ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shidlaghatta News: ಗುರುಗಳ ಆಶೀರ್ವಾದವೇ ಬದುಕಿನ ದೊಡ್ಡ ಸಂಪತ್ತು: ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ವಿ. ಶ್ರೀನಿವಾಸ್, ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಿದಾಗ ಶಿಕ್ಷಕರಿಗೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ನಾವು ಸಮಾಜದಲ್ಲಿ ಇಂದು ಕಾಣುತ್ತಿರುವ ಯಶಸ್ಸಿನ ಹಿಂದೆ ಸಾಮಾನ್ಯ ಜನರ ಪರಿಶ್ರಮ ಅಡಗಿದೆ. ಕಾರ್ಮಿಕರು ಮತ್ತು ಕೂಲಿ ವರ್ಗದವರ ತೆರಿಗೆ ಹಣದಿಂದಲೇ ಶಿಕ್ಷಣ ಪಡೆದು ಬೆಳೆಯುತ್ತಿರುವು ದನ್ನು ಯಾರೂ ಮರೆಯಬಾರದು

ಶಿಡ್ಲಘಟ್ಟ,: ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ 2005-06ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸನ್ಮಾನ ಸಲ್ಲಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ವಿ.ಶ್ರೀನಿವಾಸ್, ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಿದಾಗ ಶಿಕ್ಷಕರಿಗೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ನಾವು ಸಮಾಜದಲ್ಲಿ ಇಂದು ಕಾಣುತ್ತಿರುವ ಯಶಸ್ಸಿನ ಹಿಂದೆ ಸಾಮಾನ್ಯ ಜನರ ಪರಿಶ್ರಮ ಅಡಗಿದೆ. ಕಾರ್ಮಿಕರು ಮತ್ತು ಕೂಲಿ ವರ್ಗದವರ ತೆರಿಗೆ ಹಣದಿಂದಲೇ ಶಿಕ್ಷಣ ಪಡೆದು ಬೆಳೆಯುತ್ತಿರುವು ದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಪೊಲೀಸ್ ಬಲ ಬಳಸಿ ಹೋರಾಟ ಹತ್ತಿಕ್ಕುವುದು ಸಂವಿಧಾನಕ್ಕೆ ಮಾಡುವ ದ್ರೋಹ : ಭಾಸ್ಕರ್ ಅಂಕಾಲಮಡುಗು ಶಿವಾರೆಡ್ಡಿ

ಶಿಕ್ಷಕಿ ಎಸ್.ಎನ್.ಲತಾ ಮಾತನಾಡಿ, ಸಮಾಜದಿಂದ ಪಡೆಯುವುದಷ್ಟೇ ಅಲ್ಲ, ಸಮಾಜಕ್ಕೆ ಹಿಂತಿ ರುಗಿ ಏನಾದರೂ ಒಳ್ಳೆಯ ಕೊಡುಗೆ ನೀಡಬೇಕು. ಉತ್ತಮ ವ್ಯಕ್ತಿತ್ವ ಮತ್ತು ಸೇವಾಭಾವದ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ವಿ. ನಾಗರಾಜ್, ಎಂ.ಪಿ. ಜೀವಂದರ್, ವೆಂಕಟರಾಜು, ಕಾರ್ಯಕ್ರಮ ಸಂಯೋಜಕ ವಕೀಲ ಲಕ್ಷ್ಮೀ ನರಸಿಂಹ, ವಿಜಯ್ ಕುಮಾರ್, ಶೆಟ್ಟಹಳ್ಳಿ ಚಂದ್ರು, ಆನಂದ್, ನಾಗರಾಜ್, ಕೇಶವಮೂರ್ತಿ, ಮಹೇಶ್, ಶುಭ, ಶ್ವೇತ ಜಯಲಕ್ಷ್ಮಿ, ಜಯಸುಧಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.