ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

B N Ravikumar: "2028ರಲ್ಲಿ ಪ್ರದೀಪ್ ಗೆದ್ದರೆ ಅವರ ಮನೆಗೆ ವಾಚ್‌ಮನ್ ಆಗುತ್ತೇನೆ; ಸೋತರೆ ಕುಮಾರಣ್ಣ ಮನೆ ಮುಂದೆ ಕಾವಲು ಕಾಯಲಿ": ಬಿ.ಎನ್.ರವಿಕುಮಾರ್ ಬಹಿರಂಗ ಸವಾಲ್

ಕುಮಾರಸ್ವಾಮಿ ಅವರು ಕೇವಲ ನ್ಯಾಯಾಲಯದ ನೋಟಿಸ್‌ನ್ನು ಪಕ್ಷದ ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊAಡಿದ್ದಾರೆ ಹೊರತು, ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಕುಟುಂಬದ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಿದ್ದು ಸರಿಯಲ್ಲ

ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಚಿಕ್ಕಬಳ್ಳಾಪುರ :ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ(H D Kumaraswamy) ವಿರುದ್ಧ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಮಾಡಿರುವ ಆರೋಪಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್. ರವಿಕುಮಾರ್(B N Ravikumar), ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತೆಯೇ ಬಹಿರಂಗ ಸವಾಲು ಹಾಕಿದ್ದಾರೆ.

"2028ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯ ವಿರುದ್ಧ ಪ್ರದೀಪ್ ಈಶ್ವರ್ ಗೆದ್ದರೆ, ನಾನು ಅವರ ಮನೆ ಮುಂದೆ ವಾಚ್‌ಮನ್ ಆಗಿ ಕೆಲಸ ಮಾಡು ತ್ತೇನೆ. ಅವರು ಸೋತರೆ ಕುಮಾರಣ್ಣ ಮನೆ ಮುಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡಬೇಕು" ಎಂದು ಸವಾಲು ಎಸೆದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರದೀಪ್ ಈಶ್ವರ್ ಶಾಸಕರಾಗಿರುವುದು ಕೇವಲ ಕಾಂಗ್ರೆಸ್ ಮತಗಳಿಂದಲ್ಲ, ಜೆಡಿಎಸ್ ಮತಗಳ ಕಾರಣವೂ ಆಗಿದೆ ಎಂಬುದನ್ನು ಮರೆಯಬಾರದು. ಶಾಸಕರಾಗುವ ಮೊದಲು ನಿಮ್ಮ ಬಳಿ ಎಷ್ಟು ಆಸ್ತಿ ಇತ್ತು? ಈಗ ಎಷ್ಟು ಆಸ್ತಿ ಇದೆ? ಜನರಿಗೆ ಲೆಕ್ಕ ಕೊಡಬೇಕು" ಎಂದು ಒತ್ತಾಯಿಸಿದರು.

ಇದನ್ನೂ ಓದಿ: MLA B N Ravikumar: ಜೂನ್ 20ರೊಳಗೆ ವಾಸವಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ

ಕುಮಾರಸ್ವಾಮಿ ಅವರು ಕೇವಲ ನ್ಯಾಯಾಲಯದ ನೋಟಿಸ್‌ನ್ನು ಪಕ್ಷದ ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊAಡಿದ್ದಾರೆ ಹೊರತು, ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಕುಟುಂಬದ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

"ನಾನು ಓಬಿಸಿ ಎಂದು  ಹೇಳಿಕೊಳ್ಳುವ ನೀವು, ನಿಮ್ಮ ಏಳಿಗೆ ಸಹಿಸಲಾಗುತ್ತಿಲ್ಲ ಎಂದು ಆರೋಪಿ ಸುತ್ತೀರಿ. ಆದರೆ ಬಲಿಜ ಸಮುದಾಯದ ಅನೇಕ ಹಿರಿಯ ನಾಯಕರನ್ನು ನಾನು ಕಂಡಿದ್ದೇನೆ; ಅವರು ಎಂದಿಗೂ ಅಹಂಕಾರದಿAದ ಮಾತನಾಡಿಲ್ಲ.ಪದೇ ಪದೇ ಹೇಳಿಕೊಳ್ಳುವುದು ನೋಡಿದರೆ ನೀವು ಬಲಜಿಗ ಜಾತಿಯವರೋ ಅಲ್ಲವೋ ಎಂಬ ಅನುಮಾನ ಬರುತ್ತದೆ ನಿಮ್ಮನ್ನು ಶಾಸಕ ರನ್ನಾಗಿಸಲು ಜೆಡಿಎಸ್ ಕಾರ್ಯಕರ್ತರ ಶ್ರಮವೂ ಕಾರಣ ಎಂಬುದನ್ನು ಮರೆಯಬೇಡಿ" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಈ ಹೇಳಿಕೆಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್–ಜೆಡಿಎಸ್ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ನೀಡಿವೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್. ರೆಡ್ಡಿ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಜಿಪಂ ಮಾಜಿ ಸದಸ್ಯ ತಾದೂರು ರಘು, ಮಾಜಿ ಪುರಸಭಾ ಸದಸ್ಯ ಸದಾಶಿವ ಸೇರಿದಂತೆ ಹಲವರು ಉಪಸ್ಥಿತರಿದ್ದರು.