, ನರಸಿಂಹ ಸೇರಿದಂತೆ ಗ್ರಾಮಸ್ಥರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಯುವಕರು ಭಾಗವಹಿಸಿದ್ದರು.