ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿಲ್ಲೆಗೆ 6449 ಕೋಟಿ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ 753.76 ಕೋಟಿ ಅನುದಾನ ತಂದಿದ್ದೇನೆ: ಸಂಸದ ಡಾ.ಕೆ.ಸುಧಾಕರ್

ತಾವು ಸಂಸದರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಯೋಜನೆ ಗಳಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ರೂ.6,449 ಕೋಟಿ ಹಾಗೂ ಚಿಕ್ಕಬಳ್ಳಾ ಪುರ ವಿಧಾನಸಭಾ ಕ್ಷೇತ್ರಕ್ಕೆ ರೂ.753.76 ಕೋಟಿ ಅನುದಾನ ತಂದಿರುವುದಾಗಿ ಸಂಸದ ಡಾ.ಕೆ. ಸುಧಾಕರ್(MP Dr K Sudhakar) ತಿಳಿಸಿದರು

ಪೆರೇಸಂದ್ರ ಗ್ರಾಮದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು.

ಚಿಕ್ಕಬಳ್ಳಾಪುರ: ತಾವು ಸಂಸದರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ರೂ.6,449 ಕೋಟಿ ಹಾಗೂ ಚಿಕ್ಕಬಳ್ಳಾ ಪುರ ವಿಧಾನಸಭಾ ಕ್ಷೇತ್ರಕ್ಕೆ ರೂ.753.76 ಕೋಟಿ ಅನುದಾನ ತಂದಿರುವುದಾಗಿ ಸಂಸದ ಡಾ.ಕೆ. ಸುಧಾಕರ್(MP Dr K Sudhakar) ತಿಳಿಸಿದರು. ರಾಜ್ಯ ಸರ್ಕಾರ ಜಿಲ್ಲೆಗೆ ಎಷ್ಟು ಅನುದಾನ ನೀಡಿದೆ ಎಂಬುದರ ಬಗ್ಗೆ ಶ್ವೇತಪತ್ರ ಪ್ರಕಟಿಸಲಿ ಎಂದು ಸವಾಲು ಹಾಕಿದರು.

ಪೆರೇಸಂದ್ರದಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ, ಕೆಸಿ ವ್ಯಾಲಿ ಹಾಗೂ ಎಚ್.ಎನ್. ವ್ಯಾಲಿ ತೃತೀಯ ಹಂತದ ಸಂಸ್ಕರಣಾ ಯೋಜನೆಗಳನ್ನು ರಾಜ್ಯ ಸರ್ಕಾರ ಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Chikkaballapur News: 1800 ಶಾಲೆ-ಕಾಲೇಜುಗಳಿಗೆ ವಿಸ್ತರಣೆ; 35 ಸಾವಿರಕ್ಕೂ ಹೆಚ್ಚು ಸಸಿ ನೆಡುವ ಗುರಿ

ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಬೆಂಗಳೂರು–ಹೈದರಾಬಾದ್ ದಶಪಥ ಕಾರಿಡಾರ್‌ಗೆ ರೂ.2800 ಕೋಟಿ ಡಿಪಿಆರ್, ಎನ್‌ಎಚ್–44ರ ದೊಡ್ಡಪೈಯಲಗುರ್ಕಿ ಸಾತ್ವಿ ಕ್ರಾಸ್ ಮೇಲ್ಸೇತುವೆ ಹಾಗೂ ಸರ್ವಿಸ್ ರಸ್ತೆಗೆ ರೂ.52 ಕೋಟಿ, ಗ್ರಾಮೀಣಾಭಿವೃದ್ಧಿಗೆ ರೂ.360 ಕೋಟಿ, ಹೈನುಗಾರಿಕೆ ಮೂಲ ಸೌಕರ್ಯಕ್ಕೆ ರೂ.80 ಕೋಟಿ, ಪಿಎಂ ಶ್ರೀ ಹಾಗೂ ಸಮಗ್ರ ಶಿಕ್ಷಣ ಯೋಜನೆಗೆ ರೂ.14.14 ಕೋಟಿ, ಅಟಲ್ ಭೂಜಲ ಯೋಜನೆಗೆ ರೂ.10.50 ಕೋಟಿ, ಮಾವು ಬೆಳೆಗಾರರಿಗೆ ರೂ.6.90 ಕೋಟಿ, ನಂದಿ ರೈಲ್ವೆ ಮ್ಯೂಸಿಯಂಗೆ ರೂ.5.50 ಕೋಟಿ ಹಾಗೂ ಮಾತೃ ವಂದನಾ ಯೋಜನೆಯಡಿ ರೂ.17,168 ಗರ್ಭಿಣಿಯರಿಗೆ ರೂ.8.38 ಕೋಟಿ ನೆರವು ನೀಡಲಾಗಿದೆ ಎಂದು ವಿವರಿಸಿದರು.

ಮುದ್ರಾ ಯೋಜನೆಯಡಿ 37,612 ಫಲಾನುಭವಿಗಳಿಗೆ ರೂ.531.65 ಕೋಟಿ, ವಿಶ್ವಕರ್ಮ ಯೋಜನೆ ಯಡಿ 3428 ಫಲಾನುಭವಿಗಳಿಗೆ ರೂ.25.44 ಕೋಟಿ ಸಾಲ, ಪಿಎಂ ಪರಿಹಾರ ನಿಧಿಯಿಂದ 59 ಮಂದಿಗೆ ರೂ.1.47 ಕೋಟಿ ಹಾಗೂ 11 ಎಫ್‌ಪಿಒಗಳಿಗೆ ತಲಾ ರೂ.1 ಕೋಟಿ ನೀಡಲಾಗಿದೆ ಎಂದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಜಲಜೀವನ್ ಮಿಷನ್ ಅಡಿಯಲ್ಲಿ 233 ಗ್ರಾಮಗಳಿಗೆ ರೂ.165.95 ಕೋಟಿ, ಅಮೃತ್ 2.0 ಯೋಜನೆಯಡಿ ನಗರ ನೀರು ಸರಬರಾಜಿಗೆ 19 ಕೋಟಿ, ರಾಷ್ಟ್ರೀಯ ಹೆದ್ದಾರಿ-69 ಕಾಮಗಾರಿಗೆ ರೂ.398.48 ಕೋಟಿ, ರಾಗಿ ಖರೀದಿ ಯೋಜನೆಯಡಿ ರೂ.1368 ರೈತರಿಗೆ ರೂ.13.56 ಕೋಟಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ರೂ.16,369 ರೈತ ಕುಟುಂಬಗಳಿಗೆ 22 ಕಂತುಗಳಲ್ಲಿ ರೂ.80.43 ಕೋಟಿ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ರೂ.2.35 ಕೋಟಿ ನೀಡಲಾಗಿದೆ ಎಂದು ಹೇಳಿದರು.

ಮುದ್ರಾ, ಆಯುಷ್ಮಾನ್ ಭಾರತ್ ಸೇರಿದಂತೆ ಕೇಂದ್ರದ ಯೋಜನೆಗಳಿಂದ ಅಲ್ಪಸಂಖ್ಯಾತರು ಹಾಗೂ ರೈತರಿಗೆ ಹೆಚ್ಚಿನ ಪ್ರಯೋಜನವಾಗಿದ್ದರೂ ಕೇಂದ್ರ ಸರಕಾರ ಮುಸ್ಲಿಂ ವಿರೋಧಿ, ರಾಜ್ಯಕ್ಕೆ ಏನೇನೂ ಅನುದಾನ ಕೊಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ದೂರುವುದು ಅಪಹಾಸ್ಯದಂತಿದೆ ಎಂದು ಅವರು ತಿಳಿಸಿದರು.

*
ಕಳೆದ 3 ವರ್ಷಗಳಿಂದ ರಾಜ್ಯದ ಯೋಜನೆಗಳು ನಮ್ಮ ಜಿಲ್ಲೆಗೆ ಬರಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಇಲ್ಲಿನ ಶಾಸಕರು ಜಾತಿಗಳ ನಡುವೆ ತಂದಿಡುವ ಕೆಲಸ ಮಾಡುತ್ತಾರೆಯೇ ಹೊರತು ಅಭಿವೃದ್ಧಿ ಮಾಡುತ್ತಿಲ್ಲ. ರಚನಾತ್ಮಕವಾಗಿ ಕೆಲಸ ಮಾಡುತ್ತಿಲ್ಲ, ಸರ್ವಾಂಗೀಣ ಪ್ರಗತಿಯನ್ನೂ ಮಾಡುತ್ತಿಲ್ಲ. ಎತ್ತಿನಹೊಳೆ ಯೋಜನೆ ನಮ್ಮ ಜಿಲ್ಲೆಗೆ ಬರುತ್ತದೆ ಎಂಬ ನಿರೀಕ್ಷೆ ಕಡಿಮೆಯಾಗಿದೆ. ಈ ಯೋಜನೆ ಯ ಕಾಮಗಾರಿಗೆ ಬಳಸಿದ ವಿದ್ಯುತ್‌ಗೆ ಬಿಲ್‌ನ್ನು ಕೂಡ ಸರ್ಕಾರ ಪಾವತಿಸಿಲ್ಲ. ಮೊದಲು ಬಿಲ್ ಪಾವತಿ ಮಾಡಿ, ಕಾಮಗಾರಿಯನ್ನು ಚುರುಕುಗೊಳಿಸಬೇಕು. ಎಚ್‌ಎನ್ ವ್ಯಾಲಿ ಹಾಗೂ ಕೆಸಿ ವ್ಯಾಲಿ ತೃತೀಯ ಹಂತದ ಸಂಸ್ಕರಣೆಯ ಯೋಜನೆಯನ್ನು ಕೂಡಲೇ ಜಾರಿ ಮಾಡಬೇಕು. ನಾನು ಶ್ವೇತಪತ್ರದಂತೆ ನನ್ನ ಕೆಲಸದ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದೇನೆ. ಅದೇ ರೀತಿ ರಾಜ್ಯ ಸರ್ಕಾರ ಮಾಹಿತಿ ನೀಡಲಿ ಎಂದು ಸಂಸದ ಡಾ.ಕೆ.ಸುಧಾಕರ್ ಒತ್ತಾಯಿಸಿದರು.

ಈ ವೇಳೆ ಆವುಲಕೊಂಡರಾಯಪ್ಪ, ಹರಿಸ್ಥಳ ಗಿರೀಶ್, ನಿವೃತ್ತ ಪ್ರಾಂಶುಪಾಲ ಡಾ.ಬಿ.ವಿ. ಕೃಷ್ಣ ಮತ್ತಿತರರು ಇದ್ದರು.