ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MP Dr.K.Sudhakar: ಸಚಿವ ಸ್ಥಾನಕ್ಕೆ ಲಾಬಿ ಮಾಡುವ ಪೈಕಿ ನಾನಲ್ಲ: ಸಂಸದ ಡಾ.ಕೆ.ಸುಧಾಕರ್ ಹೇಳಿಕೆ

ನಮ್ಮ ಪ್ರಧಾನ ಮಂತ್ರಿಗಳಿಗೆ ಯಾರು ಕೆಲಸ ಮಾಡುತ್ತಿದ್ದಾರೆ. ಪಾರ್ಲಿಮೆಂಟ್ ಕೆಲಸ ಏನು ಮಾಡು ತ್ತಾರೆ? ಸಮಿತಿಗಳಲ್ಲಿ ಏನು ಕೆಲಸ ಮಾಡುತ್ತಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗೆ ತಿಳಿದಿದೆ. ಇದನ್ನು ಇಟ್ಟುಕೊಂಡು ಆಯಾ ಸಂದರ್ಭಕ್ಕೆ ತಕ್ಕಂತೆ ಯಾರನ್ನು ತೆಗೆಯಬೇಕು? ಯಾರನ್ನು ಸಚಿವ ರನ್ನು ಮಾಡಬೇಕು ಎಂಬುದು ಅವರಿಗಿರುವ ಪರಮೋಚ್ಛ ಅಧಿಕಾರ ಎಂದರು.

ಚಿಕ್ಕಬಳ್ಳಾಪುರ: ಕೇಂದ್ರ ಸರಕಾರದ ಸಚಿವ ಮಂಡಳ ಪುನಾರಚನೆಯಲ್ಲಿ ನಿಮಗೆ ಸಚಿವ ಸ್ಥಾನ ದೊರೆಯುವ ವಿಶ್ವಾಸ ಇದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದ ಸುಧಾಕರ್ ನಾನು ನನ್ನ ಜೀವನದಲ್ಲಿ ಎಂದೂ ಕೂಡ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಪ್ರಧಾನ ಮಂತ್ರಿಗಳು ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿಕೊಂಡು ಹೋಗುವುದಷ್ಟೇ ನನ್ನ ಮುಂದಿರುವ ಜವಾಬ್ದಾರಿಯಾಗಿದೆ ಎಂದು ಸಂಸದ ಸುಧಾಕರ್(MP Dr.K.Sudhakar) ಹೇಳಿದರು.

ತಾಲೂಕಿನ ಪೆರೇಸಂದ್ರ ಗ್ರಾಮದ ಸ್ವಗೃಹದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.

ನಮ್ಮ ಪ್ರಧಾನ ಮಂತ್ರಿಗಳಿಗೆ ಯಾರು ಕೆಲಸ ಮಾಡುತ್ತಿದ್ದಾರೆ. ಪಾರ್ಲಿಮೆಂಟ್ ಕೆಲಸ ಏನು ಮಾಡು ತ್ತಾರೆ? ಸಮಿತಿಗಳಲ್ಲಿ ಏನು ಕೆಲಸ ಮಾಡುತ್ತಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗೆ ತಿಳಿದಿದೆ. ಇದನ್ನು ಇಟ್ಟುಕೊಂಡು ಆಯಾ ಸಂದರ್ಭಕ್ಕೆ ತಕ್ಕಂತೆ ಯಾರನ್ನು ತೆಗೆಯಬೇಕು? ಯಾರನ್ನು ಸಚಿವರನ್ನು ಮಾಡಬೇಕು ಎಂಬುದು ಅವರಿಗಿರುವ ಪರಮೋಚ್ಛ ಅಧಿಕಾರ ಎಂದರು.

ಇದನ್ನೂ ಓದಿ: MP Dr K Sudhakar: ಗೌರಿಬಿದನೂರಿನ ಅಭಿವೃದ್ಧಿಗೆ ಕೇಂದ್ರದಿಂದ ಸಾವಿರಾರು ಕೋಟಿ ಅನುದಾನ: ಸಂಸದ ಡಾ.ಕೆ.ಸುಧಾಕರ್.

ನಿಖಿಲ್ ಬರುವುದಿಲ್ಲ !!

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ 2028ರಲ್ಲಿ ಎನ್‌ಡಿಎ ಕೂಟದ ಒಮ್ಮೊತದ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅವರು ಯಾಕೆ ಒಂದೊಂದು ಚುನಾವಣೆಯಲ್ಲಿ ಒಂದೊಂದು ಕ್ಷೇತ್ರಕ್ಕೆ ಹೋಗುತ್ತಾರೆ? ನನ್ನ ಪ್ರಕಾರ, ಅವರು ರಾಮನಗರ ಜಿಲ್ಲೆ ಬಿಟ್ಟು ಬರುವುದಿಲ್ಲ ಎಂದರು.

ನೀರು ಕುಡಿಯುತ್ತಾರೆ!!
ಅಧಿಕಾರ ದುರ್ಬಳಕೆ ಮಾಡಿಕೊಂಡು ಸಕಾರಣವಿಲ್ಲದೆ ಬಂಧಿಸಿ ಅಮಾಯಕರನ್ನು ಜೈಲಿಗೆ ಹಾಕಿಸಿ ರುವುದು ಸರಿಯಲ್ಲ. ಸುಮಂತ್ ಸೇರಿ ಎಲ್ಲಾ 9 ಮಂದಿಯ ಕುಟುಂಬದ ಜತೆ ನಾವಿದ್ದೇವೆ. ಅವರ ಬಿಡುಗಡೆಗೆ ಬೇಕಾದ ಕಾನೂನು ಬೆಂಬಲ ನೀಡಲಾಗಿದೆ.ಯಾರೂ ಅಧೈರ್ಯಗೊಳ್ಳಬೇಕಿಲ್ಲ ಎಂದ ಅವರು ಇವರ ಮೇಲೆ ಕ್ರಮ ತೆಗೆದುಕೊಂಡು ಜೈಲಿಗೆ ಕಳಿಸಿದ್ದಾರಲ್ಲಾ? ಅವರು ಮುಂದಿನ ದಿನಗಳಲ್ಲಿ ಅವರು ಮಾಡಿರುವ ಊಟಕ್ಕೆ ನೀರು ಕುಡಿಯುತ್ತಾರೆ. ನೀವೂ ನೋಡ್ತೀರಿ, ನಾನೂ ಕೂಡ ಆ ಸಮಯಕ್ಕೆ ಕಾಯುತ್ತೇನೆ. ಅವರು ಪಾತಾಳದಲ್ಲಿರಲಿ ಆಕಾಶದಲ್ಲಿರಲಿ ಬಿಡುವ ಮಾತೇಯಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾಲವೇ ಉತ್ತರ ನೀಡಲಿದೆ !!!

ನಿಮ್ಮ ಮಾತು ದ್ವೇಷ ರಾಜಕಾರಣದ ಮುನ್ಸೂಚನೆ ಎನ್ನಬಹುದೇ ಸರ್ !! ಎಂದು ಮಾಧ್ಯಮ ದವರ ಪ್ರಶ್ನೆಗೆ ಉತ್ತರಿಸಿದ ಅವರು ದ್ವೇಷ ಅಲ್ಲ, ಇವತ್ತು ಜಾತಿ ಜಾತಿಗಳ ನಡುವೆ ನಾವು ಯಾವೊತ್ತು ಕೂಡ ಕಿಚ್ಚನ್ನು ಹತ್ತಿಸೋ ಕೆಲಸ ಮಾಡಿಲ್ಲ. ಕೇವಲ 3 ವರ್ಷಗಳಲ್ಲಿ ಬಂದು ಈರೀ ಯೆಲ್ಲಾ ಮಾಡುತ್ತಿರುವುದು ನೋಡಿ ಸಹಿಸಲಾಗದು. ನಮ್ಮ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಒಂದು ಇತಿಹಾಸವಿದೆ. ಒಂದು ಚರಿತ್ರೆಯಿದೆ. ಸುಸಂಸ್ಕೃತರು ಆಳಿದ ನಾಡಿದು. ಇಲ್ಲಿ ಈರೀಯಲ್ಲಿ ಮಾಡಿ, ಎಲ್ಲ ಯುವಕರನ್ನು ಜೈಲಲ್ಲಿ ಹಾಕಿಸಿ, ಇನ್ನೂ 100-150 ಮಂದಿಯನ್ನು ಹುಡುಕಿಸುತ್ತಿದ್ದಾರೆ. ಇದು ಸರಿಯಿ ದೆಯಾ? ತಪ್ಪು ಮಾಡಿದವರಿಗೆ ಶಿಕ್ಷೆ ಆಗಬಾರದಾ? ಇವೆಲ್ಲಕ್ಕೂ ಕಾಲವೇ ಉತ್ತರ ಕೊಡುತ್ತೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಹೆದ್ದಾರಿ ಅಂಡರ್ ಪಾಸ್‌ಗಳಲ್ಲಿ ನೀರು ನಿಲುಗಡೆ ಆಗುತ್ತಿರುವ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಅವರು ಎಲ್ಲೆಲ್ಲಿ ಈ ಸಮಸ್ಯೆಯಿದೆಯೋ ಅದನ್ನು ಸರಿಪಡಿಸುವ  ಕೆಲಸ ಮಾಡಲಾಗುವುದು ಎಂದರು.

ಖೇದಕರ!!!!
ಮೆಡಿಕಲ್ ಕಾಲೇಜು ಉದ್ಘಾಟನೆಯಾಗಿ 3 ವರ್ಷಗಳೇ ಕಳೆದಿವೆ.ಇದಕ್ಕೆ ಸರಿಸುಮಾರು 800 ಕೋಟಿ ವೆಚ್ಚವಾಗಿದೆ.ಆದರೂ ಇಲ್ಲಿ ಆಸ್ಪತ್ರೆ ತೆರೆಯಲಾಗದಿರುವುದು ನೋವಿನ ಸಂಗತಿ. ಮಾಧ್ಯಮ ಮಿತ್ರರು ಯಾಕೆ ಮೌನವಹಿಸಿರುವುದು ಖೇಧಕರ ಸಂಗತಿ ಎಂದು ಬೇಸರಿಸಿದ ಅವರು ಈ ಸರಕಾರ ಕ್ಕೆ ಅದನ್ನು ಜನಸೇವೆಗೆ ಲೋಕಾರ್ಪಣೆ ಮಾಡುವ ಯೋಗ್ಯತೆಯಿಲ್ಲ ಎಂದು ಕಿಡಿಕಾರಿದರು. ಇಷ್ಟಾದರೂ ಇದರ ಬಗ್ಗೆ ಯಾರೂ ಕೂಡ ಚಕಾರ ಎತ್ತುತ್ತಿಲ್ಲ ಯಾಕೆ?ಎಂದು ಪ್ರಶ್ನಿಸಿದ ಅವರರು ನಮ್ಮ ಅವಧಿಯಲ್ಲಿ ಹೀಗೆ ಆಗಿದ್ದಿದ್ದರೆ ಪಶ್ನೆಗಳ ಸುರಿಮಳೆ ಹರಿಸುತ್ತಿದ್ದರು ಎಂಬುದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ ಎಂದರು.

ಅನ್ಯಾಯವಾಗಲು ಬಿಡೆ!!

ಖಾರಾ ಮಸಾಲೆ ಅರೆಯುವ ಸಂಸ್ಕೃತಿ ನನ್ನ ಜೀವನದಲ್ಲಿ ಮಾಡೋದಿಲ್ಲ. ನನ್ನ ನಂಬಿದವರನ್ನು ಎಂದೂ ಕೂಡ ಕೈಬಿಡುವುದಿಲ್ಲ.ನಂಬಿದವರಿಗೆ ಆಗಿರುವ ಅನ್ಯಾಯ ಸರಿಪಡಿಸುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ. ನನಗೆ ನಷ್ಟವಾದರೂ ಪರವಾಗಿಲ್ಲ ನನ್ನ ಜತೆಯಿದ್ದವರಿಗೆ ಅನ್ಯಾಯ ವಾಗಬಾರದು. ಈ ವಿಚಾರದಲ್ಲಿ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಹೈಕಮಾಂಡ್‌ ನಿಂದ ನನಗೂ ಒಂದಷ್ಟು ನಿಬಂಧನೆಗಳಿವೆ. ಆದರೆ ನನ್ನ ಸಹಚರರಿಗೆ ಪಕ್ಷದ ನಿಷ್ಠಾವಂತ ಕಾರ್ಯ ಕರ್ತರಿಗೆ ಅನ್ಯಾಯ ಆಗಿರೋದನ್ನು ನೋಡಿ ಸುಮ್ಮನೆ ಕೂರುವುದಿಲ್ಲ. ಅವರಿಗೆ ನ್ಯಾಯ ಕೊಡಿಸು ವವರೆಗೆ ಪಕ್ಷದ ಒಳಗೇ ಹೋರಾಟ ಮುಂದುವರೆಸುತ್ತೇನೆ. ಅದರಲ್ಲಿ ಅದರಲ್ಲಿ ಎರಡು ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಸದ ಶಾಸಕರ ನಡುವೆ ಹೊಂದಾಣಿಕೆ ಮುಖ್ಯ !!

ಶಾಸಕ ವಿಶ್ವನಾಥ್ ವಿರುದ್ಧ ಭಿನ್ನಾಭಿಪ್ರಾಯ ಮೂಡಿಸಬೇಕು, ಪಿತೂರೀ ಮಾಡಬೇಕು ಎಂದೇನಿಲ್ಲ. ಯಲಹಂಕ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಮೂಡಬೇಕು. ಅವರ ಜತೆ ಇರುವವರು ಕೂಡ ಪಕ್ಷದ ಜತೆ, ಸಂಸದರ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ನಮ್ಮವರು ಕೂಡ ಹೊಂದಾಣಿಕೆ ಮಾಡಿಕೊಳ್ಳಬೇಕು. ಎಲ್ಲರನ್ನೂ ಒಂದೇ ರೀತಿ ನಾವು ನೋಡಬೇಕು. ನಾವಿಬ್ಬರೂ ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ಎಂಎಲ್‌ಎ ಕಡೆಯವರು ಬೇರೆ ಅಲ್ಲ, ಎಂ.ಪಿ ಕಡೆಯವರು ಬೇರೆ ಅಲ್ಲ. ನಾವೆಲ್ಲಾ ಬಿಜೆಪಿ ಕುಟುಂಬಕ್ಕೆ ಸೇರಿದವರು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವೆಲ್ಲಾ ಒಂದೇ ಎಂಬ ಭಾವದಲ್ಲಿ ನಡೆಯುವ ಅಗತ್ಯವಿದೆ. ಅದನ್ನು ಶಾಸಕರು ಕೂಡ ಅರ್ಥ ಮಾಡಿಕೊಳ್ಳಬೇಕು ಎಂದರು.

ಆಗ್ನೇಯ ಪದವೀಧರರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ.ನಾನು ವೈ.ಎ.ನಾರಾಯಣಸ್ವಾಮಿ ಪಕ್ಷದ ಎಲ್ಲಾ ಮುಖಂಡರು ಸೇರಿ ಮಧುಗಿರಿ ಯಿಂದ ಕೋಲಾರದವರೆಗೆ ಸಂಚರಿಸಿ ಹೆಗಲಿಗೆ ಹೆಗಲು ಕೊಟ್ಟು ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು. ವೈ.ಎ.ನಾರಾಯಣಸ್ವಾಮಿ ಅವರು ಕೂಡ ಅಭ್ಯರ್ಥಿಯಾಗಲು ಸಮರ್ಥರಿದ್ದರು. ಆದರೆ ಪಕ್ಷದ ಮಾತಿಗೆ ಬೆಲೆ ಕೊಟ್ಟು ಸುರೇಶ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪಕ್ಷವು ಮುಂದಿನ ದಿನಗಳಲ್ಲಿ ಅವರಿಗೆ ಕೂಡ ಒಳ್ಳೆಯ ಅವಕಾಶ ಕಲ್ಪಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಪಕ್ಷವು ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಲಿ, ಈಗಿರುವವರನ್ನೇ ಮುಂದುವರೆಸಲಿ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವನ್ನು ಗೌರವಿಸುವವನು ನಾನು.ಯಾರೇ ಆಗಿರಲಿ ಅವರಿಗೆ ಕೊಡುವ ಗೌರವ ಸಹಕಾರದಲ್ಲಿ ಎಳ್ಳಷ್ಟೂ ಲೋಪವಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ದರು.

ಜು.11ರಿಂದ ವಿದ್ಯಾರ್ಥಿವೇತನ ವಿತರಣೆ !!

ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿತರಣೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್ ಕೊಡುವ ಕಾರ್ಯಕ್ರಮ ಒಂದೇ ಕಡೆ ಕೊಡಲು ಸಮಸ್ಯೆ ಆಗುವ ಕಾರಣ ಕಾರ್ಯಕ್ರಮ ಮುಂದೂಡಲಾಗಿತ್ತು. ಇದಕ್ಕೆ ಪರಿಹಾರ ಹುಡುಕಿರುವ ನಾವು ವಿದ್ಯಾರ್ಥಿವೇತನ ಬಯಸಿ ಬಂದಿ ರುವ 23 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೆ ಮಾಡುತ್ತಿದ್ದು ಕ್ಷೇತ್ರದ 4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಾದ ಮಂಡಿಕಲ್, ತಿಪ್ಪೇನಹಳ್ಳಿ, ಮಂಚೇನಹಳ್ಳಿ, ನಂದಿ, ಚಿಕ್ಕಬಳ್ಳಾಪುರ ನಗರ ಹೀಗೆ ಪ್ರತ್ಯೇಕವಾಗಿ ವಿತರಣೆ ಮಾಡಲು ಯೋಜನೆ ರೂಪಿಸಿದೆ. ಜು.11ರಂದು ಮಂಡಿಕಲ್ ಹೋಬಳಿ ವಿದ್ಯಾರ್ಥಿಗಳಿಗೆ ಶಾಂತಾ ಶಾಲಾವರಣದಲ್ಲಿ ವಿತರಣೆ ಮಾಡಲಾಗುವುದು. ಜು.12ರಂದು ಚಿಕ್ಕಬಳ್ಳಾಪುರ ನಗರದಲ್ಲಿ ವಿತರಣೆ ನಡೆಯಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್ಲವು ಸರಿಯಿದೆ ಎಂದು ಹೇಳುವುದಿಲ್ಲ.ನಮ್ಮ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ತಗ್ಗಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದ ಅವರು ನಾಗರೀಕರು ಕೂಡ ರಸ್ತೆ ನಿಯಮಗಳನ್ನು ಪಾಲಿಸಿ ಜಾಗೃತೆಯಿಂದ ವಾಹನ ಚಾಲನೆ ಮಾಡಬೇಕು. ತನ್ಮೂಲಕ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಅಗತ್ಯ ಎಂದರು.