ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

H D Kumaraswamy: ರಾಜ್ಯದಲ್ಲಿ 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ: ಜೆಕೆ ಕೃಷ್ಣಾರೆಡ್ಡಿ

ದೇಶ, ವಿದೇಶಗಳ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದು. ಗ್ರಾಮೀಣ ಭಾಗದ ಕುರಿ ಗ್ರಾಹಕರೂ ಕೂಡ ಮೊಬೈಲ್ ಹೊಂದಿದ್ದು ವಿಶ್ವದ ಕ್ಷಣ ಕ್ಷಣದ ಮಾಹಿತಿ ಯನ್ನು ಪಡೆಯುತ್ತಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು. ಬೂತ್ ಮಟ್ಟದ ವರೆಗೂ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ತಲುಪಬೇಕು. ಕಾರ್ಯಕರ್ತರು ಸೋಲಿನಿಂದ ಧೃತಿಗೆಡಬಾರದು

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 2028ಕ್ಕೆ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡು ವುದು ಜೆಡಿಎಸ್ ಪಕ್ಷದ ಗುರಿಯಾಗಿದೆ ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ತಿಳಿಸಿದರು.

ನಗರದ ಜೆ.ಕೆ.ಭವನದಲ್ಲಿ ಪಕ್ಷದಿಂದ ಕಾರ್ಯಕರ್ತರಿಗಾಗಿ "ಸಾಮಾಜಿಕ ಜಾಲತಾಣದ'ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ತಾಂತ್ರಿಕ ಯುಗದ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ ಅತ್ಯಂತ ಪ್ರಭಾವಿ ಮಾಧ್ಯಮವಾಗಿದೆ. ಕಾರ್ಯಕರ್ತರು ಸಂಘಟಿತರಾಗಿ ಸಾಮಾಜಿಕ ಜಾಲ ತಾಣವನ್ನು ಬಳಸಿ ಕೊಂಡು ಮತದಾರರ ಮನೆ ಮನೆಯನ್ನು ತಲುಪಬೇಕು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಹಾಗೂ ದೇವೇಗೌಡ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಮಾಡಿದ್ದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಸಾಮಾಜಿಕ ಜಾಲತಾಣ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: HD Kumaraswamy: ಮೈಶುಗರ್ ಶಾಲೆ ಅಭಿವೃದ್ಧಿಗೆ 10 ಕೋಟಿ ರೂ. ಶೀಘ್ರ ರಿಲೀಸ್‌- HDK ಭರವಸೆ

ದೇಶ, ವಿದೇಶಗಳ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದು. ಗ್ರಾಮೀಣ ಭಾಗದ ಕುರಿ ಗ್ರಾಹಕರೂ ಕೂಡ ಮೊಬೈಲ್ ಹೊಂದಿದ್ದು ವಿಶ್ವದ ಕ್ಷಣ ಕ್ಷಣದ ಮಾಹಿತಿ ಯನ್ನು ಪಡೆಯುತ್ತಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು,ಬೂತ್ ಮಟ್ಟದ ವರೆಗೂ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ತಲುಪಬೇಕು. ಕಾರ್ಯಕರ್ತರು ಸೋಲಿನಿಂದ ಧೃತಿಗೆಡಬಾರದು. 

ಸೋಲು ಗೆಲುವು ಸಾಮಾನ್ಯ, ಕಾರ್ಯಕರ್ತರು ಸದಾ ಜಾಗರೂಕರಾಗಿರಬೇಕು ಎಂದರು.

ರಾಜ್ಯದಲ್ಲಿ ದೇವೇಗೌಡರು 1979 ರಲ್ಲಿ 200 ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ದೇವೇಗೌಡರು ಸಹ ಹೊಳೆನರಸೀಪುರ ಮತ್ತು ಕನಕಪು ಎರಡೂ ಕಡೆಯಿಂದ ಸ್ಪರ್ಧಿಸಿದ್ದರು. ದೇವೇಗೌಡರು ಎರಡು ಕಡೆ ಸೋತರು,200 ಜನ ಅಭ್ಯರ್ಥಿಗಳಲ್ಲಿ ಕೇಲವ ಇಬ್ಬರು ಮಾತ್ರ ಜಯಗಳಿಸಿದರು.ಬೇರೆ ಯಾರಾ ದರೂ ಆಗಿದ್ದರೆ ರಾಜಕೀಯಕ್ಕೆ ಸಲಾಂ ಹೊಡೆದು ಮನೆಯಲ್ಲಿ ಕೂರುತ್ತಿದ್ದರು. ಗೌಡರು ಧೃತಿಗೆಡ ಲಿಲ್ಲ 1991ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು ಎಂದು ಕಾರ್ಯ ಕರ್ತರನ್ನು ಹುರಿದುಂಬಿಸಿದರು.

ರಾಜ್ಯದ ನೀರಾವರಿ ಯೋಜನೆಗಳನ್ನು ರೂಪಿಸಿ ಹೆಚ್ಚು ಅನುದಾನ ಕೊಡಿಸಿರುವ ಏಕೈಕ ವ್ಯಕ್ತಿ ದೇವೇಗೌಡ. ನೀರಾವರಿ ಸಚಿವರಾಗಿ,ಮುಖ್ಯಮಂತ್ರಿಯಾಗಿ,ಪ್ರಧಾನ ಮಂತ್ರಿಯಾಗಿ ಲಕ್ಷಾಂತರ ಎಕರೆಗೆ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹೊರತಂದಿರುವ ಪುಸ್ತಕದಲ್ಲೂ ದೇವೇಗೌಡರ ಯೋಜನೆಗಳನ್ನು ಉಲ್ಲೇಖ ಮಾಡಿದ್ದಾರೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಸಹ 2006 ರಲ್ಲಿ ಮತ್ತು 2018 ರಲ್ಲಿ ಮುಖ್ಯಮಂತ್ರಿಯಾದರು.ರಾಜ್ಯದ ಇತಿಹಾಸದಲ್ಲಿ ಅತಿ ಕಡಿಮೆ ಸಾಲ ಮಾಡಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿ, ಸಾಲಮನ್ನಾ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಈ ಎಲ್ಲ ಕಾರ್ಯಕ್ರಮ ಗಳನ್ನು ಮತದಾರರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ಚಂದನ್ ಮಾತ ನಾಡಿ, ಮುಂಬರುವ ಚುನಾವಣೆಗಳನ್ನು ಗಮನಿಸಿ ಕಾರ್ಯಕರ್ತರನ್ನು ಸಂಘಟನೆಯಲ್ಲಿ ತೊಡಗಿಸಿ ಕೊಂಡು ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿದೆ. ಕಾರ್ಯಕರ್ತರಿಗೆ ಪ್ರೇರಣೆ, ಡಿಜಿಟಲ್ ಸದಸ್ಯತ್ವ ಅಭಿಯಾನದ ಮಹತ್ವವನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗಿ ಜನ ಸಾಮಾನ್ಯರನ್ನು ಸಂಪರ್ಕಿಸುವ ಕಾರ್ಯ ಕ್ರಮಗಳ ಕುರಿತು ತಿಳಿಸಿದರು.

ಪಕ್ಷದ ಸ್ಥಳೀಯಮಟ್ಟದ ಎಲ್ಲ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.