ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಕೂಡ ಉತ್ತಮ ಕಾರ್ಯ: ಆರ್.ನರಸಿಂಹಮೂರ್ತಿ

ಗ್ರಾ ಪಂ. ಮಾಜಿ ಅಧ್ಯಕ್ಷ ಎಸ್.ಅಂಜನಪ್ಪನವರು ಮಾತನಾಡಿ, ಶ್ರೀಯುತ ನರಸಿಂಹಮೂರ್ತಿ ರವರು ಇದೇ ಗ್ರಾಮದಲ್ಲಿ ಹುಟ್ಟಿದವರಾಗಿದ್ದು, ತನ್ನ ಹುಟ್ಟೂರಿನ ಬಗ್ಗೆ ಹೆಚ್ಚಿನ ಅಭಿಮಾನ ಹೊಂದಿದ್ದಾರೆ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳಿಗೆ ,ದೇಗುಲಗಳಿಗೆ, ಶಾಲೆಗಳಿಗೆ, ಬಡ ಬಗ್ಗರಿಗೆ ಹಾಗೂ ಇತರೆ ಸೇವಾ ಕಾರ್ಯಗಳಿಗೆ ವಿಶೇಷ ಕೊಡುಗೆ ನೀಡಿದ್ದಾರೆಂದು ತಿಳಿಸಿ ಅವರ ಸೇವಾ ಭಾವನೆಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಚಿಂತಾಮಣಿ: ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ನೀಡುವುದು ಕೂಡ ಬಹಳ ಉತ್ತಮ ಕಾರ್ಯವಾಗಿದೆ ಎಂದು ಬಿಎಸ್ಎನ್ಎಲ್(BSNL) ನ ನಿವೃತ್ತ ಹಿರಿಯ ಅಧಿಕಾರಿ ಆರ್.ನರಸಿಂಹಮೂರ್ತಿ ತಿಳಿಸಿದರು. 

ತಾಲೂಕಿನ ದೊಡ್ಡಗಂಜೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಟಿ-ಶರ್ಟ್'ಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಮಂದಿ ಬಡ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದು ಅವರ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಸಹಕರಿಸಬೇಕಾಗಿದೆ ಎಂದು ನುಡಿದರು. ಮುಂದಿನ ದಿನಗಳಲ್ಲಿ ಈ ಶಾಲೆಗೆ ಹೆಚ್ಚಿನ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. 

ಇದನ್ನೂ ಓದಿ: Chinthamani News: ಜು.11ರಂದು ಬೆಂಗಳೂರಿಗೆ ಚಿಂತಾಮಣಿಯಿಂದ ಬಸ್ ವ್ಯವಸ್ಥೆ; ಸರ್ಕಾರಿ ನೌಕರರಿಗೆ ಆರ್. ಅಶೋಕ್ ಕುಮಾರ್ ಕರೆ

ಗ್ರಾ ಪಂ. ಮಾಜಿ ಅಧ್ಯಕ್ಷ ಎಸ್. ಅಂಜನಪ್ಪನವರು ಮಾತನಾಡಿ, ಶ್ರೀಯುತ ನರಸಿಂಹಮೂರ್ತಿ ರವರು ಇದೇ ಗ್ರಾಮದಲ್ಲಿ ಹುಟ್ಟಿದವರಾಗಿದ್ದು, ತನ್ನ ಹುಟ್ಟೂರಿನ ಬಗ್ಗೆ ಹೆಚ್ಚಿನ ಅಭಿಮಾನ ಹೊಂದಿದ್ದಾರೆ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳಿಗೆ, ದೇಗುಲಗಳಿಗೆ, ಶಾಲೆಗಳಿಗೆ, ಬಡ ಬಗ್ಗರಿಗೆ ಹಾಗೂ ಇತರೆ ಸೇವಾ ಕಾರ್ಯಗಳಿಗೆ ವಿಶೇಷ ಕೊಡುಗೆ ನೀಡಿದ್ದಾರೆಂದು ತಿಳಿಸಿ ಅವರ ಸೇವಾ ಭಾವನೆಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. 

ಶಾಲೆಯ ಮುಖ್ಯ ಶಿಕ್ಷಕರಾದ ಎಂ ನಾರಾಯಣರೆಡ್ಡಿ, ಎಂಪಿಸಿಎಸ್ ಮಾಜಿ ಕಾರ್ಯದರ್ಶಿ ಕೆ ಆರ್. ನಾರಾಯಣಸ್ವಾಮಿ,ನಿವೃತ್ತ ಶಿಕ್ಷಕರಾದ ಎನ್.ಮುನಿಸ್ವಾಮಿ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಹಿತ ವಚನ ಹೇಳಿದರು. 

ದಾನಿಗಳಾದ ನರಸಿಂಹಮೂರ್ತಿ ರವರನ್ನು ಶಾಲೆಯ ವತಿಯಿಂದ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಜಿ ಸಿ. ಜಯರಾಮರೆಡ್ಡಿ, ಎಂಪಿಸಿಎಸ್ ನಿರ್ದೇಶಕರಾದ ವಿ .ಮುನಿರೆಡ್ಡಿ, ವಸತಿ ನಿಲಯದ ಮೇಲ್ವಿಚಾರಕಿಯಾದ ಪ್ರೇಮ, ಶಾಲೆಯ ಬೋಧಕ ಸಿಬ್ಬಂದಿಯವರು, ಎಸ್‌ಡಿಎಂಸಿ ಯವರು, ಪೋಷಕರು ಉಪಸ್ಥಿತರಿದ್ದರು.