ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ 30 ತಿಂಗಳ ಕಾಲ ಅಭಿವೃದ್ಧಿಯ ಪರ್ವದತ್ತ ಸಾಗಿದ್ದೇನೆ: ಮಂಜುನಾಥ್

ನಮ್ಮ ನಾಯಕರಾದ ಸಂಸದ ಡಾ.ಕೆ.ಸುಧಾಕರ್ ಅವರ ಬೆಂಬಲದಲ್ಲಿ 30 ತಿಂಗಳ ಹಿಂದೆ ಅಧ್ಯಕ್ಷ ನಾಗಿ ನೇಮಕವಾದ. ಅಂದಿನಿಂದ ಈತನಕ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಿಡಿಒ ಮತ್ತು ಕಾರ್ಯದರ್ಶಿಗಳ ಒಡನಾಟದಲ್ಲಿ ಪಂಚಾಯಿತಿಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ತೃಪ್ತಿ ಇದೆ

ಚಿಕ್ಕಬಳ್ಳಾಪುರ: ಸಂಸದ ಡಾಕ್ಟರ್ ಕೆ.ಸುಧಾಕರ್(MP Dr. K. Sudhakar) ಆಶೀರ್ವಾದದಿಂದ ಹೊಸ ಹುಡ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ 30 ತಿಂಗಳ ಕಾಲ ಅಭಿವೃದ್ಧಿಯ ಪರ್ವದತ್ತ ಸಾಗಿದ್ದೇನೆ ಎಂಬ ತೃಪ್ತಿ ಇದೆ ಎಂದು ಅಧ್ಯಕ್ಷ ಮಂಜುನಾಥ್ ಅಭಿಪ್ರಾಯ ಪಟ್ಟರು. 

ತಾಲೂಕಿನ ಹೊಸ ಹುಡ್ಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಆಡಳಿತ ಮಂಡಳಿ ಯ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು 

ನಮ್ಮ ನಾಯಕರಾದ ಸಂಸದ ಡಾ.ಕೆ.ಸುಧಾಕರ್ ಅವರ ಬೆಂಬಲದಲ್ಲಿ 30 ತಿಂಗಳ ಹಿಂದೆ ಅಧ್ಯಕ್ಷ ನಾಗಿ ನೇಮಕವಾದ. ಅಂದಿನಿಂದ ಈತನಕ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಿಡಿಒ ಮತ್ತು ಕಾರ್ಯದರ್ಶಿಗಳ ಒಡನಾಟದಲ್ಲಿ ಪಂಚಾಯಿತಿಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ತೃಪ್ತಿ ಇದೆ ಎಂದರು 

ನನ್ನ ಅವಧಿಯಲ್ಲಿ 19 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಪಂಚಾಯಿತಿಯ ಎಲ್ಲಾ ನೌಕರ ವರ್ಗ, ಮೇಲಾಗಿ ದಕ್ಷ ಮತ್ತು ಪ್ರಾಮಾಣಿಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯ ದರ್ಶಿ ಒಟ್ಟುಗೂಡಿ ಕೆಲಸ ಮಾಡಿದ್ದರಿಂದ ಪಂಚಾಯಿತಿಯ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು. 

ಇದನ್ನೂ ಓದಿ: Chikkaballapur News: ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ರೆಡ್ಡಿ ಆಯ್ಕೆ

ನನ್ನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಪಂಚಾಯಿತಿಗಳ ಅಭಿವೃದ್ಧಿಗೆ 15ನೇ ಹಣಕಾಸು ಯೋಜನೆ ಯಲ್ಲಿ ಎರಡು ಬಾರಿ ಮಾತ್ರ ಅನುದಾನ ನೀಡಿದ್ದು  ಬಿಟ್ಟರೆ ಬೇರೇನೂ ಮಾಡಿಲ್ಲ.

ಉಳಿದಂತೆ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಟ್ಟು ನಿಟ್ಟಾಗಿ ನೀರು ಮತ್ತು ಮನೆ ಕಂದಾಯ ವಸೂಲಿ ಮಾಡಿ ಆ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಿದ್ದೇವೆ. ಕಂದಾಯ ವಸೂಲಿ ಮಾಡಲು ಬಿಲ್ ಕಲೆಕ್ಟರ್ ಜಲಗಾರ ಮತ್ತು ಕಾರ್ಯದರ್ಶಿಗಳು ಬೆಳಿಗ್ಗೆ ಎಂಟು ಗಂಟೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಲಾಗಿದೆ.ಹೀಗೆ ಕರ ವಸೂಲಿ ಮಾಡಿದ್ದ ರಿಂದಲೇ ನಮ್ಮ ಪಂಚಾಯಿತಿ ಅಭಿವೃದ್ಧಿಗೆ ಹೆಸರಾಯಿತು ಎಂದರು. 

hosahudya 2

ಅಣ್ಣ ತಮ್ಮಂದಿರಿಗಿಂತ ಹೆಚ್ಚಿನ ರೀತಿಯಲ್ಲಿ ಕಾರ್ಯದರ್ಶಿ ಮತ್ತು ಪಿಡಿಒ ಸಹಕಾರ ನನಗೆ ಇತ್ತು ಎಂದು ಹೇಳಲು ಸಂತೋಷವಾಗುತ್ತಿದೆ. 30 ತಿಂಗಳ ಇವರ ಒಡನಾಟವನ್ನ ಬಿಟ್ಟು ಹೋಗಲು ಸಂಕಟವಾಗುತ್ತಿದೆ ಎಂದು ಅಧಿಕಾರಿ ವರ್ಗದ ಸೇವೆಯನ್ನು ಸ್ಮರಿಸಿದರು.

ಗೊಂದಲವಿಲ್ಲದ ಪಂಚಾಯಿತಿಯನ್ನು ನೋಡಲು ಸಾಧ್ಯವಿಲ್ಲ. ಅದರಂತೆ ನಾನು ಕೂಡ ಅಧಿಕಾರ ಸ್ವೀಕರಿಸಿದಾಗ ಇದ್ದಂತಹ ಗೊಂದಲಗಳನ್ನು ನಮ್ಮ ನಾಯಕರಾದ ಡಾ.ಕೆ.ಸುಧಾಕರ್ ಎಲ್ಲವನ್ನು ಬಗೆಹರಿಸಿದ್ದಾರೆ. 

ನಾವು 11 ಮಂದಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿದ್ದೇವೆ. ಎಂಟು ಮಂದಿ ಬೇರೆಯವರಿದ್ದಾರೆ. ನಮ್ಮಲ್ಲಿ ಒಬ್ಬ ಖಾಲಿ ಡಬ್ಬ ರೀತಿಯ ನಾಯಕರಿದ್ದಾರೆ ಅವರಿಂದಲೇ ಒಂದಷ್ಟು ಗೊಂದಲಗಳು ಏರ್ಪಟ್ಟಿದ್ದವು. ಇವು ನಮಗೆ ಲೆಕ್ಕಕ್ಕೆ ಇಲ್ಲದವು ಎಂದರು 

ನಮ್ಮ ಅವಧಿಯಲ್ಲಿ ಮೈಲುಗಲ್ಲು ಎನ್ನುವ ಹಾಗೆ ಪಂಚಾಯಿತಿಯನ್ನು ನವೀಕರಣ ಮಾಡಿಸ ಲಾಗಿದೆ. ಕೋವಿಡ್ ಕಾಲದಿಂದ ಈತನಕ ಇದ್ದ ಜಲಗಾರರ ವೇತನವನ್ನು ಇವತ್ತಿನ ತನಕ ಪೂರ್ಣ ವಾಗಿ ಪಾವತಿಸಲಾಗಿದೆ. ಆ ಮೂಲಕ ಆ ಕುಟುಂಬಗಳಲ್ಲಿ ಸಂತೋಷ ಬೆಳಗುವಂತೆ ಮಾಡಿದ್ದೇನೆ. 

ಒಟ್ಟಾರೆ, ನನ್ನ ಅವಧಿಯಲ್ಲಿ ಪಂಚಾಯಿತಿ ಅಭಿವೃದ್ಧಿಯತ್ತ ಸಾಗಿದೆ ಎಂಬ ತೃಪ್ತಿ ನನಗಿದೆ ಎಂದರು.