ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಮಿತಿಮೀರಿದ ಅಕ್ರಮ ಕಸಾಯಿ ಖಾನೆಗಳ ದಂಧೆ: ಪವಿತ್ರ ಕ್ಷೇತ್ರಗಳ ಬಳಿಯೇ ಗೋಮಾಂಸ ಮಾರಾಟ

ರಾಜ್ಯದಲ್ಲಿ ಕಟ್ಟುನಿಟ್ಟಿನ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ, ಇಲ್ಲಿನ ಅಧಿಕಾರಿ ಗಳ ಮೌನವನ್ನೇ ಬಂಡವಾಳ ಮಾಡಿಕೊಂಡಿರುವ ಜಾಲವು ರಾಜಾ ರೋಷವಾಗಿ ಹಸು ಹಾಗೂ ಒಂಟೆಗಳ ಮಾರಣಹೋಮಕ್ಕೆ ಸಿದ್ಧತೆ ನಡೆಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಂತಾಮಣಿ: ರಾಜ್ಯದಲ್ಲಿ ಕಟ್ಟುನಿಟ್ಟಿನ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ,ಇಲ್ಲಿನ ಅಧಿಕಾರಿಗಳ ಮೌನವನ್ನೇ ಬಂಡವಾಳ ಮಾಡಿಕೊಂಡಿರುವ ಜಾಲವು ರಾಜಾ ರೋಷವಾಗಿ ಹಸು ಹಾಗೂ ಒಂಟೆಗಳ ಮಾರಣಹೋಮಕ್ಕೆ ಸಿದ್ಧತೆ ನಡೆಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಅಕ್ರಮ ಜಾಲವನ್ನು ಬೇರುಸಹಿತ ಕಿತ್ತೆಸೆಯುವಂತೆ ಆಗ್ರಹಿಸಿ ಸುನಿಲ್.ಪಿ.ವಿ ನೇತೃತ್ವದ ನಿಯೋಗವು ತಹಸೀಲ್ದಾರ್‌,ನಗರಸಭೆ ಪೌರಾಯುಕ್ತರು ಹಾಗೂ ಪೊಲೀಸ್ ಇಲಾಖೆಗೆ ಏಕಕಾಲದಲ್ಲಿ ಧಾವಿಸಿ, ಲಿಖಿತ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: Chinthamani News: ಕೆಂಚಾರ್ಲಹಳ್ಳಿ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸ್ ದಾಳಿ: ಐವರ ವಶಕ್ಕೆ,ನಗದು ಮತ್ತು ಬೈಕ್‌ಗಳು ಜಪ್ತಿ

ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾದ ಚಿಂತಾಮಣಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಮಿತಿಮೀರಿದ್ದು, ಅಕ್ರಮ ಜಾನುವಾರು ಸಾಗಾಟ ಗಾರರು ಹಾಗೂ ಕಸಾಯಿಖಾನೆಗಳ ದಂಧೆಕೋರರು ಕಾನೂನಿಗೆ ಬಹಿರಂಗ ಸವಾಲು ಹಾಕುತ್ತಿದ್ದಾರೆ.

ಮುಂಬರುವ ಬಕ್ರೀದ್ ಹಬ್ಬದ ನೆಪದಲ್ಲಿ ಕರ್ನಾಟಕದಲ್ಲಿ ಸಂಪೂರ್ಣವಾಗಿ ನಿಷೇಧಿಸ ಲ್ಪಟ್ಟಿರುವ ಒಂಟೆಗಳನ್ನು ಹೊರರಾಜ್ಯಗಳ ಗಡಿ ದಾಟಿಸಿ ಚಿಂತಾಮಣಿ ನಗರಕ್ಕೆ ರಹಸ್ಯ ವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ.

cbpm3kasayia

ಕೇವಲ ಮಾಂಸದ ಆಸೆಗಾಗಿ ಈ ಮೂಕ ಪ್ರಾಣಿಗಳನ್ನು ಭೀಕರವಾಗಿ ವಧೆ ಮಾಡಲು ಸಕಲ ಸಿದ್ಧತೆಗಳು ನಡೆಯುತ್ತಿವೆಯೆಂದು ನಿಯೋಗವು ಅಧಿಕಾರಿಗಳ ಮುಂದೆ ಆತಂಕ ಬಿಚ್ಚಿಟ್ಟಿದೆ.

ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ರಾಜ್ಯದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಈ ಕೃತ್ಯ ಎಸಗಲಾಗುತ್ತಿದ್ದರೂ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದ್ದಾರೆ.