ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯ ಬಜೆಟ್‌ನಲ್ಲಿ ಹೆಚ್.ಎನ್ ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮಿಸಲಿಡಿ ಇಲ್ಲವೆ ಹೋರಾಟ ಎದುರಿಸಿ:  ಸಂದೀಪ್ ಬಿ ರೆಡ್ಡಿ ಎಚ್ಚರಿಕೆ

ಜಿಲ್ಲೆಯ ಶ್ರಮಜೀವಿ ರೈತರ ಮುಗ್ಧತೆ ಬಳಸಿಕೊಂಡು ಅಧಿಕಾರಕ್ಕೆ ಬಂದ ಈಗಿನ ಸರಕಾರವೇ ಮುಂದೆ ನಿಂತು ಅಂತರ್ಜಲ ವೃದ್ದಿಯ ಹೆಸರಿನಲ್ಲಿ ನನ್ನ ಜನಕ್ಕೆ ವಿಷ ಕುಡಿಸುತ್ತಿದ್ದಾರೆ. ಆ ಮೂಲಕ ಜಿಲ್ಲೆಯು ಡಯಾಲಿಸಿಸ್ ರೋಗಿಗಳ ರಾಜಧಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕ ಪಡುವ ಸಂಗತಿಯಾಗಿದೆ.

ರಾಜ್ಯ ಬಜೆಟ್‌ನಲ್ಲಿ ಹೆಚ್.ಎನ್ ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮಿಸಲಿಡಿ ಇಲ್ಲವೆ ಹೋರಾಟ ಎದುರಿಸಿ  ಎಂದ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ  ಸಂದೀಪ್ ಬಿ ರೆಡ್ಡಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರ: ಬೆಂಗಳೂರಿನ ಹೆಬ್ಬಾಳ–ನಾಗವಾರ ಕೆರೆಯ ಸಂಸ್ಕರಿತ ಹೆಚ್.ಎನ್.ವ್ಯಾಲಿ ನೀರನ್ನು ಅಂತರ್ಜಲ ಮಟ್ಟ ಏರಿಸಲು  ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಕಿಡ್ನಿ ವೈಫಲ್ಯ, ಕ್ಯಾನ್ಸರ್, ಚರ್ಮರೋಗಗಳಿಗೆ ಜನ ಒಳಗಾಗುತ್ತಿದ್ದಾರೆ. ಈ ಕೂಡಲೇ ಮೂರನೇ ಹಂತದ ಶುದ್ಧೀಕರಣಕ್ಕೆ ಮಾ.6 ಆಯವ್ಯಯದಲ್ಲಿ ಅನುದಾನ ಮೀಸಲಿಡುವಂತೆ ಶಾಸಕರು ಮುಖ್ಯಮಂತ್ರಿ ಗಳ ಮನವೊಲಿಸಬೇಕು. ಇಲ್ಲದಿದ್ದಲ್ಲಿ ಕ್ಷೇತ್ರದ ಜನರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸಮಾಜ ಸೇವಕ ಸಂದೀಪ್ ರೆಡ್ಡಿ ಎಚ್ಚರಿಕೆ ನೀಡಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯ ಶ್ರಮಜೀವಿ ರೈತರ ಮುಗ್ಧತೆಯನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ಈಗಿನ ಸರಕಾರವೇ ಮುಂದೆ ನಿಂತು ಅಂತರ್ಜಲ ವೃದ್ದಿಯ ಹೆಸರಿನಲ್ಲಿ ನನ್ನ ಜನಕ್ಕೆ ವಿಷ ಕುಡಿಸುತ್ತಿದ್ದಾರೆ. ಆ ಮೂಲಕ ಜಿಲ್ಲೆಯು ಡಯಾಲಿಸಿಸ್ ರೋಗಿಗಳ ರಾಜಧಾನಿಯಾಗುವ ಪರಿಸ್ಥಿತಿ ನಿರ್ಮಾಣ ವಾಗುತ್ತಿರುವುದು ಆತಂಕ ಪಡುವ ಸಂಗತಿಯಾಗಿದೆ. ಅತಿ ಹೆಚ್ಚು ಬಾರಿ ಆಯವ್ಯಯ ಮಂಡಿಸಿದ ಕೀರ್ತಿಗೆ ಪಾತ್ರವಾದ ಸಿದ್ಧರಾಮಯ್ಯ ಅವರು ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಬಿಡುಗಡೆ ಮಾಡಿ ಜನತೆಯ ಪ್ರೀತಿಗೆ ಪಾತ್ರವಾಗುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ಮನವಿ ಮಾಡಿದರು.

ವ್ಯವಸ್ಥೆ ಕಲ್ಪಿಸಲು ಮಾ.6ರಂದು ಮಂಡನೆಯಾಗುವ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಆಗ್ರಹಿಸಿದರು.

ಇದನ್ನೂ ಓದಿ: Chikkaballapur News: ಒಳಮೀಸಲಾತಿಯಂತೆ ನೇಮಕಾತಿ ನಡೆಯದಿದ್ದರೆ ವಿಧಾನ ಸೌಧ ಮುತ್ತಿಗೆ ಖಚಿತ : ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ  ಎಚ್ಚರಿಕೆ.

ಅನುದಾನ ಮೀಸಲಿಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹಾಗೂ ಅಗತ್ಯವಿದ್ದರೆ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರ ಮನೆಗೆ ಮುತ್ತಿಗೆ ಹಾಕಲು ಸಿದ್ಧವಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ಪ್ರದೀಪ್ ಈಶ್ವರ್ ಅವರೇ ಚುನಾವಣೆಗೂ ಮುನ್ನ, ತಾವು ಶಾಸಕರಾಗುವುದಕ್ಕೂ ಪೂರ್ವ ದಲ್ಲಿ ಹೆಚ್.ಎನ್ ವ್ಯಾಲಿ(H.N.Valley) ನೀರಿನಿಂದ ಜಿನಜೀವನದ ಮೇಲೆ ಆಗಬಹುದಾದ ದುಷ್ಪರಿ ಣಾಮಗಳ ಬಗ್ಗೆ ತಾವು ಬಹಿರಂಗ ವೇದಿಕೆಗಳಲ್ಲಿ ಪುಂಖಾನುಪುಂಕವಾಗಿ ಭಾಷಣ ಮಾಡಿದ್ದನ್ನು ನೋಡಿ ನಾವು ಸಂತೋಷ ಪಟ್ಟಿದ್ದಿದೆ. ಆಗಲೇ ತಾವು ದೂರದೃಷ್ಟಿಯಿಂದ ಈ ನೀರಿನಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಿದ್ದು ಸರಿಯಿದೆ ಎಂದರು.

cbpm6f

ಹೆಚ್,ಎನ್.ವ್ಯಾಲಿ ನೀರಿನಿಂದಾಗಿ ಯುವಜನತೆಯಲ್ಲಿ ವಿಶೇಷವಾಗಿ ಕಿಡ್ನಿ ಸಂಬಂಧಿತ ಕಾಯಿಲೆ ಗಳು ಹೆಚ್ಚಾಗಬಹುದು ಎಂದು ಆಗ ಆತಂಕ ವ್ಯಕ್ತಪಡಿಸಿದ್ದಿರಿ. ಆಗ ನೀರು ಜಿಲ್ಲೆಗೆ ಹರಿದಿರಲಿಲ್ಲ. ಈಗ ಅದೇ ವಿಷವು ಕೆರೆಗಳ ಒಡಲಿಗೆ ನೀರು ಬಂದು ನಿಂತಿದೆ.ಕೊಳವೆ ಬಾವಿಗಳ ಮೂಲಕ ಬೆಳೆಗಳಿಗೆ ಹರಿದು,ಹಣ್ಣು ತರಕಾರಿಗಳ ಬಳಕೆ ಮೂಲಕ ಜನರ ದೇಹ ಸೇರಿದ್ದು ನಿಮ್ಮ ಮಾತು ಈಗ ನಿಜವಾಗು ತ್ತಿದೆ. ಆಗ ನಿಮಗೆ ಅಧಿಕಾರ ಇರಲಿಲ್ಲ, ಈಗ ನೀವು ಸಂವಿಧಾನ ಬದ್ಧ ಶಾಸಕಾಂಗದ ಅಧಿಕಾರ ಪಡೆದಿದ್ದೀರಿ.ವಿಚಿತ್ರವೆಂದರೆ 3ನೇ ಹಂತದ ಶುದ್ಧೀಕರಣದ ವಿಷಯದಲ್ಲಿ ಮೌನಕ್ಕೆ ಜಾರಿದ್ದೀರಿ. ನಿಮ್ಮ ಮೌನಕ್ಕೆ ಕಾರಣವೇನು ಜನತೆಯ ಮುಂದೆ ಬಹಿರಂಗಪಡಿಸಿ ಎಂದು ಆಗ್ರಹಿಸಿದರು. ಈಗ ಮೂರನೇ ಹಂತದ ಶುದ್ಧೀಕರಣದ ವಿಚಾರದಲ್ಲಿ ಮೌನ ವಹಿಸಿದ್ದಾರೆ ಎಂದು ಅಸಮಾಧಾನಕ್ಕೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಸರಕಾರವೇ ಮಾಡಿಸಿರುವ ಪರೀಕ್ಷೆಯಲ್ಲಿ ತರಕಾರಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆ ಯಾಗಿರುವುದು ಆತಂಕದ ವಿಷಯವೇ ಆಗಿದೆ. ಈ ವಿಷಯ ಶಾಸಕರಾದ ತಮ್ಮ ಗಮನಕ್ಕೆ ಬಂದಿ ಲ್ಲವೇ? ಅಥವಾ ಗೊತ್ತಿದ್ದೂ ಮೌನವಾಗಿದ್ದೀರೆಂದು ಭಾವಿಸಬಹುದೆ? ಶಾಸಕರಾಗಿ ಆಯ್ಕೆ ಯಾಗುವ ಮುನ್ನ ಜನರ ಆರೋಗ್ಯದ ಬಗ್ಗೆ ತೋರಿದ್ದ ಬದ್ಧತೆಯನ್ನು ಈಗಲೂ ಪ್ರದರ್ಶಿಸಿ, ಬಜೆಟ್‌ನಲ್ಲಿ ಹೆಚ್.ಎನ್ ವ್ಯಾಲಿ ನೀರಿಗೆ ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ತರಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಹೆಚ್.ಎನ್ ವ್ಯಾಲಿ ನೀರನ್ನು ಅಂತರ್ಜಲ ಮಟ್ಟ ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ ಎಂದು ಹೇಳುತ್ತಿದೆ. ಆದರೆ ಕಂದವಾರ ಕೆರೆಯಲ್ಲಿ ಸಂಗ್ರಹವಾಗುವ ಈ ನೀರಿನ ಸುತ್ತಮುತ್ತ ಕೊರೆಸಿರುವ ಬೋರ್‌ವೆಲ್‌ಗಳ ಮೂಲಕ ನಗರದ ವಾರ್ಡ್-15, 11, 13, 17, 12, ಹೀಗೆ ಈ ಐದು-ಆರು ವಾರ್ಡ್ಗಳಿಗೆ ಕುಡಿಯುವ ಉದ್ದೇಶಕ್ಕೆ ಈ ನೀರು ಪೂರೈಕೆ ಮಾಡಲಾಗುತ್ತಿದೆ.ಇದೇ ನೀರನ್ನು ಮನೆಗಳಿಗೆ ನೇರವಾಗಿ ಹರಿಸಲಾಗುತ್ತಿದೆ. ಈಜನರ ಆರೋಗ್ಯ ಏನಾಗಬೇಕು.ದಯವಿಟ್ಟು ಉತ್ತರಿಸಿ ಎಂದು ಪ್ರಶ್ನಿಸಿದರು.

ಜಿಲ್ಲೆಯ ರೈತರು ಶ್ರಮಜೀವಿಗಳು, ಪ್ರಯೋಗಶೀಲರು. ಹನಿ ನೀರಾವರಿ ಬಗ್ಗೆ ಜಗತ್ತಿಗೆ ಬೆಳಕು ಚೆಲ್ಲಬಲ್ಲ ಸಾಮರ್ಥ್ಯ ಉಳ್ಳವರು.ಹೆಚ್.ಎನ್.ವ್ಯಾಲಿ ನೀರಿನಿಂದಾಗಿ ತಾವು ಕಷ್ಟಪಟ್ಟು ಬೆಳೆದ ಹಣ್ಣು, ಹೂವು ತರಕಾರಿಗಳು ಬೇಗನೇ ಕೊಳೆಯಲು ಪ್ರಾರಂಭಿಸಿ ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಇವುಗಳ ಬಳಕೆಯಿಂದ ತೀವ್ರ ತರದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.

ನಾನು ಕಲೆ ಹಾಕಿದ ಮಾಹಿತಿಯ ಪ್ರಕಾರ ಹೆಚ್.ಎನ್ ವ್ಯಾಲಿ ನೀರು ಹರಿದ ಬಳಿಕ ಖಾಸಗಿ ಆಸ್ಪತ್ರೆ ಗಳಲ್ಲಿ ತಿಂಗಳಿಗೆ ಸುಮಾರು 600 ಜನರು 700 ಮಂದಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಸ್ಥಿತಿ ಉಂಟಾಗಿದೆ. ಇದರಿಂದ ಕ್ಯಾನ್ಸರ್, ಬ್ಲೂ ಬೇಬಿ ಸಿಂಡ್ರೋಮ್, ಥೈರಾಯ್ಡ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವ ಭೀತಿ ಎದುರಾಗಿದೆ. ಒಂದು ಲೆಕ್ಕದಲ್ಲಿ ಜಿಲ್ಲೆಯು ಡಯಾಲಿಸಿಸ್ ರೋಗಿಗಳ ರಾಜಧಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕ ಪಡುವ ಸಂಗತಿಯಾಗಿದೆ ಎಂದರು.

ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಹೆಚ್.ಎನ್ ವ್ಯಾಲಿ ನೀರಿಗೆ ಮೂರನೇ ಹಂತದ ಶುದ್ಧೀಕರಣ ಅವಶ್ಯಕವಾಗಿದೆ. ಬಜೆಟ್‌ನಲ್ಲಿ ಅನುದಾನ ಮೀಸಲಿಡದಿದ್ದರೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಪ್ರಗತಿಪರ ಸಂಘಟನೆಗಳು, ಬುದ್ಧಿಜೀವಿಗಳು, ಕಾನೂನು ತಜ್ಞರು ಹಾಗೂ ನೀರಾವರಿ ಹೋರಾಟಗಾರ ರೊಂದಿಗೆ ಬಂದ್ ನಡೆಸಲಾಗುತ್ತದೆ. ಆಗಲೂ ಕ್ರಮ ಕೈಗೊಳ್ಳದಿದ್ದರೆ ರೈತರು ಟ್ರ‍್ಯಾಕ್ಟರ್ ಮತ್ತು ಎತ್ತಿನ ಗಾಡಿಗಳೊಂದಿಗೆ ಬೆಂಗಳೂರು ಚಲೋ ಕಾರ್ಯಕ್ರಮ ಮಾಡಲಾಗುವುದು. ಇದಕ್ಕೆ ಆಸ್ಪದ ನೀಡದಂತೆ ಶಾಸಕರಾಗಿ ತಾವು ಬದ್ಧತೆ ಪ್ರದರ್ಶನ ಮಾಡಬೇಕಿದೆ ಎಂದು ಸವಿನಯವಾಗಿ ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ರಿಯಾಝ್, ರಮೇಶ್, ಶಿವಕುಮಾರ್, ವೆಂಕಟೇಶ್, ಶಾರದ, ಚೇತನ್, ಸುರೇಶ್, ಕಾರ್ತಿಕ್, ಶಿವಶಂಕರ್, ಮಹೇಶ್, ಮತ್ತಿತರರು ಇದ್ದರು.