ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Zameer Ahmed Khan: ಜಮೀರ್ ಅಹಮದ್ ಖಾನ್ʼಗೆ ಡಿಸಿಎಂ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಷ್ಟ

ಸಚಿವ ಸಂಪುಟದಲ್ಲಿ ಜಮೀರ್ ಅಹಮದ್ ಖಾನ್ ಅವರು ವಸತಿ ಮತ್ತು ವಾಕ್ಫ್ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡುವುದರ ಜೊತೆಗೆ, ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವಂತಹ ಕೆಲಸ ಮಾಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದವರು ಇಂದು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ಎಂದರೆ, ಅದಕ್ಕೆ ಮೂಲ ಕಾರಣ, ಜಮೀರ್ ಅವರು. ಆದ್ದರಿಂದ ಅವರನ್ನು ಕಡ್ಡಾಯವಾಗಿ ಸಚಿವರನ್ನಾಗಿ ಮಾಡಬೇಕು. ಅವರಿಗೆ ಉತ್ತಮ ಖಾತೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕು ಎಂದರು.

ಚಿಂತಾಮಣಿ: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivkumar) ಅವರ ಸಂಪುಟದಲ್ಲಿ ಮಾಜಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್( Former Minister BZ Zameer Ahmed Khan) ಅವರಿಗೆ ಡಿ ಸಿ ಎಂ ಅಥವಾ ಸಚಿವ ಸ್ಥಾನ ಕಲ್ಪಿಸಿಕೊಡಬೇಕು ಎಂದು ಮುಸ್ಲಿಂ ಸಮುದಾಯದ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.

ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತಾ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಕೆ ಪಿ ಸಿ ಸಿ(KPCC) ಸದಸ್ಯ ಸೈಯದ್ ಏಜಾಜ್, ಶೇಕ್ ಸಾಧಿಕ್ ರಜ್ವಿ, ಮಾಲಿಕ್ ಪಾಷಾ, ದಾದಾಪೀರ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former Chief Minister Siddarmaiah)ಅವರ ಸಚಿವ ಸಂಪುಟದಲ್ಲಿ ಜಮೀರ್ ಅಹಮದ್ ಖಾನ್ ಅವರು ವಸತಿ ಮತ್ತು ವಾಕ್ಫ್ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡುವುದರ ಜೊತೆಗೆ, ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವಂತಹ ಕೆಲಸ ಮಾಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದವರು ಇಂದು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ಎಂದರೆ, ಅದಕ್ಕೆ ಮೂಲ ಕಾರಣ, ಜಮೀರ್ ಅವರು. ಆದ್ದರಿಂದ ಅವರನ್ನು ಕಡ್ಡಾಯವಾಗಿ ಸಚಿವರನ್ನಾಗಿ ಮಾಡಬೇಕು. ಅವರಿಗೆ ಉತ್ತಮ ಖಾತೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕು ಎಂದರು.

ಇದನ್ನೂ ಓದಿ: Zameer Ahmed: ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಜಮೀರ್‌ ಅಹ್ಮದ್‌ಗೆ ಸಂಕಷ್ಟ; ಬೈ ಎಲೆಕ್ಷನ್‌ನಲ್ಲಿ ಪಕ್ಷವಿರೋಧಿ ಚಟುವಟಿಕೆ ಆರೋಪ, ಆಡಿಯೊ ವೈರಲ್‌!

ಮಾತನಾಡಿದ ಅವರು ಜಮೀರ್ ಅಹಮದ್ ಖಾನ್, ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದಾರೆ. ಪಕ್ಷ ಸಂಘಟನೆ, ಚುನಾವಣೆ ಸೇರಿದಂತೆ ತಮಗೆ ವಹಿಸಿದ ಪಕ್ಷದ ಎಲ್ಲಾ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿ ಸಮರ್ಥ ನಾಯಕ ಎನಿಸಿಕೊಂಡಿದ್ದಾರೆ.ಎಲ್ಲಾ ಸಮಾಜದ ಬಡವರಿಗೂ ಆರ್ಥಿಕ ನೆರವು ನೀಡುವ ಮೂಲಕ ಎಲ್ಲಾ ಸಮಾಜದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಜಮೀರ್ ಅಹಮದ್ ಅವರಿಗೆ ಸಚಿವ ಸ್ಥಾನ ನೀಡುವ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಜಮೀರ್ ಅಹಮದ್ ಅವರಿಗೆ ಸಚಿವ ಸ್ಥಾನ ನೀಡದೆ ಹೋದರೆ ಅದು ಕಾಂಗ್ರೇಸ್ ಪಕ್ಷಕ್ಕೆ ನಷ್ಟವನ್ನುಂಟು ಮಾಡಲಿದೆ.ಈ ದೃಷ್ಟಿಯಿಂದ ಎರಡನೇ ಕಂತಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೇಸ್ ಪಕ್ಷದ ಹೈಕಮಾಂಡನ್ನು ಒತ್ತಾಯಿಸಿದರು.

ಅಷ್ಟೇ ಅಲ್ಲದೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಡಾ.ಎಂ ಸಿ ಸುಧಾಕರ್(Dr. M. C. Sudhakar) ರವರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಮುಂದುವರಿಸಬೇಕು, ಯಾಕೆಂದರೆ ರಾಜ್ಯದ ಜನತೆಗೆ,ಪಕ್ಷದ ಕಾರ್ಯಕರ್ತರಿಗೆ ಮತ್ತು ಹೈಕಮಾಂಡ್ʼಗೂ ಸುಧಾಕರ್ ಅವರ ಕಾರ್ಯದಕ್ಷತೆ ತಿಳಿದಿದೆ. ಈ ಹಿಂದೆ ಅವರು ಉನ್ನತ ಶಿಕ್ಷಣ ಸಚಿವರಾಗಿ ಇಡೀ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಬದಲಾವಣೆಗಳನ್ನು ತಂದಿದ್ದರು. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು,ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಶಿಕ್ಷಣ ಕ್ಷೇತ್ರವು ಮಾದರಿಯಾಗುವಂತೆ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದ್ದನ್ನು ರಾಜ್ಯದ ಜನತೆ ಮರೆತಿಲ್ಲ.

ನಮ್ಮ ನಾಯಕರಿಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಪ್ರಾಮಾಣಿಕವಾಗಿ, ಪಾರ ದರ್ಶಕವಾಗಿ ಮತ್ತು ಯಾವುದೇ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದಂತೆ ನಿಭಾಯಿಸುವ ಏಕೈಕ ವ್ಯಕ್ತಿ ಎಂದರೆ ಅದು ಡಾ.ಸುಧಾಕರ್.

ಇನ್ನು ಮುಂದುವರಿಸಿ ಮಾತನಾಡಿದ ಅವರು ನಸೀರ್ ಅಹ್ಮದ್ ರವರಿಗೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನ ನೀಡಬೇಕು,ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುವದು ನೂರಕ್ಕೆ ನೂರರಷ್ಟು ನಿಜ ಎಂದು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಇಂತಿಯಾಜ್ ಪಾಷ,ಕರಿಯಪಲ್ಲಿ ಸೈಯದ್ ಮಾಲಿಕ್, ಫಾರೂಕ್, ಸಿ ಕೆ ಎಲ್ ಚಾಂದ್ ಪಾಷಾ, ಸೈಯದ್ ಸಿಕಂದರ್, ರಫೀಕ್, ರಿಯಾಜ್ ಪಾಷ, ಸುಹೇಲ್, ಇರ್ಫಾನ್, ಬಾಬು, ಸಿ ಕೆ ಶಬ್ಬೀರ್ ಪಾಷಾ, ಜಮುಲ್ ಸೇರಿದಂತೆ ಮತ್ತಿತರರು ಇದ್ದರು.