ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: 4 ಗುಣಗಳಿಗೆ ಮನ ಸೋತರೆ ಮಾನ ಸಮ್ಮಾನಗಳು ಹುಡುಕಿಕೊಂಡು ಬರಲಿವೆ : ಏಡುಕೊಂಡಲ ಶ್ರೀನಿವಾಸ್ ಅಭಿಮತ

ಎರಡನೆಯದು ವಿದ್ಯಾದಾನ. ಎಲ್ಲಾ ಸಂಕೋಲೆಗಳ ಬಿಡುಗಡೆಯ ಸಾಧನ ಶಿಕ್ಷಣವೇ ಆಗಿದೆ. ಇಂತಹ ಶಿಕ್ಷಣ ಪಡೆಯಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಶಿಕ್ಷಣಕ್ಕಾಗಿ ಸಹಾಯ ಬೇಡಿ ಬಂದಾಗ ಮಾಡು ವುದೇ ವಿದ್ಯಾದಾನ.ಇದೂ ಕೂಡ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಇನ್ನು ಕನ್ಯಾದಾನಕ್ಕೆ ಪೌರಾಣಿಕವಾಗಿ ಧಾರ್ಮಿಕವಾಗಿ ಅನೇಕ ವ್ಯಾಖ್ಯಾನಗಳಿವೆ

ಏಕತೆಯ ಸಮಾವೇಶದಲ್ಲಿ ಹಿತೈಷಿಗಳಿಂದ ಆತ್ಮೀಯ ಅಭಿನಂದನೆ ಸ್ವೀಕರಿಸಿ  ಏಡು ಕೊಂಡಲ ಶ್ರೀನಿವಾಸ್ ಹೇಳಿಕೆ  

ಚಿಕ್ಕಬಳ್ಳಾಪುರ: ನಮ್ಮ ಬದುಕಿನಲ್ಲಿ 4 ಗುಣಗಳಿಗೆ ಮನ ಸೋತರೆ ಖಂಡಿತವಾಗಿ ಮಾನ ಸನ್ಮಾನ ಗಳು ತಾನಾಗೇ ಹುಡುಕಿಕೊಂಡು ಬರಲಿವೆ ಎಂದು ಏಕತೆಯ ಸಮಾವೇಶದಲ್ಲಿ ಹಿತೈಷಿಗಳಿಂದ ಆತ್ಮೀಯ ಅಭಿನಂದನೆ ಸ್ವೀಕರಿಸಿದ ನಂತರ ಗೌರವ ಡಾಕ್ಟರೇಟ್ ಪದವಿ ಭಾಜನರಾಗಿರುವ ಡಾ. ಏಡುಕೊಂಡಲ ಶ್ರೀನಿವಾಸ್ ಹೇಳಿದರು.

ನಗರ ಹೊರವಲಯ ಜಿ.ಹೆಚ್.ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ನಡೆದ ಏಡುಕೊಂಡಲ ಶ್ರೀನಿವಾಸ್ ಗೌರವ ಸಮರ್ಪಣೆಯ ಏಕತಾ ಸಮಾವೇಶದಲ್ಲಿ ಹಿತೈಷಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಮನುಷ್ಯರಾದವರು ತಮ್ಮ ಜೀವನದಲ್ಲಿ 4 ಗುಣಗಳಿಗೆ ಮನ ಸೋಲುವುದನ್ನು ಅಭ್ಯಾಸ ಮಾಡಿ ಕೊಳ್ಳಬೇಕು. ಮನಸೋತರೆ ಖಂಡಿತವಾಗಿ ಮಾನ, ಸನ್ಮಾನ ಬಿರುದು ಬಾವಲಿಗಳು ಅಂತಹವರನ್ನು ಹುಡುಕಿಕೊಂಡು ಬರಲಿವೆ. ಅವುಗಳಲ್ಲಿ ಮೊದಲನೆಯದು ವಾಗ್ದಾನ. ಮಾತು ಕೊಡುವುದು ಸುಲಭ. ಆದರೆ ಕೊಟ್ಟ ಮಾತಿನಂತೆ ನಡೆಯುವುದು ಕಷ್ಟಸಾಧ್ಯ. ಆದರೆ ಸಮಯ ಸಂದರ್ಭಗಳು ಬಿಗಿಯಾಗಿ ಹಾಗೆ ಮಾಡಲು ಬಿಡದಿರಬಹುದು. ಆಗಲೂ ಕೂಡ ಮಾತನ್ನು ಉಳಿಸಿಕೊಂಡಾಗ ಮಾತ್ರ ವಾಗ್ದಾನಕ್ಕೆ ಬೆಲೆ ಬರಲಿದೆ ಎಂದರು.

ಇದನ್ನೂ ಓದಿ: Chikkaballapur New: ಜಲಮೂಲಗಳಿಗೆ ಸಂಸ್ಕರಿಸದ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ: ಎಚ್ಚರಿಕೆ

ಎರಡನೆಯದು ವಿದ್ಯಾದಾನ. ಎಲ್ಲಾ ಸಂಕೋಲೆಗಳ ಬಿಡುಗಡೆಯ ಸಾಧನ ಶಿಕ್ಷಣವೇ ಆಗಿದೆ. ಇಂತಹ ಶಿಕ್ಷಣ ಪಡೆಯಲು ಅನೇಕರಿಗೆ ಸಾಧ್ಯವಾಗುವುದಿಲ್ಲ.ಶಿಕ್ಷಣಕ್ಕಾಗಿ ಸಹಾಯ ಬೇಡಿ ಬಂದಾಗ ಮಾಡುವುದೇ ವಿದ್ಯಾದಾನ.ಇದೂ ಕೂಡ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಇನ್ನು ಕನ್ಯಾ ದಾನಕ್ಕೆ ಪೌರಾಣಿಕವಾಗಿ ಧಾರ್ಮಿಕವಾಗಿ ಅನೇಕ ವ್ಯಾಖ್ಯಾನಗಳಿವೆ. ಇದನ್ನು ವಿವರಿಸುವ ಅಗತ್ಯ ವಿಲ್ಲ. ಈ ಮೂರನ್ನು ಮಾಡಲು ಆಗದಿದ್ದರೂ ಪರವಾಗಿಲ್ಲ.

ಕನಿಷ್ಠಪಕ್ಷ ಅನ್ನದಾನವನ್ನಾದರೂ ಮಾಡಬೇಕು. ಇದು ಹಸಿದ ಹೊಟ್ಟೆ ತಣ್ಣಗಾಗುವಂತೆ ಮಾಡುವು ದಲ್ಲದೆ ಊಟವಾದ ನಂತರ ಸಂತೃಪ್ತ ಮನಸ್ಸು ಮಾಡುವ ಆಶೀರ್ವಾದ ದೇವರು ಕೊಟ್ಟ ವರಕ್ಕಿಂತ ಮಿಗಿಲಾಗಿರಲಿದೆ.ನನ್ನ ಬದುಕಿನುದ್ದಕ್ಕೂ ಇವುಗಳಿಗೆ ಮಹತ್ವದ ಸ್ಥಾನ ಕೊಟ್ಟಿರುವ ಕಾರಣ ಇಂತಹ ಏಕತಾ ಸಮಾವೇಶದಲ್ಲಿ ನಿಮ್ಮೆಲ್ಲರ ಶುಭ ಹಾರೈಕೆ ಆಶೀರ್ವಾದ ನನಗೆ ದೊರೆತಿದೆ ಎಂದರು.

4cbpm1konedu ಒಕ

ನನ್ನ ಕರ್ತವ್ಯದಲ್ಲಿ ಎಂದಿಗೂ ಕೂಡ ನಾನು  ಜಾತಿ-ಮತ ಕುಲ-ಗೋತ್ರ, ಧರ್ಮ-ಕರ್ಮಗಳನ್ನು ನೋಡಿಲ್ಲ.ಕಷ್ಟವನ್ನಷ್ಟೇ ನೋಡಿದ್ದೇನೆ. ಈವರೆಗೆ ನಾನು ನನ್ನ ಸ್ವಂತ ದುಡಿಮೆಯಲ್ಲಿ 250 ಮದುವೆಗಳನ್ನು ಮಾಡಿಸಿದ್ದೇನೆ. ಈ ಕುಟುಂಬಗಳೆಲ್ಲಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದು ಇವರ ಹರಕೆ ಆಶೀರ್ವಾದಗಳು ನನಗೆ ಶ್ರೀರಕ್ಷೆಯಾಗಿವೆ ಎಂದರು.

ಆರ್‌ಪಿಐ ಪಕ್ಷದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿ, ಏಡು ಕೊಂಡಲ ಶ್ರೀನಿವಾಸ್ ಅವರಂತಹ ಬದ್ಧತೆಯುಳ್ಳ ದಾನಿಗಳು ವಿರಳಾತಿವಿರಳ. 48 ವರ್ಷಗಳ ಕಾಲ ಬೇಡಿ ಬಂದ ಅಸಹಾಯಕರ ಕೈಹಿಡಿದು ಅವರ ಕಷ್ಟಕ್ಕೆ ಮಿಡಿಯುವ ಕೆಲಸವನ್ನು ನಿರ್ವಂಚನೆಯಿಂದ ಮಾಡಿಕೊಂಡು ಬಂದಿದ್ದಾರೆ. ಈ ಬಗ್ಗೆ ವೇದಿಕೆಯ ಮೇಲಿರುವ ಎಲ್ಲರೂ ಗುಣಗಾನ ಮಾಡಿದ್ದಾರೆ. ಇಂತಹವರ ಸಂತತಿ ಹೆಚ್ಚಾಗಬೇಕು. ಹೆಚ್ಚಿದಾಗಲೇ ಸಮಾಜದಲ್ಲಿ ಅಸಮಾನತೆ ಅಳಿದು ಸಮಾನತೆ ಬರಲಿದೆ ಎಂದು ಬಣ್ಣಿಸಿದರು.

ಶೈಕ್ಷಣಿಕ ಶಿಸ್ತನ್ನು ರೂಢಿಸಿಕೊಂಡಂತಹವರು ಯಾರು ಬೇಕಾದರೂ ಪಿ.ಹೆಚ್.ಡಿ ಪದವಿ ಪಡೆಯ ಬಹುದು. ಅಕಾಡೆಮಿಕ್ ಆಗಿ ಇಂತಹವರೆಲ್ಲಾ ಡಾಕ್ಟರೇಟ್ ಪಡೆಯುವುದು ಸಾಮಾನ್ಯ. ಆದರೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರ ಸೇರಿ ಇನ್ನಿತರೆ ವಲಯಗಳ ಅನುಮಪ ಸೇವೆಯನ್ನು ಗುರುತಿಸಿ ನೀಡುವ ಡಾಕ್ಟರೇಟ್ ಎಲ್ಲರಿಗೂ ಸುಲಭಕ್ಕೆ ಧಕ್ಕುವುದಿಲ್ಲ. ಇಂತಹ ಗೌರವ ಡಾಕ್ಟರೇಟ್ ಪದವಿಗೆ ಭಾಜರಾಗಬೇಕಾದರೆ ಅಸಾಮನ್ಯ ಸಾಧನೆ ಮಾಡಬೇಕು. ಇಂತಹ ಸೇವೆ ಮಾಡಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಏಡುಕೊಂಡಲ ಶ್ರೀನಿವಾಸ್ ಅವರ ಸಾಧನೆ ಮತ್ತು ಜನಪ್ರೀತಿ ಯನ್ನು ಯುವ ಸಮುದಾಯ ಅನುಸರಿಸಲಿ, ಆಮೂಲಕ ಸಮಾಜಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈ ಸಂದರ್ಭದಲ್ಲಿ ಏಡುಕೊಂಡಲ ಬ್ಯುಲ್ರ‍್ಸ್ ಅಂಡ್ ಡೆವಲರ‍್ಸ್ ಕಂಪನಿ ಅಧ್ಯಕ್ಷ ಏಡುಕೊಂಡಲ ಡಾ. ಶ್ರೀನಿವಾಸಪ್ಪ, ಧರ್ಮಪತ್ನಿ ಶೀಲಾ ಶ್ರೀನಿವಾಸ್, ಏಡುಕೊಂಡಲ ಬ್ಯುಲ್ರ‍್ಸ್ ಅಂಡ್ ಡೆವಲರ‍್ಸ್ ಕಂಪನಿ ಕಾರ್ಯನಿವಾಹಕ ಬಿ.ಎನ್.ಆನಂದ್‌ಕುಮಾರ್, ಕಂಪನಿ ವ್ಯವಸ್ಥಾಪಕ ಸಂತೋಷ್, ಕರ್ನಾಟಕ ಮಾವು ಅಭಿವೃದ್ದಿ ಮಂಡಳಿ ಅಧ್ಯಕ್ಷ ಡಾ.ಬಿ.ಸಿ. ಮುದ್ದು ಗಂಗಾಧರ್, ಸದಸ್ಯ ಗಂಗಾಧರ್, ಎಸ್.ಎಸ್.ಡಿ ವೆಂಕಟರೋಣಪ್ಪ, ಯಶವಂತ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಮಂಚನಬಲೆ ಡ್ಯಾನ್ಸ್ ಶ್ರೀನಿವಾಸ್, ಮತ್ತು ಇತರರು ಇದ್ದರು.