ಗೌರಿಬಿದನೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಅವರನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ‘ಹಳ್ಳಿ ಗುಗ್ಗು’ ಎಂದು ಸಂಬೋಧಿಸಿರುವುದು ಖಂಡನೀಯ. ಈ ಹೇಳಿಕೆ ಕೇವಲ ಕುಮಾರಸ್ವಾಮಿ ಅವರಿಗೆ ಮಾಡಿದ ಅವಮಾನವಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ರೈತಾಪಿ ಜನರ ಬುದ್ಧಿವಂತಿಕೆ, ಸ್ವಾಭಿಮಾನ ಹಾಗೂ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ತಾಲೂಕು ಜೆಡಿಎಸ್(JDS) ಅಧ್ಯಕ್ಷ ಸಿ. ಮಂಜುನಾಥ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಾಚರಣೆ ವಿಚಾರವಾಗಿ ಕುಮಾರಸ್ವಾಮಿ ಅವರು ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸು ತ್ತಿದ್ದಾರೆ. ಇದಕ್ಕೆ ಸಮರ್ಪಕ ಉತ್ತರ ನೀಡುವ ಬದಲು ಗೃಹ ಸಚಿವರು ವೈಯಕ್ತಿಕ ಟೀಕೆಗಳಿಗೆ ಇಳಿದಿರುವುದು ಸರಿಯಲ್ಲ. ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ಗಳನ್ನು ನೀಡುವ ಮೂಲಕ ರಾಜಕೀಯ ವಾತಾವರಣವನ್ನು ಹಾಳು ಮಾಡಬಾರದು ಎಂದು ಟೀಕಿಸಿದರು.
ಇದನ್ನೂ ಓದಿ: Gauribidanur News: ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರ: ಮಾರ್ಕೆಟ್ ಮೋಹನ್ ಆಕ್ರೋಶ
ರೈತಾಪಿ ವರ್ಗ ದೇಶದ ಬೆನ್ನೆಲುಬಾಗಿದ್ದು, ಗ್ರಾಮೀಣ ಜನರ ಪರಿಶ್ರಮದಿಂದಲೇ ನಗರಗಳ ಬದುಕು ಸಾಗುತ್ತಿದೆ. ಬೋರ್ವೆಲ್ಗಳಲ್ಲಿ ನೀರಿಲ್ಲದಿದ್ದರೂ ಬಿಸಿಲು, ಮಳೆ ಎನ್ನದೆ ಭೂಮಿಯನ್ನು ನಂಬಿ ಕೃಷಿ ಮಾಡುವ ರೈತರ ಶ್ರಮವನ್ನು ಮರೆಯಬಾರದು. ಪರಿಶ್ರಮಪಡುವ ಜನರನ್ನು ‘ಹಳ್ಳಿ ಗುಗ್ಗು’ ಎಂಬ ಪದದಿಂದ ಅವಮಾನಿಸುವುದು ಖಂಡನೀಯ ಎಂದರು.
ಹಳ್ಳಿಗಳ ಜನರ ಬದುಕು, ಕಷ್ಟಗಳು ಹಾಗೂ ಕೃಷಿ ಕ್ಷೇತ್ರದ ಸವಾಲುಗಳ ಅರಿವಿಲ್ಲದೆ ಮಾತನಾಡು ವುದು ಸೂಕ್ತವಲ್ಲ. ರೈತರು ಮತ್ತು ಗ್ರಾಮೀಣ ಜನರ ಬಗ್ಗೆ ಮಾತನಾಡುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತಿನ ಮೇಲೆ ಹಿಡಿತ ಹೊಂದಿರಬೇಕು. ಗ್ರಾಮೀಣ ಜನರ ಗೌರವಕ್ಕೆ ಧಕ್ಕೆ ತಂದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.