ಚಿಕ್ಕಬಳ್ಳಾಪುರ: ನನ್ನ ಹೆಸರು ರಾಜಣ್ಣ ಕೆ,ಆರ್. ಕಾಕಲಚಿಂತೆ ಗ್ರಾಮದವನು. ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಪೆರೇಸಂದ್ರ ಭಾಗ ದಿಂದ ನಿರ್ದೇಶಕ ಸ್ಥಾನದಿಂದ ಸ್ಪರ್ಧೆ ಮಾಡಿದ್ದೇನೆ. ಈ ಹಿಂದೆ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿದ್ದು ಕಡಿಮೆ ಅಂತರದಿಂದ ಸೋತಿದ್ದೆ. ಅಲ್ಲಿಂದ ಈವರೆಗೆ ಯಾವ ಸ್ಥಳೀಯ ಚುನಾವಣೆಯೂ ನಡೆಯದಿದ್ದ ಕಾರಣ ಸ್ಪರ್ಧೆ ಮಾಡಲು ಆಗಿರಲಿಲ್ಲ. ಈಗ ಅಂತಹ ಅವಕಾಶ ಬಂದಿದ್ದು ಕಾಂಗ್ರೆಸ್ ಮುಖಂಡರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಸುಧಾಕರ್(M.C. Sudhakar) ಸೇರಿ ನನ್ನನ್ನು ಚುನಾವಣೆಗೆ ನಿಲ್ಲುವಂತೆ ಆಯ್ಕೆ ಮಾಡಿದ್ದಾರೆ. ಇವರೆಲ್ಲರ ಆಶೀರ್ವಾದವಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಪೆರೇಸಂದ್ರ ಕ್ಷೇತ್ರದ ಚಿಮುಲ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಾಜಣ್ಣ(K.R.Rajanna) ತಿಳಿಸಿದರು.
ನಗರದ ಚಿಮುಲ್ ಆಡಳಿತ ಭವನದ ಎದುರು ಮಾಧ್ಯಮದೊಂದಿಗೆ ಮಾತನಾಡಿದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆ ಸಂಬಂಧ ಉಮೇದುವಾರಿಕೆ ವಾಪಸ್ಸು ಪಡೆಯಲು ಶನಿವಾರ ಅಂತಿಮ ದಿನವಾಗಿತ್ತು. ಈ ದಿನವೇ ಕಣದಲ್ಲಿರುವ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ಮತ್ತು ಚಿನ್ಹೆ ನೀಡಲಾಗಿದೆ. ಅದರಂತೆ ನನ್ನ ಕ್ರಮಸಂಖ್ಯೆ೦೨ ಮತ್ತು ಚಿನ್ಹೆ ಫ್ರೆಷರ್ ಕುಕ್ಕರ್ ಆಗಿದೆ. ಪೆರೇಸಂದ್ರ ಭಾಗದ ಮತದಾರರು ದಯವಿಟ್ಟು ನನಗೆ ಸರಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟರೆ ಒಳ್ಳೆಯ ರೀತಿಯಲ್ಲಿ ಹಾಲು ಉತ್ಪಾದಕರ ಹಿತಕಾಯಲು ಶ್ರಮಿಸಲಾವುದು ಎಂದು ಹೇಳಿದರು.
ಇದನ್ನೂ ಓದಿ: Chimul Election: ಜಿಲ್ಲಾ ಹಾಲು ಸಹಕಾರ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ 44 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ
ರಾಜ್ಯದ ಕಾಂಗ್ರೆಸ್ ಸರಕಾರದ ಜನಪರ ಆಡಳಿತ, ಬಡಬಗ್ಗರಲ್ಲದೆ ಎಲ್ಲಾ ಜಾತಿಜನವರ್ಗ ಗಳಿಗೆ ಸೇರಿದಂತೆ ಒದಗಿಸಿರುವ ಗ್ಯಾರೆಂಟಿ ಯೋಜನೆಗಳು ಚಿಮುಲ್ ಚುನಾವಣೆಯಲ್ಲಿ ಮತದಾರರ ಕೈಹಿಡಿಯಲಿವೆ.ಈ ಕ್ಷೇತ್ರದಿಂದ ನನ್ನನ್ನು ಗೆಲ್ಲಿಸಿಕೊಂಡು ಬಂದರೆ ಕ್ಷೀರ ಕ್ರಾಂತಿಯನ್ನು ನಾನೂ ಕೂಡ ಮಾಡಲು ಶ್ರಮಿಸುತ್ತೇನೆ.ನಾನೊಬ್ಬ ವಕೀಲನಾಗಿ ಕೋಆಪರೇಟೀವ್ ಕ್ಷೇತ್ರದ ಸಮಸ್ಯೆಗಳನ್ನು ಕೇಸುಗಳು ಬಂದಾಗ ಅರಿಯುತ್ತಿದ್ದೇನೆ ಎಂದರು.
ಉಸ್ತುವಾರಿ ಸಚಿವರ ನಂಬಿಕೆಯನ್ನು ನಾನು ಉಳಿಸಿಕೊಂಡು ಬರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಈ ಕ್ಷೇತ್ರದಲ್ಲಿ ಅಡ್ಡಗಲ್ ಶ್ರೀಧರ್ ಅವರನ್ನು ನಿಲ್ಲಿಸಲು ತಯಾರಿ ನಡೆದಿತ್ತು. ಈ ಸಂದರ್ಭದಲ್ಲಿ ನನ್ನ ಹೆಸರು ಶಿಫಾರಸು ಮಾಡಿದ್ದಾರೆ.ಕಾಂಗ್ರೆಸ್ ಪಕ್ಷದ ಡೆಲಿಗೇಟ್ಸ್ ಇದ್ದೇ ಇದ್ದಾರಲ್ಲಾ, ಅವರೆಲ್ಲಾ ಮನಸ್ಸು ಮಾಡಿದರೆ ನನ್ನ ಗೆಲುವು ಖಚಿತ ಎಂದರು.
ನಾನೊಬ್ಬ ವಿದ್ಯಾವಂತ ಸ್ಪರ್ಧಿ ಆಗಿದ್ದೇನೆ.ನನ್ನ ಮೇಲೆ ವಿಶ್ವಾಸವಿಟ್ಟು ಮತ ಹಾಕಿದರೆ ಈ ಕ್ಷೇತ್ರದ ಸುಧಾರಣೆ ಆಗಲಿದೆ.ನನ್ನ ಎದುರಾಳಿ ಎಷ್ಟೇ ಪ್ರಬಲರೇ ಆಗಿರಲಿ ಆಬಗ್ಗೆ ನನಗೆ ಅಂಜಿಕೆಯಿಲ್ಲ.ಚುನಾವಣೆಯನ್ನು ಚುನಾವಣೆ ರೀತಿ ಎದುರಿಸಲು ಮುಂದಾಗುತ್ತೇನೆ ಎಂದರು.