ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾತು ಕೊಟ್ಟರು… ರಸ್ತೆ ಮಂಜೂರು ಮಾಡಿಸಿದರು! ಯರ್ರನಾಗೇನಹಳ್ಳಿಯ ದಶಕಗಳ ಕನಸು ನನಸಾಗಿಸಿದ ಶಾಸಕ ಪ್ರದೀಪ್ ಈಶ್ವರ್

ಯರ್ರನಾಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಬಹುದಿನಗಳ ರಸ್ತೆ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದರು. ದೇವಾಲಯದ ಬಳಿ ಗ್ರಾಮಸ್ಥರೊಂದಿಗೆ ಕುಳಿತು ಅವರ ಅಹವಾಲು ಆಲಿಸಿದ್ದ ಶಾಸಕ ಪ್ರದೀಪ್ ಈಶ್ವರ್, ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೆಲವೇ ತಿಂಗಳಲ್ಲಿ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ‘ಕೊಟ್ಟ ಮಾತು ಉಳಿಸಿಕೊಂಡ ಶಾಸಕ’ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿಕ್ಕಬಳ್ಳಾಪುರ: ‘ಜನರ ಸಮಸ್ಯೆ ಆಲಿಸುವುದಷ್ಟೇ ಅಲ್ಲ, ಪರಿಹಾರ ಕಲ್ಪಿಸುವುದೇ ಜನಪ್ರತಿನಿಧಿ ಯ ಜವಾಬ್ದಾರಿ’ ಎಂಬುದನ್ನು ಶಾಸಕ ಪ್ರದೀಪ್ ಈಶ್ವರ್ ಅಯ್ಯರ್(MLA Pradeep Eshwar Ayyar) ಮತ್ತೊಮ್ಮೆ ಸಾಬೀತು ಪಡಿಸಿದ್ದು, ತಾಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರ್ರನಾಗೇನಹಳ್ಳಿ ಗ್ರಾಮದ ದಶಕಗಳ ರಸ್ತೆ ಬೇಡಿಕೆಗೆ ಸ್ಪಂದಿಸಿ ₹60 ಲಕ್ಷ ವೆಚ್ಚದ ಸುಸಜ್ಜಿತ ಸಿಸಿ ರಸ್ತೆ ನಿರ್ಮಾಣಕ್ಕೆ ಗುರುವಾರ ಗುದ್ದಲಿಪೂಜೆ ನೆರವೇರಿಸಿದ್ದಾರೆ.

ಯರ್ರನಾಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಬಹುದಿನಗಳ ರಸ್ತೆ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದರು. ದೇವಾಲಯದ ಬಳಿ ಗ್ರಾಮಸ್ಥರೊಂದಿಗೆ ಕುಳಿತು ಅವರ ಅಹವಾಲು ಆಲಿಸಿದ್ದ ಶಾಸಕ ಪ್ರದೀಪ್ ಈಶ್ವರ್, ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೆಲವೇ ತಿಂಗಳಲ್ಲಿ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ‘ಕೊಟ್ಟ ಮಾತು ಉಳಿಸಿಕೊಂಡ ಶಾಸಕ’ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗ್ರಾಮದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಯರ್ರನಾಗೇನಹಳ್ಳಿಯಿಂದ ಎಸ್.ಗೊಲ್ಲಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹60 ಲಕ್ಷ ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ರಸ್ತೆ ನಿರ್ಮಾಣದಿಂದ ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಂಚಾರ ಸಮಸ್ಯೆ ಸೇರಿದಂತೆ ಗ್ರಾಮಸ್ಥರ ಹಲವು ವರ್ಷಗಳ ಸಂಕಷ್ಟಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ.

ಇದನ್ನೂ ಓದಿ: MLA Pradeep Eshwar: ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ: ಶಾಸಕ ಪ್ರದೀಪ್ ಈಶ್ವರ್

ಹಿಂದೆ ಹಲವು ಬಾರಿ ಮನವಿ ಸಲ್ಲಿಸಿದರೂ ರಸ್ತೆ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಆದರೆ ಪ್ರದೀಪ್ ಈಶ್ವರ್ ಅವರು ಗ್ರಾಮಕ್ಕೆ ಬಂದು ನಮ್ಮ ಸಮಸ್ಯೆ ಕೇಳಿದರು; ರಸ್ತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಇಂದು ಅದೇ ಮಾತಿನಂತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಇದು ನಮಗೆ ಕೇವಲ ರಸ್ತೆ ಅಲ್ಲ, ಶಾಸಕರ ಮೇಲಿನ ವಿಶ್ವಾಸಕ್ಕೆ ಸಿಕ್ಕಿರುವ ಉತ್ತರ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ದರು.

ಸ್ಥಳೀಯ ಮುಖಂಡ ನಾಗೇಶ್ ರೆಡ್ಡಿ ಮಾತನಾಡಿ, ಯರ್ರನಾಗೇನಹಳ್ಳಿ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಶಾಸಕರು ಜನರ ಸಮಸ್ಯೆಯನ್ನು ನೇರವಾಗಿ ಆಲಿಸಿ, ರಸ್ತೆ ನಿರ್ಮಾಣದ ಭರವಸೆ ನೀಡಿದ್ದರು. ಇದೀಗ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಿರುವುದು ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.

‘ನಮ್ಮ ಊರು–ನಮ್ಮ ಶಾಸಕ’ ಕಾರ್ಯಕ್ರಮದ ಮೂಲಕ ಗ್ರಾಮಗಳಿಗೆ ತೆರಳಿ ಜನರ ನಡುವೆ ಕುಳಿತು ಅಹವಾಲು ಆಲಿಸುವ ಮೂಲಕ ಸಮಸ್ಯೆಗಳನ್ನು ಅರಿಯುತ್ತಿರುವ ಶಾಸಕ ಪ್ರದೀಪ್ ಈಶ್ವರ್, ಸಾಧ್ಯವಾದಷ್ಟು ಬೇಗ ಅವುಗಳಿಗೆ ಪರಿಹಾರ ಒದಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಮಹಿಳೆಯರು ಮಾತನಾಡಿ, ಶಾಸಕರ ಅವಧಿಯಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳು ಗ್ರಾಮಕ್ಕೆ ತಲುಪುತ್ತಿವೆ. ಮಹಿಳೆಯರಿಗೆ ಮಾಸಿಕ ₹2,000 ಸೇರಿದಂತೆ ಹಲವು ಯೋಜನೆಗಳ ಪ್ರಯೋಜನ ದೊರೆಯುತ್ತಿದೆ. ಇದೀಗ ಬಹುದಿನಗಳ ರಸ್ತೆ ಬೇಡಿಕೆಯೂ ಈಡೇರಿರುವುದು ಸಂತಸ ತಂದಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಶಾಸಕರಿಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಹಾರೈಸಿ ದರು.

ಯರ್ರನಾಗೇನಹಳ್ಳಿಯ ಅಭಿವೃದ್ಧಿಗೆ ಸಿಸಿ ರಸ್ತೆ ಕಾಮಗಾರಿ ಹೊಸ ಮುನ್ನುಡಿಯಾಗಿದ್ದು, ಗ್ರಾಮಸ್ಥರ ದಶಕಗಳ ನಿರೀಕ್ಷೆ ಸಾಕಾರಗೊಳ್ಳುವಂತಾಗಿದೆ. ‘ಭರವಸೆ ನೀಡಿದ ಶಾಸಕ–ಭರವಸೆ ಈಡೇರಿಸಿದ ಶಾಸಕ’ ಎಂಬ ಮಾತು ಗ್ರಾಮದಲ್ಲಿ ಕೇಳಿಬರುತ್ತಿದೆ.