ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA Pradeep Eshwar: ಸಾಧಿಸುವ ಛಲದೊಂದಿಗೆ ನಿರಂತರ ಪರಿಶ್ರಮವಿದ್ದಲ್ಲಿ ಗುರಿ ಮುಟ್ಟಲು ಸಾಧ್ಯ: ಶಾಸಕ ಪ್ರದೀಪ್ ಈಶ್ವರ್

ನಮ್ಮ ಸರಕಾರ ಶೀಘ್ರವೇ 56 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದ್ದು ಕ್ಷೇತ್ರದ ವಿದ್ಯಾವಂತ ಯುವಕ ಯುವತಿಯರು ಇದರ ಅನುಕೂಲ ಪಡೆದುಕೊಳ್ಳಲಿ ಎನ್ನುವ ಸದುದ್ದೇಶದಿಂದ ಉಚಿತ ಸ್ಪರ್ಧಾತ್ಮಕ ತರಬೇತಿಗೆ ಚಾಲನೆ ನೀಡಲಾಗಿದೆ. ಪ್ರತಿ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ರ ತನಕ ಅತ್ಯುತ್ತಮ ಉಪನ್ಯಾಸಕರಿಂದ ತರಬೇತಿ ನಡೆಯಲಿದೆ.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆಗೆ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಚುನಾವಣಾ ಪೂರ್ವದಲ್ಲಿ ಕೊಟ್ಟಿದ್ದ ಭರವಸೆಗಳಲ್ಲಿ ಒಂದಾದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮಕ್ಕೆ ಭಾನುವಾರ ಎಂ.ಜಿ.ರಸ್ತೆಯಲ್ಲಿರುವ ಸರಕಾರಿ ಪದವಿ ಕಾಲೇಜಿನಲ್ಲಿ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು.

ನಮ್ಮ ಸರಕಾರ ಶೀಘ್ರವೇ 56 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದ್ದು ಕ್ಷೇತ್ರದ ವಿದ್ಯಾವಂತ ಯುವಕ ಯುವತಿಯರು ಇದರ ಅನುಕೂಲ ಪಡೆದುಕೊಳ್ಳಲಿ ಎನ್ನುವ ಸದುದ್ದೇಶದಿಂದ ಉಚಿತ ಸ್ಪರ್ಧಾತ್ಮಕ ತರಬೇತಿಗೆ ಚಾಲನೆ ನೀಡಲಾಗಿದೆ.ಪ್ರತಿ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ರ ತನಕ ಅತ್ಯುತ್ತಮ ಉಪನ್ಯಾಸಕರಿಂದ ತರಬೇತಿ ನಡೆಯಲಿದೆ. ತರಬೇತಿಯ ದಿನ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಒದಗಿಸಲಾಗುವುದು ಎಂದರು.

ಕೆಎಎಸ್, ಐಎಎಸ್ ಪರೀಕ್ಷೆಗೆ ಪ್ರಾಮಾಣಿಕವಾಗಿ ತರಬೇತಿ ಪಡೆದು ನೋಟ್ಸ್ ಮಾಡಿಕೊಂಡು ಪರೀಕ್ಷೆ ಬರೆದಲ್ಲಿ ಸುಲಭವಾಗಿ ಗುರಿಮುಟ್ಟಬಹುದು.ಇಲ್ಲಿ ತರಬೇತಿ ಪಡೆದ ಅಷ್ಟೂ ಮಂದಿ ತಹಶೀಲ್ದಾರ್, ಎ.ಸಿ.,ಡಿ.ಸಿ ಡಿವೈಎಸ್ಪಿ ಆಗಬಹುದು. ಪ್ರಯತ್ನ ನಮ್ಮದು ಫಲಾಫಲ ನಿಮ್ಮದು. ಪೂರ್ವಭಾವಿ ಪರೀಕ್ಷೆ ಪಾಸಾದ ಅಷ್ಟೂ ಮಂದಿಗೆ ಉತ್ತಮ ತರಬೇತಿ ಕೇಂದ್ರಗಳಲ್ಲಿ ಉಚಿತ ತರಬೇತಿ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: MLA Pradeep Eshwar: 3 ಕೋಟಿ ವೆಚ್ಚದ ನಾಗರಭಾವಿ ದೇವಕೊಂಡಹಳ್ಳಿ ಸಿ.ಸಿ. ರಸ್ತೆ ಕಾಮಗಾರಿಗೆ ಶಾಸಕ ಪ್ರದೀಪ್ ಈಶ್ವರ್ ಅವರಿಂದ ಚಾಲನೆ

ಈ ಮೂರು ವರ್ಷದಲ್ಲಿ ನನ್ನ ಕ್ಷೇತ್ರದಲ್ಲಿ 600 ಮಂದಿಗೆ ಉಚಿತವಾಗಿ ಕೊಳವೆಬಾವಿ ಕೊರೆಸ ಲಾಗಿದೆ. ಒಬ್ಬ ಶಾಸಕರಿಗೆ ಇಷ್ಟು ಅವಕಾಶ ಇರುವಾಗ ಒಂದು ತಾಲೂಕಿನ ಅಧಿಕಾರಿ ನೀವಾದಲ್ಲಿ ಏನೆಲ್ಲಾ ಮಾಡಬಹುದು ಹೇಳಿ? ಎಂದು ಪ್ರಶ್ನಿಸಿದರು.

ಒಂದು ವರ್ಷದ ಕಾಲ ನಿಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಓದಿನಲ್ಲಿ ತೊಡಗಿಸಿಕೊಳ್ಳಿ. ಕರ್ನಾಟಕದಲ್ಲಿ ಉದ್ಯೋಗ ಬಯಸುವ ನಿರುದ್ಯೋಗಿ ಗಳಿಗೆ ಸುವರ್ಣಾವಕಾಶ ದೊರೆಯಲಿದೆ. ನಾನು ನಿರರ್ಗಳವಾಗಿ ಮಾತನಾಡುವ ಕೌಶಲ್ಯದ ಹಿಂದೆ ಅಪಾರ ಓದಿನ ಬೆಂಬಲವಿದೆ.ಜನ ನನ್ನ ಮಾತನ್ನು ಡೈಲಾಗ್ ಎನ್ನುತ್ತಾರೆ ನನಗದು ಸರಸ್ವತಿ ಯಾಗಿದೆ. ನನ್ನಷ್ಟು ಅವರು ಯಾಕೆ ನಿರರ್ಗಳವಾಗಿ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ ಅವರು ದಿನಪತ್ರಿಕೆಯನ್ನು ಓದುವ ನಾನು ಅದರಲ್ಲಿ ನೋಟ್ಸ್ ಮಾಡಿಕೊಳ್ಳುತ್ತೇನೆ. ನೀವೂ ಕೂಡ ಹೀಗೆ ಮಾಡಿಕೊಂಡಲ್ಲಿ ಸಾಮಾನ್ಯ ಜ್ಞಾನದ ಪತ್ರಿಕೆಯಲ್ಲಿ ಉತ್ತಮ ಅಂಕಗಳನ್ನು ಪಡೆಯ ಬಹುದು ಎಂದರು.

jail adgp

ಬಡತನ, ಹಸಿವು, ಅವಮಾನ, ಹಣವಿಲ್ಲ ಎಂದು ಏನೇನೋ ನೆಪಗಳನ್ನು ಹೇಳದೆ, ದ್ಧೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುರುಗಳ ಮಾರ್ಗದರ್ಶನದಲ್ಲಿ, ಸೋಮಾರಿತನ ಬಿಟ್ಟು ತಯಾರಿ ನಡೆಸಿದ್ದಲ್ಲಿ ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿವೆ.ಪ್ರತಿದಿನ ಕನಿಷ್ಟ 8 ಗಂಟೆಗಳ ಕಾಲ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಸ್ವತಂತ್ರವಾಗಿ ನೋಟ್ಸ್ ಮಾಡಿ ಕೊಳ್ಳುವುದು ಕಡ್ಡಾಯ. ಇದಾಗದಿದ್ದಲ್ಲಿ ನೆನಪಲ್ಲಿ ಉಳಿಯುವುದಿಲ್ಲ. ನಿಮಗೆ ತರಬೇತಿ ನೀಡಲು ಇನ್ಸೆöÊಟ್ ಅಕಾಡೆಮಿ, ಐಎಎಸ್ ಬಾಬಾ, ಕೆರಿಯರ್ ಅಕಾಡೆಮಿ, ಗೆಜ್ಜೆ ಅಕಾಡೆಮಿ, ರಾಜಕುಮಾರ್ ಅಕಾಡೆಮಿಯ ಬೆಸ್ಟ್ ಟೀರ‍್ಸ್ ಬಂದು ತರಬೇತಿ ಕೊಡಲಿದ್ದಾರೆ ಎಂದರು.

ತರಬೇತಿಗೆ ಬರುವವರು ನಿರಂತರವಾಗಿ ಬರುವುದು ಕಡ್ಡಾಯ.ನೂರಾರು ಸಂಖ್ಯೆಯೆ ಬೇಕು ಎಂಬ ಷರತ್ತಿಲ್ಲ.ಬಂದರೂ ತರಬೇತಿ ಕೊಡುತ್ತೇವೆ. 50 ಜನ ಇದ್ದರೂ ಸಾಕು. ಅವರನ್ನೇ ಸಜ್ಜುಗೊಳಿಸಿ ಉದ್ಯೋಗ ಪಡೆಯುವಂತೆ ಮಾಡೋಣ. ಇದೊಂದು ಸುವರ್ಣಾವಕಾಶ. 56 ಸಾವಿರ ಉದ್ಯೋಗ ಭವಿಷ್ಯದಲ್ಲಿ ಎಂದೂ ಕರೆಯುವುದಿಲ್ಲ. ಪೋಕರಿ ಸಿನಿಮಾದಲ್ಲಿ ಮಹೇಶ್‌ಬಾಬು ಸಾಧನೆ ನೋಡಿಕೊಂಡು ಹಗಲುಗನಸು ಕಂಡರೆ ಏನೂ ಉಪಯೋಗವಿಲ್ಲ ಎಂದರು.

ಕನಸುಗಳು ನಿತ್ಯವೂ ಬದಲಾಗುತ್ತಿರುತ್ತವೆ. ನಿಜಜೀವನದಲ್ಲಿ ನೀವು ಹೀರೋ ಆಗಬೇಕಾದರೆ ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಬೇಕು. ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಜಸ್ಟ್ ಪಾಸಾದರೆ ಸಾಕು. ಇಷ್ಟೇ ಅಂಕಗಳಿರಬೇಕು ಎಂಬ ಷರತ್ತಿಲ್ಲ. ನಿಮ್ಮ ಓದು ಹೇಗಿರಬೇಕು ಎಂದರ ಆಡಿಕೊಂಡವರು ನಿಮ್ಮನ್ನು ತಿರುಗಿ ನೋಡುವಂತೆ ಓದಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಕನ್ನಡದಲ್ಲಿಯೇ ಪರೀಕ್ಷೆ ಬರೆದು ಯಶಸ್ವಿಯಾದವರ ಸರದಿ ದೊಡ್ಡದಿದೆ. ಯಾರೋ ಹೇಳಿದರು ಎಂದು ಇಂಗ್ಲೀಷ್‌ನಲ್ಲಿ ಪರೀಕ್ಷೆ ಬರೆಯಲು ಹೋಗಬೇಡಿ.ನೀವು ಮಾಡುವುದನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ, ಎಲ್ಲರಿಗೂ ಹೇಳಿಕೊಂಡು ಬಂದರೆ ಅದನ್ನು ನೀವು ಮಾಡುವುದಿಲ್ಲ. ಯಾರನ್ನೂ ಸಲಹೆ ಕೇಳಬೇಡಿ. ನೀವೇನಾಗಬೇಕು ಎಂಬುದು ನಿಮಗೇ ಗೊತ್ತಿಲ್ಲ ಎಂದರೆ ಬೇರೆಯ ವರಿಗೆ ಹೇಗೆ ಗೊತ್ತಾಗಲು ಸಾಧ್ಯ? ದಿನಕ್ಕೆ ಕನಿಷ್ಟ 4 ತಾಸು ಓದದೆ ಪರೀಕ್ಷೆಯಲ್ಲಿ ಹೇಗೆ ಯಶಸ್ಸು ಪಡೆಯಲು ಸಾಧ್ಯ.100 ಮಂದಿ ತರಬೇತಿಗೆ ದಾಖಲು ಮಾಡಿಕೊಂಡಿದ್ದಾರೆ. ಇಲ್ಲಿ 50 ಜನ ಇಲ್ಲಿಗೆ ಬಂದಿದ್ದಾರೆ. ಕಾರಣ ಮಳೆ ಬಂದಿದೆ ಎನ್ನುತ್ತಾರೆ. ಪರೀಕ್ಷೆಯಲ್ಲಿ ಇದನ್ನೇ ಹೇಳಲು ಸಾಧ್ಯವೇ? ಎಂದರು.

ಕೋಲಾರದ ನಂದಿನಿ ಎಂಬ ಪ್ರತಿಭಾವಂತೆ ಪ್ರಸ್ತುತ ಮಂಡ್ಯ ಜಿಲ್ಲೆಯಲ್ಲಿ ಸಿಇಒ ಆಗಿದ್ದಾರೆ. ಅವರು ಐಎಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತೆ.ನಮ್ಮ ಚಿಕ್ಕಬಳ್ಳಾಪುರ ಸಿಇಒ ಡಾ.ವೈ ನವೀನ್ ಭಟ್ ಐಎಎಸ್‌ನಲ್ಲಿ ಆಲ್ ಇಂಡಿಯಾ 36ನೇ ರ‍್ಯಾಂಕ್ ಪಡೆದಿದ್ದರು. ಇಂತಹ ಮೇಧಾವಿ ಗಳಿಂದ ನಿಮಗೆ ತರಬೇತಿ ಕೊಡಿಸಲಾಗುವುದು. ದಯವಿಟ್ಟು ಚೆನ್ನಾಗಿ ಓದಿ.ದೆಹಲಿಗೋ, ಹೈದರಾ ಬಾದಿಗೆ ತರಬೇತಿಗೆ ಹೋದರೆ ಭಾಷೆ, ಆಹಾರ, ಹವಾಮಾನ ಸರಿ ಹೊಂದುವುದಿಲ್ಲ. ನೀವಿರು ವಲ್ಲಿಯೇ ಉಚಿತವಾಗಿ ತರಬೇತಿ ಕೊಡಿಸುತ್ತಿದ್ದೇನೆ.ಇದನ್ನು ಸದ್ವಿನಿಯೋಗ ಮಾಡಿಕೊಳ್ಳಿ. ತಯಾರಿ ಯಿಲ್ಲದೆ ಯಾವುದೂ ನಿಮಗೆ ದಕ್ಕುವುದಿಲ್ಲ ಎಂದು ಮನವಿ ಮಾಡಿದರು.

ಸಚಿವ ಆಗಿಯೇ ತೀರುತ್ತೇನೆ: ಪ್ರದೀಪ್ ಈಶ್ವರ್
ಹೋರ್ಮುಜ್ ಜಲಸಂಧಿ ಎಲ್ಲಿದೆ? ಎಂದು ಪ್ರಶ್ನಿಸಿದ ಅವರು ಇರಾನ್ ಮತ್ತು ಒಮನ್ ದೇಶದ ನಡುವೆ ಈ ಜಲಸಂಧಿ ಇದೆ. ಇರಾನ್‌ನ ಪುರಾತನ ಹೆಸರು ಏನು? ಪರ್ಶಿಯಾ ಎಂಬುದು ಎಷ್ಟು ಮಂದಿಗೆ ಗೊತ್ತಿದೆ ಹೇಳಿ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಅಸಕ್ತಿಯಿಂದ 5 ಮಂದಿ ಬಂದರು ಅವರನ್ನೇ ಎ.ಸಿ. ತಹಶೀಲ್ದಾರ್ ಮಾಡೋಣ. ಬದುಕಲ್ಲಿ ಏನಾದರೂ ಸಾಧಿಸಬೇಕು ಎಂದಿದ್ದರೆ ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ. 2023ರಲ್ಲಿ ನಾನು ಎಂಎಲ್‌ಎ ಆಗಲ್ಲ ಎಂದವರೇ ಹೆಚ್ಚು, 11 ಸಾವಿರ ಮತಗಳಿಂದ ಸುಧಾಕರ್ ವಿರುದ್ಧ ಗೆದ್ದು ಎಂ.ಎಲ್.ಎ ಅಗಲಿಲ್ಲವಾ? ಈಗ ಮಿನಿಸ್ಟರ್ ಆಗಲ್ಲ ಎನ್ನುತ್ತಿದ್ದಾರೆ. ಮುಂದಿನ ವಾರವೋ ಅದರ ಮುಂದಿನ ವಾರವೋ ಮಂತ್ರಿಯಾಗಿಯೇ ಬಂದು ನಿಮಗೆ ಪಾಠ ಮಾಡುತ್ತೇನೆ. ಇದು ನನ್ನ ಮೇಲೆ ನನಗಿರುವ ಭರವಸೆಯಾಗಿದೆ. ನನಗಿರುವಂತೆ ನಿಮಗೂ ನಿಮ್ಮ ಮೇಲೆ ಭರವಸೆಯಿರಬೇಕು.  ಆಗಲೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.

ಖ್ಯಾತ ಇತಿಹಾಸ ತಜ್ಞ ಗೆಜ್ಜೆ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ರಕ್ಷಿತ್‌ರೆಡ್ಡಿ, ಕಾಲೇಜಿನ ಪ್ರಾಧ್ಯಾಪಕ ವಿನಯ್,

image

ಸ್ತುತಿ ನಿಂದೆಗಳಿಗೆ ಮನಸ್ಸು ಕೊಡಬೇಡಿ. ಮನಸ್ಸಿದ್ದಲ್ಲಿ ಮಾರ್ಗವಿದೆ. ಸಾಧಿಸುವ ಹಾದಿಯಲ್ಲಿ ಅಡೆ ತಡೆಗಳು ಸಹಜ. ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮಾಗಾಂಧಿ ಅಂತಹವರನ್ನೇ ಬಿಟ್ಟಿಲ್ಲ. ನುಗ್ಗಿ ನುಗ್ಗಿ ಮುಂದೆ ಸಾಗಿ ಅಡ್ಡ ಬಂದವರನ್ನು ಜಗ್ಗಿ ಬಿಸಾಕಿ.ಯಶಸ್ಸು ಪಡೆಯಬೇಕಾದರೆ ನಾವೇ ಶ್ರಮಪಡಬೇಕು. ಈಗ ಅತ್ಯಂತ ಸ್ಪರ್ಧಾತ್ಮಕ ಜಗತ್ತಿದೆ. ಅಸೂಯೆ ಮೀರಿ ಬೆಳೆಯಬೇಕು.ಋಣಾತ್ಮಕ ಚಿಂತನೆಗಳನ್ನು ಬಿಸಾಕಿ, ಪ್ರಬಲ ಇಚ್ಛಾಶಕ್ತಿ ನಿಮ್ಮ ಬಲವಾಗಲಿ. ಐಎಎಸ್‌ಗೆ ಪ್ರಯತ್ನ ಪಟ್ಟರೆ ಬೇರೆ ಏನಾದರೂ ಒಂದು ಆಗುವುದು ಖಚಿತ. ಸಿಕ್ಕ ಅವಕಾಶ ಸೌಲಭ್ಯಗಳನ್ನು ಬಳಸಿಕೊಂಡು ಮೈಗಳ್ಳತನ ಬಿಸಾಕಿ, ಯಾರೊಂದಿಗೂ ನಿಮ್ಮನ್ನು ಹೋಲಿಸಿಕೊಳ್ಳದೆ ಕಠಿಣ ಪರಿಶ್ರಮ ಹಾಕಿದರೆ ಉಜ್ವಲ ಭವಿಷ್ಯ ನಿಮ್ಮ ಬೆನ್ನಿಗಿರಲಿದೆ. ಏಕೆಂದರೆ ಪ್ರತಿಯೊಬ್ಬರೂ ಅನನ್ಯ. ಅವರಿಗೆ ಅವರದೇ ಅದ ವ್ಯಕ್ತಿತ್ವ ಪ್ರತಿಭೆಯಿದೆ. ಎಲ್ಲರಿಗೂ ಒಳ್ಳೆಯದಾಗಲಿ.

ಜಿನೇಂದ್ರ ಕಣಗಾವಿ. ರಾಜ್ಯ ಬಂಧಿಖಾನೆ ಡಿಐಜಿಪಿ