ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಹಾಲುಮತ ಸಮುದಾಯದ ಮಕ್ಕಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಿದರೆ ಜಗತ್ತನ್ನು ಬೆಳಗುವರು : ಸಿದ್ಧರಾಮಾನಂದಪುರಿ ಸ್ವಾಮೀಜಿ

ಹಾಲುಮತ ಸಮುದಾಯದ ಮಕ್ಕಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳುವ ಪರಿಪಾಠ ಬಿಡಬೇಕು. ಹೊರಗಿನ ಪ್ರಪಂಚದಲ್ಲಿ ಅವರು ಉತ್ತಮವಾದ ಶಿಕ್ಷಣ ಪಡೆಯಬೇಕು. ಆ ಮೂಲಕ ನಮ್ಮ ಮಕ್ಕಳು ಉದ್ದಿಮೆದಾರರಾಗಿ, ರಾಜಕಾರಣಿಗಳಾಗಿ, ವ್ಯಾಪಾರಿಗಳಾಗಿ ಸಮಾಜವನ್ನು ಮುನ್ನಡೆಸಿ ಅಲ್ಲಿ ಮನೆಯ ಜ್ಯೋತಿಯನ್ನು ಬೆಳಗಬೇಕು. ಸಂಬಂಧಗಳಿಗೆ ನವಚೈತನ್ಯ ನೀಡುವ ಬೀರಪ್ಪನ ಜಾತ್ರೆ ವರ್ಷದಿಂದ ವರ್ಷಕ್ಕೆ ಸುಧಾರಣೆ ಆಗಲಿ

ಹಾಲುಮತ ಸಮುದಾಯದ ಮಕ್ಕಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಲಿ

ಹಾಲುಮತ ಸಮುದಾಯದ ಮಕ್ಕಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಿದರೆ ಜಗತ್ತನ್ನು ಬೆಳಗುವರು  ಎಂದು ಸಿದ್ಧರಾಮಾನಂದಪುರಿ ಸ್ವಾಮೀಜಿ ತಿಳಿಸಿದರು.

Profile Ashok Nayak May 9, 2025 9:18 PM

ಚಿಕ್ಕಬಳ್ಳಾಪುರ : ಹಾಲುಮತ ಸಮಾಜದ ಮಕ್ಕಳಲ್ಲಿ ಎಲ್ಲವನ್ನು ಮೀರಿ ಉತ್ತಮವಾಗಿ ವಿದ್ಯೆ ಕಲಿಯುವ ಸಾಮರ್ಥ್ಯವಿದೆ.ಕೇಂದ್ರಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಮಕ್ಕಳು ಟಾಪರ್ಸ್ಗಳಾಗುತ್ತಿರುವುದೇ ಇದಕ್ಕೆ ಸಾಕ್ಷಿ.ಶಿಕ್ಷಣದಿಂದ ಮಾತ್ರ ಸರ್ವತೋಮುಖ ಸಾಧನೆ ಮಾಡಲು ಸಾಧ್ಯ ಎಂದು ಕನಕ ಗುರುಪೀಠ ಕಲಬುರುಗಿಯ ತಿಂಥಣಿ ಶಾಖಾ ಮಠದ ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮೀಜಿ ತಿಳಿಸಿದರು.

ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಶ್ರೀಬೀರೇಶ್ವರ, ಆನೇದೇವರು, ಚೌಡೇಶ್ವರಿ, ಸಿದ್ದೇದೇವರುಗಳ ಸೇವಾ ಮಂಡಳಿ ಟ್ರಸ್ಟ್ವತಿಯಿಂದ ಮೂರುದಿನಗಳ ಕಾಲ ಏರ್ಪಡಿಸಿರುವ ದೊಡ್ಡ ಜಾತ್ರೆಯ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಹಾಲುಮತ ಸಮುದಾಯದ ಮಕ್ಕಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳುವ ಪರಿಪಾಠ ಬಿಡಬೇಕು. ಹೊರಗಿನ ಪ್ರಪಂಚದಲ್ಲಿ ಅವರು ಉತ್ತಮವಾದ ಶಿಕ್ಷಣ ಪಡೆಯಬೇಕು. ಆ ಮೂಲಕ ನಮ್ಮ ಮಕ್ಕಳು ಉದ್ದಿಮೆದಾರರಾಗಿ, ರಾಜಕಾರಣಿಗಳಾಗಿ, ವ್ಯಾಪಾರಿಗಳಾಗಿ ಸಮಾಜವನ್ನು ಮುನ್ನಡೆಸಿ ಅಲ್ಲಿ ಮನೆಯ ಜ್ಯೋತಿಯನ್ನು ಬೆಳಗಬೇಕು. ಸಂಬಂಧಗಳಿಗೆ ನವಚೈತನ್ಯ ನೀಡುವ ಬೀರಪ್ಪನ ಜಾತ್ರೆ ವರ್ಷದಿಂದ ವರ್ಷಕ್ಕೆ ಸುಧಾರಣೆ ಆಗಲಿ ಎಂದರು.

ಇದನ್ನೂ ಓದಿ: Chikkaballapur News: ಜಂಗಮಕೋಟೆ ಕೈಗಾರಿಕಾ ಪ್ರದೇಶಕ್ಕೆ ಕಂಠಕವಾದ ಸಂಘಟನೆಗಳ ಜಟಾಪಟಿ

ದೇವರಿಗೆ ದೊಡ್ಡವರು ಯಾರೂ ಇಲ್ಲ.ದೊಳ್ಳಾಸುರನಿಗೆ ಮುಕ್ತಿ ನೀಡಿದ್ದು ಬೀರದೇವರು.ಹೀಗಾಗಿ ಡೊಳ್ಳು ನಿರ್ಮಾಣ ಹೇಗೆ ಎಂಬುದು ಬೀರಪ್ಪನ ಪರಂಪರೆಯ ಹೇಳುತ್ತದೆ.ದೇವರ ಹೆಸರಲ್ಲಿ ಎಂದೂ ಮಾಂಸಾಹಾರ ಮಾಡಬೇಡಿ. ಬೀರದೇವರ ಸಂಪ್ರದಾಯ ಅಹಿಂಸೆಯ ಸಂಪ್ರದಾಯ. ಬೀರಪ್ಪ ದೇವರ ಗುಡಿ,ಮೈಲಾರಲಿಂಗ, ರೇವಣಸಿದ್ದೇಶ್ವರರ ಗುಡಿಯಲ್ಲಿ ಮಾಂಸಾಹಾರದ ಎಡೆ ನಡೆಯುವುದಿಲ್ಲ. ಕುರುಬರು ಯಾವುದೇ ಕಾರಣಕ್ಕೂ ಸೋಮವಾರ ಮದ್ಯಪಾನ ಮಾಡುವುದು, ಮಾಂಸಾಹಾರ ಸೇವಿಸುವುದು ಮಾಡಬೇಡಿ.ಬ್ರಾಹ್ಮಣ,ಜೈನ,ಮುಸ್ಲಿಂ ಸಮುದಾಯ ಎಂದೂ ಕೂಡ ಮತಧರ್ಮಗಳನ್ನು ಮರೆಯುವುದಿಲ್ಲ. ಯಾರ ಮನೆಯಲ್ಲಿ ಸಂಪ್ರದಾಯ ಪಾಲಿಸುವರೋ ಅಲ್ಲಿ ಗಲಾಟೆ ಇರಲ್ಲ.ಹೀಗಾಗಿ ನಮ್ಮ ಮಕ್ಕಳಿಗೆ ಸಂಪ್ರದಾಯ ಸಂಸ್ಕಾರ ಕಲಿಸಬೇಕು.ಕಂಬಳಿ ಮೇಲೆ ಕುಳಿತು ಪ್ರಾರ್ಥನೆ ಮಾಡುವುದನ್ನು ಕಲಿಸಿ ಎಂದು ಕರೆ ನೀಡಿದರು.

cbpm8beeredevara (1) ok

ರಾಮ, ಕೃಷ್ಣ,ಹನುಮಂತ,ಗಣಪತಿ ಗೊತ್ತಿಲ್ಲದ ಕಾಲದಿಂದಲೂ ಬೀರದೇವರ ಪರಂಪರೆ ಸ್ಮರಣೆ ಈ ಭೂಮಿ ಮೇಲೆ ಇತ್ತು. ಬೀರಪ್ಪನ ಸಂಪ್ರದಾಯದಿಂದಲೇ ಭೈರವನ ಸಂಪ್ರದಾಯ ಬಂದಿದೆ. ವೀರಭದ್ರನ ಪರಂಪರೆ,ಈರಣ್ಣದೇವರ ಪೂಜೆ,ವಿರುಪಾಕ್ಷ, ಕರಿಸಿದ್ದೇಶ್ವರ ಇವೆಲ್ಲಾ ಪ್ರಾರಂಭವಾಗಿವೆ. ದುಷ್ಟರ ಸಂಹಾರಕ್ಕಾಗಿ ಭೂಮಿ ಮೇಲೆ ಬೀರದವರ ಅವತಾರವಾಗುತ್ತದೆ ಎಂದು ಪುರಾಣಗಳು ಹೇಳುತ್ತಿವೆ.ಉತ್ತರ ಕರ್ನಾಟಕದಲ್ಲಿ ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ ಗುಡಿಗಳಿಗೆ ಮಾತ್ರ ಎಲ್ಲಾ ಸಮುದಾಯದವರೂ ಹೋಗುವ ಅವಕಾಶವಿದೆ.ಬೇರೆ ದೇವಾಲಯಗಳಲ್ಲಿ ಮಡಿ ಪಾಲನೆ ಮಾಡುತ್ತಾರೆ.ನಮ್ಮಲ್ಲಿ ಇದಕ್ಕೆ ಅವಕಾಶವಿಲ್ಲ. ಹೀಗಾಗಿ ಕುರುಬರ ರಕ್ತದಲ್ಲಿ ಮೋಸವಂಚನೆ ಕಡಿಮೆ.ಇವತ್ತಿನ ಕಾಲದಲ್ಲಿ ರಾಜಕಾರಣಕ್ಕೆ ಯೋಗ್ಯರಾಗುವುದು ತುಂಬಾ ಕಷ್ಟ.ಇದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದರು.

ಜಾತಿ ನೋಡಿ ದೇವರ ದರ್ಶನ ಮಾಡೋ ಕಡೆ ನೂಕುನುಗ್ಗಲಿನಲ್ಲಿ ಹೋಗುತ್ತೀರಿ? ಹರಕೆ ಕಟ್ಟುತ್ತೀರಿ? ಅಲ್ಲಿ ದೇವರು ಇರೋದಿಕ್ಕೆ ಸಾಧ್ಯನಾ ಇಲ್ಲವೋ ಗೊತ್ತಿಲ್ಲ.ದೇವರು ಎಲ್ಲಾ ಕಡೆ ಇರುತ್ತಾನೆ ಖರೆ.ಆದರೆ ದರ್ಶನ ಸಿಗಬೇಕಾದರೆ,ದೇವರ ನಿಜವಾದ ಪ್ರೇಮ ಸಿಗಬೇಕೆಂದರೆ ಎಲ್ಲಿ ಜಾತಿ ನೋಡದೆ ದರ್ಶನ ಸಿಗುತ್ತದೋ ಅಂತಹ ಮೈಲಾರಲಿಂಗನ, ಬೀರಪ್ಪನ ಸಣ್ಣದು ಮಾಡಿ ನಮ್ಮಷ್ಟಕ್ಕೆ ನಾವೇ ಸಣ್ಣವರಾಗಿದ್ದೀವಿ.ಇಂತಲ್ಲಿ ಹೋಗಿ ಶರಣು ಮಾಡಿ ಎಂದು ಕರೆ ನೀಡಿದರು.

ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿ ಪ್ರಭಾಕರ್ ಮಾತನಾಡಿ 25 ವರ್ಷಗಳಿಗೆ ಒಮ್ಮೆ ಈ ಜಾತ್ರೆ ನಡೆಯುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ೭ ವರ್ಷಗಳಿಗೆ ಒಮ್ಮೆ ನಡೆಸಿಕೊಂಡು ಬರಲಾಗಿದೆ. ಹಬ್ಬ ಹರಿದಿನ ಜಾತ್ರೆಗಳು ಬೇಕು.ಏಕೆಂದರೆ ಇವಿದ್ದಲ್ಲಿ ಒಂದು ಆಚಾರ,ವಿಚಾರ, ಸಂಪ್ರದಾಯ ಇರಲಿವೆ.ಎಲ್ಲಕ್ಕಿಂತ ಮುಖ್ಯವಾಗಿ ಈ ಸಂಬ್ರಮಗಳು ಸಂಬAಧಗಳನ್ನು ಬೆಸೆಯುತ್ತವೆ.ತಾಂತ್ರಿಕತೆ ಬೆಳೆದಂತೆ ಮನುಷ್ಯ ಸಂಬAಧಗಳು ಕಣ್ಮರೆಯಾಗಿವೆ.ಮನೆಯಲ್ಲಿ ನಾಲ್ಕುಮಂದಿ ಇದ್ದರೆ ಅವರೆಲ್ಲಾ ಮೊಬೈಲ್‌ನಲ್ಲಿ ಮುಳುಗಿ ಮನೆಗೆ ಬಂದ ಅಜ್ಜಿ,ತಾತ ಅತ್ತೆ ಮಾವಂದಿರನ್ನು ಸೌಜನ್ಯದಿಂದ ಮಾತನಾಡಿಸುವುದನ್ನು ಮರೆತಿದ್ದೇವೆ.ಹಿಂದೆ ರಜೆಕೊಟ್ಟರೆ ಹಳ್ಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು.ಆದರಿಂದ ಮಣ್ಣಿಗೇ ಬಿಡುವುದಿಲ್ಲ.ನಾಲ್ಕು ಗೋಡೆಗಳ ನಡುವೆ ಮಕ್ಕಳ ಲೋಕ ವನ್ನು ಕಟ್ಟುತ್ತಿರುವುದು ತುಂಬಾ ಅಪಾಯಕಾರಿ ನಡೆಯಾಗಿದೆ ಎಂದರು.

ದೊಡ್ಡಜಾತ್ರೆಯ ನೆಪದಲ್ಲಿ ಬೀರೇಶ್ವರ ಸಂಪ್ರದಾಯದ ಮಂದಿ ಒಂದೆಡೆ ಸೇರಿರುವುದನ್ನು ನೋಡಲು ಸಂತೋಷವಾಗಲಿದೆ. ಬೀರೇಶ್ವರ ಶ್ರಮಿಕರ ಸಂಸ್ಕೃತಿಯ ದೇವರು.ಕನಕದಾಸ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ಇತಿಹಾಸದಿಂದ ಬಂದವರು ನಾವು.ಅವರ ಇತಿಹಾಸದ ಕೊಂಡಿಗಳು ನಾವು ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಮುಖ್ಯಮಂತ್ರಿಗಳು ಬರಬೇಕಿತ್ತು.ಸಚಿವ ಸಂಪುಟ ಸಭೆ ನಿಗದಿ ಆದಕಾರಣ ಬರಲಾಗಲಿಲ್ಲ.ನನ್ನ ಪರವಾಗಿ ಶುಭಾಶಯ ಹೇಳಿ ಎಂದು ಹೇಳಿ ಅವರ ಪರವಾಗಿ ನನ್ನನ್ನು ಕಳಿಸಿದ್ದಾರೆ.ಬೀರೇದೇವರು ಎಲ್ಲರಿಗೂ ಸನ್ಮಂಗಳ ಉಂಟು ಮಾಡಲಿ ಎಂದು ಮಾತು ಮುಗಿಸಿದರು.

ಈ ಸಂದರ್ಭದಲ್ಲಿ ಹನೂರು ಶಾಸಕರಾದ ಮಂಜುನಾಥ್, ಬೀರೇಶ್ವರ,ಆನೆ ದೇವರು, ಚೌಡೇಶ್ವರಿ, ಸಿದ್ದೇದೇವರ ಸೇವಾ ಮಂಡಳಿ ಟ್ರಸ್ಟ್ ಗೌರವಾಧ್ಯಕ್ಷ ಎಸ್ ಜಗದೀಶ್ ಕುಮಾರ್, ಅಧ್ಯಕ್ಷರಾದ ಎಂ.ಪಿ.ಕೋದಂಡರಾಮಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎಂ ರವೀಂದ್ರನಾಥ್, ಖಜಾಂಚಿ ಎಂ.ಮಹೇಂದ್ರ ಆಂತರಿಕ ಲೆಕ್ಕಪರಿಶೋಧಕರಾದ ಎಸ್.ಕೆ.ನಟರಾಜ್, ಹಿರಿಯ ಉಪಾಧ್ಯಕ್ಷರಾದ ಎಂ.ಎನ್.ನಂಜಪ್ಪ, ಎನ್.ಮುನಿವೀರಪ್ಪ, ಸಿ.ಪಿ.ಕೃಷ್ಣಪ್ಪ, ಲಕ್ಷ್ಮಣ್, ಅಶ್ವಥ್‌ನಾರಾಯಣ್, ಯೋಗೇಶ್‌ಕುಮಾರ್, ಎಚ್.ಎಮ್.ಮುನಿಯಪ್ಪ, ಶಿವಪ್ರಸಾದ್.ಆರ್,  ಆನೆಪ್ಪ, ಎಂ,ಸಿ,ಚಂದ್ರ ಶೇಖರ್, ಎಂ.ಮಹೇಶ್, ಎಸ್.ಡಿ.ನಾರಾಯಣ್, ಎಂ.ಕೃಷ್ಣಮೂರ್ತಿ, ಸಲಹಾ ಸಮಿತಿಯ ವೀರಪ್ಪ.ಬಿ.ಕೃಷ್ಣಪ್ಪ, ಪಿ.ಹನುಮಂತಪ್ಪ, ಎಂ.ಶಿವಕುಮಾರ್, ಜಿ.ಕೆ.ರಾಮಚಂದ್ರ, ಎ. ನಾಗರಾಜ್, ಎನ್.ಟಿ.ಹೇಮಂತ್ ಕುಮಾರ್, ಮುನಿಪಾಪಣ್ಣ, ಆರ್.ರಾಮಣ್ಣ, ವೆಂಕಟರಮಣ ಎ.ಎಂ ನಾರಾ ಯಣ್ ಸೇರಿದಂತೆ ಇನ್ನಿತರರು ಇದ್ದರು.