ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Fertilizer Sales App: ಡಿಸೆಂಬರ್ 1ರಿಂದ ಜಿಲ್ಲೆಯಾದ್ಯಂತ ಅನುಷ್ಠಾನ; ಆಧಾರ್ ಆಧಾರಿತ ನೋಂದಣಿ, ಕ್ಯೂಆರ್ ಕೋಡ್ ಮೂಲಕ ರಸಗೊಬ್ಬರ ವಿತರಣೆ

ರೈತರು ತಮ್ಮ ಮೊಬೈಲ್‌ನಲ್ಲಿಯೇ ಆಧಾರ್ ಆಧಾರಿತ App ಮೂಲಕ ರಸಗೊಬ್ಬರ ಖರೀದಿ ಪ್ರಕ್ರಿಯೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಫರ್ಟಿಲೈಸರ್ ಸೇಲ್ ಅಪ್ಲಿಕೇಷನ್ ಸಿಸ್ಟಮ್ ಹಾಗೂ ಫರ್ಟಿಲೈಸರ್ ಸೇಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ 2026ರ ಡಿಸೆಂಬರ್ 1ರಿಂದ ಈ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ.

ಚಿಕ್ಕಬಳ್ಳಾಪುರ: ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ, ಸಮರ್ಪಕ ನಿರ್ವಹಣೆ ಹಾಗೂ ರೈತರಿಗೆ ಸುಲಭವಾಗಿ ಗೊಬ್ಬರ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಯಂತೆ ರಾಜ್ಯದಲ್ಲಿ ಹೊಸ ಡಿಜಿಟಲ್ ರಸಗೊಬ್ಬರ ಮಾರಾಟ ವ್ಯವಸ್ಥೆಯನ್ನು ಜಿಲ್ಲೆಯಲ್ಲಿಯೂ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು.

ಈ ವ್ಯವಸ್ಥೆಯಡಿ ರೈತರು ತಮ್ಮ ಮೊಬೈಲ್‌ನಲ್ಲಿಯೇ ಆಧಾರ್ ಆಧಾರಿತ App ಮೂಲಕ ರಸಗೊಬ್ಬರ ಖರೀದಿ ಪ್ರಕ್ರಿಯೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಫರ್ಟಿಲೈಸರ್ ಸೇಲ್ ಅಪ್ಲಿಕೇಷನ್ ಸಿಸ್ಟಮ್(Fertilizer Sales Application System) ಹಾಗೂ ಫರ್ಟಿಲೈಸರ್ ಸೇಲ್ App(Fertilizer Sales App) ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ 2026ರ ಡಿಸೆಂಬರ್ 1ರಿಂದ ಈ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ.

ರೈತರು ತಮ್ಮ ಜಮೀನಿನ ವಿಸ್ತೀರ್ಣ ಮತ್ತು ಬೆಳೆ ವಿವರಗಳಿಗೆ ಅನುಗುಣವಾಗಿ ಅಗತ್ಯವಿರುವ ಪ್ರಮಾಣದ ರಸಗೊಬ್ಬರ ಖರೀದಿಸಬಹುದು. ಮೊಬೈಲ್ Appನಲ್ಲಿ ಬುಕ್ಕಿಂಗ್ ಮಾಡಿದ ಬಳಿಕ ಸಮೀಪದ ಅಧಿಕೃತ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಗೊಬ್ಬರ ಪಡೆಯಲು ಅವಕಾಶ ವಿರುತ್ತದೆ.

ಇದನ್ನೂ ಓದಿ: Chinthamani News: ಕಾಸಾಪ ಏಕಪಕ್ಷೀಯ ನಿರ್ಧಾರಕ್ಕೆ ಆಕ್ರೋಶ; ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮ್ಮೇಳನ ಆಯೋಜನೆ ಆರೋಪ

ಹೊಸ ವ್ಯವಸ್ಥೆಯಲ್ಲಿ ರೈತರ ಆಧಾರ್ ಸಂಖ್ಯೆ, ಜಮೀನಿನ ವಿವರ ಹಾಗೂ ಗುರುತಿನ ಮಾಹಿತಿ ಯನ್ನು ಸಂಯೋಜಿಸಲಾಗುತ್ತದೆ. ಇದರಿಂದ ರಸಗೊಬ್ಬರ ಮಾರಾಟದಲ್ಲಿ ನಿಖರತೆ ಕಾಪಾಡುವು ದರ ಜತೆಗೆ ಅನಧಿಕೃತ ಮಾರಾಟ ಮತ್ತು ದುರುಪಯೋಗ ತಡೆಯಲು ಸಾಧ್ಯವಾಗಲಿದೆ. ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಸಹಕಾರ ಸಂಘಗಳು ಹಾಗೂ ರಸಗೊಬ್ಬರ ಅಂಗಡಿಗಳ ಮೂಲಕ ರೈತರಿಗೆ ಅಗತ್ಯ ನೆರವು ನೀಡಲಾಗುತ್ತದೆ.

ಇದಲ್ಲದೆ, ಸಮಗ್ರ ರಸಗೊಬ್ಬರ ನಿರ್ವಹಣಾ ವ್ಯವಸ್ಥೆ ಮೂಲಕ ರಸಗೊಬ್ಬರ ದಾಸ್ತಾನು, ವಿತರಣೆ, ಸಾಗಣೆ ಮತ್ತು ಪೂರೈಕೆಯ ಸಂಪೂರ್ಣ ನಿರ್ವಹಣೆ ಹಾಗೂ ಪರಿಶೀಲನೆ ನಡೆಸಲಾಗುತ್ತದೆ. ಆಧಾರ್ ಮೊಬೈಲ್ ರಸಗೊಬ್ಬರ ಟ್ರ‍್ಯಾಕ್ ವ್ಯವಸ್ಥೆಯಡಿ ವಿತರಿಸಲಾದ ಗೊಬ್ಬರದ ಪ್ರಮಾಣ ಮತ್ತು ವಿವರ ಗಳನ್ನು ನಿಖರವಾಗಿ ದಾಖಲಿಸಲಾಗುತ್ತದೆ. ಸಬ್ಸಿಡಿ ದರದಲ್ಲಿ ದೊರೆಯುವ ರಸಗೊಬ್ಬರ ಅರ್ಹ ರೈತರಿಗೆ ಮಾತ್ರ ತಲುಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಗೊಬ್ಬರ ಖರೀದಿ ಪ್ರಕ್ರಿಯೆ ಹೇಗೆ?: ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ App ಡೌನ್‌ ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆಯನ್ನು ನಮೂದಿಸಿ ಅಗತ್ಯ ಪರಿಶೀಲನೆ ಪೂರ್ಣಗೊಳಿಸಿದ ಬಳಿಕ ರೈತರ ಗುರುತಿನ ವಿವರಗಳು ಲಭ್ಯವಾಗುತ್ತವೆ. ???ಪ್‌ನಲ್ಲಿ ಲಭ್ಯವಿರುವ ಬೆಳೆ ಮತ್ತು ಜಮೀನಿನ ವಿವರಗಳ ಆಧಾರದ ಮೇಲೆ ಎರಡು-ಮೂರು ದಿನಗಳ ಅವಧಿಯಲ್ಲಿ ಅಗತ್ಯವಿರುವ ರಸಗೊಬ್ಬರ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಬುಕ್ಕಿಂಗ್ ಮಾಡಿದ ನಂತರ ದೊರೆಯುವ ಕ್ಯೂಆರ್ ಕೋಡ್ ಅನ್ನು ರಸಗೊಬ್ಬರ ಅಂಗಡಿಯಲ್ಲಿ ಸ್ಕ್ಯಾನ್ ಮಾಡಿಸಿ ಗೊಬ್ಬರ ಪಡೆಯಬಹುದು. ಮೊಬೈಲ್ App ಬಳಕೆಯಲ್ಲಿ ತೊಂದರೆ ಎದುರಾದರೆ ಸಮೀಪದ ಅಧಿಕೃತ ರಸಗೊಬ್ಬರ ಮಾರಾಟ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೆರವು ಪಡೆಯಬಹುದು.

ಈ ಡಿಜಿಟಲ್ ವ್ಯವಸ್ಥೆಯಿಂದ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜತೆಗೆ ರೈತರಿಗೆ ಸಕಾಲದಲ್ಲಿ ಗೊಬ್ಬರ ದೊರೆಯಲಿದೆ. ಸಬ್ಸಿಡಿ ದುರುಪಯೋಗ ತಡೆಗಟ್ಟಲು ಸಹಕಾರಿ ಯಾಗಲಿದೆ. ಆದ್ದರಿಂದ ಜಿಲ್ಲೆಯ ರೈತರು ಹೊಸ ವ್ಯವಸ್ಥೆಯ ಕುರಿತು ಕೃಷಿ ಇಲಾಖೆಯ ಅಧಿಕಾರಿ ಗಳಿಂದ ಹೆಚ್ಚಿನ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಪ್ರಭು ಮನವಿ ಮಾಡಿದ್ದಾರೆ.