ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande News: ವಿಶೇಷ ಚೇತನ ಮಕ್ಕಳಲ್ಲಿ ಅನುಕಂಪದ ಬದಲು ಆತ್ಮವಿಶ್ವಾಸ ತುಂಬಿ : ಮುನಿಕೃಷ್ಣಪ್ಪ

ಇಂದು ಜಗತ್ತಿನಲ್ಲಿ ಅನೇಕ ವಿಶೇಷಚೇತನ ಮಕ್ಕಳು ಕಠಿಣ ಪರಿಶ್ರಮದಿಂದ ದೊಡ್ಡ ದೊಡ್ಡ ಹುದ್ದೆ ಗಳನ್ನು ಅಲಂಕರಿಸಿದ್ದಾರೆ. ವಿಶೇಷಚೇತನರಿಗೆ ಕೇವಲ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದ ಅಗತ್ಯವಿದೆ. ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಸರ್ಕಾರದಿಂದ ಸಿಗುವಂತಹ ಸೌಲಭ್ಯ ಗಳನ್ನು ಬಳಸಿಕೊಂಡು ತಾವೂ ಸಹ ಸಾಧನೆ ಮಾಡಬೇಕು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ  ವಿಶೇಷ ಸಂಪನ್ಮೂಲ ಶಿಕ್ಷಕ ರಾಜಪ್ಪ ಮಾತನಾಡಿದರು.

ಗುಡಿಬಂಡೆ: ವಿಶೇಷ ಅಗತ್ಯವುಳ್ಳ ಮಕ್ಕಳ ಮೇಲೆ ಪೋಷಕರು ಕೇವಲ ಅನುಕಂಪ ತೋರಿದರೆ ಅವರು ಸಾಧನೆ ಮಾಡುವಲ್ಲಿ ವಿಫಲರಾಗಬಹುದು. ಬದಲಿಗೆ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿದರೆ, ಅವರು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮಗ್ರ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಅಗತ್ಯ ವುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ  ಮಾತನಾಡಿದ ಅವರು, ಈ ಹಿಂದೆ 'ಅಂಗ ವಿಕಲರು' ಎಂದು ಕರೆಯಲ್ಪಡುತ್ತಿದ್ದವರನ್ನು ಈಗ ಗೌರವಯುತವಾಗಿ 'ವಿಶೇಷಚೇತನರು' ಎಂದು ಕರೆಯಲಾಗುತ್ತಿದೆ. ಇವರಿಗೆ ದೈಹಿಕವಾಗಿ ಮಾತ್ರ ನ್ಯೂನತೆಗಳಿರಬಹುದೇ ಹೊರತು, ಮಾನಸಿಕವಾಗಿ ಇವರು ಅತ್ಯಂತ ಸದೃಢರಾಗಿರುತ್ತಾರೆ. ಇವರನ್ನು ಕೀಳಾಗಿ ನೋಡದೆ, ನಮ್ಮಂತೆ ಸಮಾನರು ಎಂದು ಭಾವಿಸಬೇಕು. ಪೋಷಕರು ಮತ್ತು ಶಿಕ್ಷಕರು ಇವರ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡಬೇಕು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: Gudibande News: ಕಾಯಕ ಗ್ರಾಮ ಯೋಜನೆಯಡಿ ಎಲ್ಲೋಡು ಗ್ರಾ.ಪಂ. ದತ್ತು : ಸಿಇಒ ನವೀನ್ ಭಟ್

ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ಮಾತನಾಡಿ, ಇಂದು ಜಗತ್ತಿನಲ್ಲಿ ಅನೇಕ ವಿಶೇಷಚೇತನ ಮಕ್ಕಳು ಕಠಿಣ ಪರಿಶ್ರಮದಿಂದ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿಶೇಷಚೇತನರಿಗೆ ಕೇವಲ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಅಗತ್ಯವಿದೆ. ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಸರ್ಕಾರದಿಂದ ಸಿಗುವಂತಹ ಸೌಲಭ್ಯ ಗಳನ್ನು ಬಳಸಿಕೊಂಡು ತಾವೂ ಸಹ ಸಾಧನೆ ಮಾಡಬೇಕು. ವಿಶೇಷವಾಗಿ ಪೋಷಕರು ದೇವರ ಶಾಪದಿಂದ ತಮ್ಮ ಮಕ್ಕಳಿಗೆ ಈ ರೀತಿಯಾಗಿದೆ ಎಂಬ ಮನೋಭಾವ ಬಿಡಬೇಕು. ಚಿಕ್ಕ ವಯಸ್ಸಿ ನಲ್ಲಿ ಮದುವೆಯಾಗುವುದು, ಅನುವಂಶೀಯತೆ ಸೇರಿದಂತೆ ಹಲವು ವೈಜ್ಞಾನಿಕ ಕಾರಣ ಗಳಿಂದ ಮಕ್ಕಳು ವೈಕಲ್ಯತೆಯನ್ನು ಹೊಂದುತ್ತಾರೆ. ಈ ಕುರಿತು ಎಲ್ಲರೂ ಜಾಗೃತಾಗಬೇಕು ಎಂದರು.

ಇದೇ ಸಮಯದಲ್ಲಿ ಎಸ್.ಸಿ/ಎಸ್.ಟಿ ಸಮನ್ವಯ ಸಮಿತಿಯ ಅಧ್ಯಕ್ಷ ಶ್ರೀರಾಮಪ್ಪ ವಿಶೇಷ ಚೇತನ ಮಕ್ಕಳ ಸೌಲಭ್ಯಗಳ ಬಗ್ಗೆ ತಿಳಿಸುತ್ತಾ, ಈ ರೀತಿಯ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ವಿಶೇಷ ಸಂಪನ್ಮೂಲ ಶಿಕ್ಷಕ ರಾಜಪ್ಪ, ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಜೊತೆಗೆ ವಿಶೇಷ ಚೇತನ ಮಕ್ಕಳಿಗೂ ಸಹ ಶಿಕ್ಷಣ ನೀಡಬೇಕೆಂಬುದು ಶಿಕ್ಷಣ ಇಲಾಖೆಯ ಉದ್ದೇಶವಾಗಿದೆ. ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣದ ವಿಚಾರದಲ್ಲಿ ಏನೇ ಸಮಸ್ಯೆಗಳಿದ್ದರೂ ತಾವುಗಳು ನನ್ನನ್ನು ನೇರವಾಗಿ ಸಂಪರ್ಕ ಮಾಡಿ ಎಂದರು.

ಈ ಸಮಯದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ರಾಘವೇಂದ್ರ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮಂಜುನಾಥ್, ಎನ್.ಪಿ.ಎಸ್ ನೌಕರರ ಸಂಘದ ಮುರಳಿ, ಬಿ.ಆರ್.ಪಿ ಅನಿತಾ, ಶಿಕ್ಷಕರಾದ ಆದಿನಾರಾಯಣಪ್ಪ, ಮನೋಹನ್ ಸೇರಿದಂತೆ ಹಲವರು ಹಾಜರಿದ್ದರು.