ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chimul Election: ಚಿಮುಲ್ ಚುನಾವಣೆಗೂ ಮುನ್ನ ಕಾಂಗ್ರೆಸ್‌ನಲ್ಲಿ ಒಳಪೈಪೋಟಿ : ಪುಟ್ಟು ಆಂಜಿನಪ್ಪಗೆ ವಿರೋಧ ಬಲ

ಚಿಮುಲ್ ನಿರ್ದೇಶಕ ಮಂಡಳಿ ಚುನಾವಣೆಯನ್ನು ಎದುರಿಸುವ ಸಂದರ್ಭದಲ್ಲಿ ಸಹ, ಸಮೂಹ ನಾಯಕತ್ವ ಮತ್ತು ಸಂಘಟಿತ ಪ್ರಯತ್ನಗಳ ಅಗತ್ಯವಿದ್ದರೂ, ಆಂಜಿನಪ್ಪ ಪುಟ್ಟು ಅವರನ್ನು ಮುಂದಿಟ್ಟು ತೋರಿಸುವ ಪ್ರಯತ್ನ ಪಕ್ಷದ ಒಗ್ಗಟ್ಟಿಗೆ ಧಕ್ಕೆ ತರುತ್ತಿದೆ ಎಂದು ಒಂದು ವರ್ಗ ಆಕ್ಷೇಪ ವ್ಯಕ್ತಪಡಿಸಿದೆ.

ಪುಟ್ಟು ಆಂಜಿನಪ್ಪ

ಶಿಡ್ಲಘಟ್ಟ: ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ರಾಜಕಾರಣದಲ್ಲಿ ಆಂಜಿನಪ್ಪ ಪುಟ್ಟು ಅವರನ್ನು ಮುಂದಿಟ್ಟು ನಡೆಯುತ್ತಿರುವ ಚಟುವಟಿಕೆಗಳು ಪಕ್ಷದೊಳಗೆ ಗಂಭೀರ ಅಸಮಾಧಾನಕ್ಕೆ ಕಾರಣವಾಗುತ್ತಿವೆ.

ರಾಜೀವ್ ಗೌಡರನ್ನು ಪಕ್ಷದಿಂದ ಅಮಾನತು ಮಾಡಿರುವ ಬಳಿಕ ನಾಯಕತ್ವದ ಖಾಲಿತನ ಉಂಟಾದರೂ, ಅದನ್ನು ವ್ಯಕ್ತಿಕೇಂದ್ರಿತ ರಾಜಕಾರಣದಿಂದ ತುಂಬುವ ಪ್ರಯತ್ನಗಳು ಪಕ್ಷಕ್ಕೆ ಹಾನಿಕಾರಕವಾಗಬಹುದು ಎಂಬ ಅಭಿಪ್ರಾಯ ಒಂದು ಪಾಳೆಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ.

cbpm6shashidara

ಆಂಜಿನಪ್ಪ ಪುಟ್ಟು ಅವರ ಬೆಂಬಲಿಗರು ಅವರನ್ನು ಮುಂದಿನ ಅಭ್ಯರ್ಥಿಯಾಗಿ ಬಿಂಬಿ ಸಲು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವ ಪ್ರಚಾರವು, ಹಿರಿಯ ಕಾರ್ಯಕರ್ತರು ಹಾಗೂ ಪಕ್ಷನಿಷ್ಠ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ನೆಲಮಟ್ಟದಲ್ಲಿ ಪಕ್ಷಕ್ಕಾಗಿ ದುಡಿದ ಅನೇಕ ಕಾರ್ಯಕರ್ತರನ್ನು ಕಡೆಗಣಿಸಿ, ನಿರ್ದಿಷ್ಟ ವ್ಯಕ್ತಿಯನ್ನೇ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆ ಎಂಬ ಆರೋಪ ಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: Chimul Election: ಸಚಿವರ ಬೆಂಬಲದಿಂದ ಚಿಮುಲ್ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಗೆಲ್ಲುವ ವಿಶ್ವಾಸವಿದೆ: ಕೆ.ಆರ್.ರಾಜಣ್ಣ

ಚಿಮುಲ್ ನಿರ್ದೇಶಕ ಮಂಡಳಿ ಚುನಾವಣೆಯನ್ನು ಎದುರಿಸುವ ಸಂದರ್ಭದಲ್ಲಿ ಸಹ, ಸಮೂಹ ನಾಯಕತ್ವ ಮತ್ತು ಸಂಘಟಿತ ಪ್ರಯತ್ನಗಳ ಅಗತ್ಯವಿದ್ದರೂ, ಆಂಜಿನಪ್ಪ ಪುಟ್ಟು ಅವರನ್ನು ಮುಂದಿಟ್ಟು ತೋರಿಸುವ ಪ್ರಯತ್ನ ಪಕ್ಷದ ಒಗ್ಗಟ್ಟಿಗೆ ಧಕ್ಕೆ ತರುತ್ತಿದೆ ಎಂದು ಒಂದು ವರ್ಗ ಆಕ್ಷೇಪ ವ್ಯಕ್ತಪಡಿಸಿದೆ. ಅನುಭವ,ಸಂಘಟನೆ ಮೇಲಿನ ಹಿಡಿತ ಮತ್ತು ಎಲ್ಲಾ ವರ್ಗದ ಒಪ್ಪಿಗೆ ಇಲ್ಲದೆ ನಾಯಕತ್ವ ಹೇರಿಕೆಗೆ ಯತ್ನಿಸುವುದು ಪಕ್ಷವನ್ನು ದುರ್ಬಲ ಗೊಳಿಸಬಹುದು ಎಂಬ ಕೂಗು ಕೇಳಿ ಬರುತ್ತಿದೆ.

rajeevgowda

ಒಟ್ಟಾರೆ, ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ವ್ಯಕ್ತಿ ಪ್ರಧಾನ ರಾಜಕಾರಣಕ್ಕಿಂತ ಪಕ್ಷದ ಶಿಸ್ತಿಗೆ ಆದ್ಯತೆ ನೀಡಬೇಕೆಂಬ ಧ್ವನಿ ದಿನೇದಿನೇ ಬಲವಾಗುತ್ತಿದ್ದು, ಮುಂದಿನ ಚುನಾವಣೆಗೆ ಮುನ್ನ ಈ ಅಸಮಾಧಾನ ನಿವಾರಣೆ ಆಗದಿದ್ದರೆ ಪರಿಣಾಮಗಳು ಗಂಭೀರವಾಗುವ ಸಾಧ್ಯತೆ ಇದೆ.