ಚಿಕ್ಕಬಳ್ಳಾಪುರ: ಎಸ್ಸಿ ಎಸ್ಟಿಗೆ ಬಂದ 3 ಕೋಟಿ ಅನುದಾನವನ್ನು ಚಿಕ್ಕಬಳ್ಳಾಪುರ ದಿಂದ ಚಿಂತಾ ಮಣಿಗೆ ತೆಗೆದು ಕೊಂಡು ಹೋಗಿದ್ದಾರೆ ಎಂದು ಸಚಿವರ ವಿರುದ್ಧ ದೂರಲಾಗಿದೆ. ಇದು ಅಪ್ಪಟ ಸುಳ್ಳು ಎಂದು ಭರಣಿ ವೆಂಕಟೇಶ್ ದೂರಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಚಿವರ ಬಗ್ಗೆ ಮಾಡಿರುವ ಸುಳ್ಳು ಆರೋಪದ ಬಗ್ಗೆ ಸ್ಪಷ್ಟನೆ ನೀಡಲು ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಬುಧವಾರ ನಾವು ಸುದ್ದಿಗೋಷ್ಠಿ ನಡೆಸುವ ವಿಚಾರ ತಿಳಿಯುತ್ತಿದ್ದಂತೆ ಯಾರೋ ಒಬ್ಬರು ಪೋನ್ ಸರ್ ಮಾಡಿ ತಪ್ಪಾಗಿದೆ. ಬೈ ಮಿಸ್ಟೇಕ್ ಅದನ್ನು ಮಾಧ್ಯಮಕ್ಕೆ ಕೊಟ್ಟು ಬಿಟ್ಟಿದ್ದಾರೆ. ಅದೆಲ್ಲಾ ಸುಳ್ಳು, 3 ಕೋಟಿ ಅನುದಾನದ ಪೈಕಿ 99 ಲಕ್ಷ ಮೊದಲು ಕಂತಾಗಿ ಬಿಡುಗಡೆ ಮಾಡಿದ್ದು ಆಕ್ಷನ್ ಪ್ಲಾನ್ ಆಗಿದೆ. ಕಾಮಗಾರಿ ನಡೆಯುತ್ತಿದೆ. ಸುದ್ದಿಗೋಷ್ಟಿಯಲ್ಲಿ ಇದನ್ನು ಪ್ರಸ್ತಾಪ ಮಾಡಬೇಡಿ ಎಂದು ತಿಳಿಸಿದ್ದಾರೆ. ಇದಕ್ಕೆ ಅರ್ಥ ಏನು? ಮೀಡಿಯಾಗೆ ಕೊಟ್ಟು ಪ್ರಸಾರ ಆದ ಮೇಲೆ ನಿಲ್ಲಿಸಿ ಎಂದರೆ ಹೇಗೆ ಎಂದ ಅವರು ಈ ಸುದ್ದಿ ನೋಡಿರುವ ಜನತೆ ಹೌದು ಇದು ನಿಜವೇನೋ ಎಂದು ಅರಿಯುವುದಿಲ್ಲವೆ ? ಎಂದು ಬೇಸರಿಸಿದರು.
2025-26ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಎನ್ನುವ ಬದಲಿಗೆ ಚಿಂತಾಮಣಿ ವಿಧಾನ ಸಭಾ ಕ್ಷೇತ್ರ ಎಂದು ತಪ್ಪಾಗಿ ನಮೂದಾಗಿದೆ ಅಷ್ಟೇ.ಇದನ್ನು ಅರಿಯದ ಸ್ಥಳಿಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ದೀನ ದಲಿತ ವಿರೋಧಿ, ನನ್ನ ಕ್ಷೇತ್ರದ ಪಜಾತಿ, ವರ್ಗದ ಅಭಿವೃದ್ದಿಗೆ ಬಂದಿದ್ದ 3 ಕೋಟಿಯನ್ನು ಚಿಂತಾಮಣಿಗೆ ಸಾಗಿಸಿ ನಮ್ಮ ದಲಿತರಿಗೆ ದ್ರೋಹ ಬಗೆದಿದ್ದಾರೆ.ಶಾಸಕ ಪ್ರದೀಪ್ ಈಶ್ವರ್ ಅವರು ಅಂಬೇಡ್ಕರ್ ಜಯಂತಿಗೆ ಬರದಿರಲು ಇದೂ ಒಂದು ಮುಖ್ಯ ಕಾರಣ. ದಲಿತರ ಅಭಿವೃದ್ದಿಯ ತಂಟೆಗೆ ಬಂದರೆ ನಾನು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಸ್ವಾಮಿ ನಮ್ಮ ಸಚಿವರು ನೀವು ಹೇಳಿದಂತೆ ಅಲ್ಲ. ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡಲು ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದರು.
ಉಸ್ತುವಾರಿ ಸಚಿವವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ೩ಕೋಟಿ ಹಣ ಬಳಸಿಕೊಂಡೇ ಅಭಿವೃದ್ದಿ ಮಾಡಬೇಕಿಲ್ಲ.ಅದಿರಲಿ ಅವರು ಸಚಿವರಾದ ಮೇಲೆ ಇಲ್ಲಿಗೆ ಎಷ್ಟುಕೋಟಿ ಅನುದಾನ ತಂದಿದ್ದಾರೆ ಎಂಬ ಲೆಕ್ಕ ಹೇಳುತ್ತೇನೆ ಎಂದರು.
ನಂದಿ ಮೆಡಿಕಲ್ ಸಂಶೋಧನಾ ಕೇಂದ್ರಕ್ಕೆ ಬಾಕಿಯಿದ್ದ 340 ಕೋಟಿ ಬಿಡುಗಡೆ, ಹೊಸ ಕಟ್ಟಡ ದಲ್ಲಿ ವೈದ್ಯಕೀಯ ಉಪಕರಣ ಖರೀದಿ ಮಾಡಲು 40 ಕೋಟಿ.ರಸ್ತೆ ಅಪಘಾತ ತಪ್ಪಿಸಲು ವೈದ್ಯ ಕೀಯ ಕಾಲೇಜು ಬಳಿ ಕಿರಿದಾದ ರಸ್ತೆ ಅಗಲೀಕರಣ ಮಾಡಲು ಲೋಕೋಪಯೋಗಿ ಇಲಾಖೆಯಿಂದ 2.40 ಕೋಟಿ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಕೆಇಎ ಡಯಾಗ್ನಸ್ಟಿಕ್ ಸೆಂಟರ್ ಮಾಡಲು 8.20 ಕೋಟಿ ಇಪ್ಪತ್ತು ಲಕ್ಷ,,ಎಂ.ಆರ್.ಐ ಯಂತ್ರ ಅಳವಡಿಸಲು 11 ಕೋಟಿ, ಸಿಟಿ ಸ್ಕ್ಯಾನ್ ಉನ್ನತೀ ಕರಿಸಲು 7 ಕೋಟಿ ಕೊಟ್ಟಿದ್ದಾರೆ.
ಯುಜಿಡಿ ನೀರು ಗೋಪಾಲಕೃಷ್ಣ ಕರೆಗೆ ಹರಿಯುವುದನ್ನು ತಡೆಯಲು 30 ಕೋಟಿ ಕೊಡಿಸಿದ್ದಾರೆ. 15ನೇ ಹಣಕಾಸು ಯೋಜನೆಯ 40 ಕೋಟಿ ಒಟ್ಟು 70 ಕೋಟಿಯಿದೆ. ಇದಕ್ಕೆ ಆಕ್ಷನ್ ಪ್ಲಾನ್ ಮಾಡಿ ಪಕ್ಷದಿಂದ ಇಷ್ಟು ಅನುದಾನ ಬಂದಿದೆ ಎಂದು ಸಭೆ ಮಾಡಿ ನಗರಸಭಾ ಸದಸ್ಯರಿಗೆ ಹಂಚಿ ಅಭಿವೃದ್ದಿ ಮಾಡಿದ್ದಿದ್ದರೆ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗುತ್ತಿರಲಿಲ್ಲವೇ? ಇದನ್ನು ಬಿಟ್ಟು ಶಾಸಕರು ತಮಗೆ ಸಂಬಂಧಿಸದ ವಿಚಾರಗಳಿಗೆ ತಲೆಹಾಕುತ್ತಾ ನಗೆಪಾಟಲಿಗೆ ಈಡಾಗಿದ್ದಾರೆ ಎಂದು ದೂರಿದರು.
ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿಗೆ 10 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಸರಕಾರಿ ಪದವಿ ಮಹಿಳಾ ಕಾಲೇಜಿಗೆ 6 ಕೋಟಿ ಅನುದಾನ,ಸರಕಾರಿ ಪ್ರಥಮದರ್ಜೆ ಕಾಲೇಜು (ಮುನ್ಸಿಪಲ್) ಅಭಿವೃದ್ದಿಗೆ 6 ಕೋಟಿ, ನಂದಿಬೆಟ್ಟಧರ್ಳಳೀ ದೀಪಾಲಂಕಾರರ್ಖಖೇ 9 ಕೋಟಿ. ಅಂತರಾಷ್ಟ್ರೀಯ ಹೂವಿನ ಮಾರುಕಟ್ಟೆಗೆ 140 ಕೋಟಿ ರೂಪಾಯಿ ಕ್ಯಾಬಿನೆಟ್‌ನಲ್ಲಿ ಇಟ್ಟು 20 ಎಕರೆ ಭೂ ಮಂಜೂರಿ ಮಾಡಿಸಿದ್ದಾರೆ. ಇದು ನಿಮ್ಮದೇ ವಿಧಾನಸಭಾ ಕ್ಷೇತ್ರ.ಶಾಸಕರ ಅನುದಾನ ಅಲ್ಲ ಸ್ವಾಮಿ, ಚಿಂತಾಮಣಿಗೆ ತೆಗೆದುಕೊಂಡು ಹೋಗುವ ದರ್ದು ಅವರಿಗಿಲ್ಲ. ನಿಮಗೆ ಟಿಕೆಟ್ ಕೊಡಿಸಿ ಎಂಎಲ್‌ಎ ಮಾಡಿದವರಿಗೆ ನೀವು ಹೀಗೆ ನೀಚವಾಗಿ ಮಾತನಾಡುವುದು ಶೋಭೆ ತರುವು ದಿಲ್ಲ. ಉಪಕಾರ ಮಾಡಿದವರಿಗೆ ಅಪಕಾರ ಮಾಡಬಾರದು ಎಂದು ಹರಿಹಾಯ್ದರು.
ನಿಮ್ಮದೇ ಕ್ಷೇತ್ರಕ್ಕೆ ಸಚಿವರು ಕೊಟ್ಟಿರುವ ಕೋಟಿಕೋಟಿ ಅನುದಾನದ ಪಟ್ಟಿ ಇನ್ನೂ ಇದೆ ಕೇಳಿ ಸ್ವಾಮಿ ಎಂದ ಅವರು ಮಂಚೇನಹಳ್ಳಿ ಆಸ್ಪತ್ರೆಗೆ ಸಲಕರಣ ಲ್ಯಾಬ್‌ಗೆ 3.80 ಲಕ್ಷ,ನಂದಿ ಸಿ.ಹೆಚ್.ಸಿಗೆ ೫ ಕೋಟಿ, ರೋಪ್‌ವೇ ಕಾಮಗಾರಿಗೆ ೧೦೦ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು ಕಾಮಗಾರಿ ನಡೆಯುತ್ತಿದೆ. ಮಂಚೇನಹಳ್ಳಿ ಪ್ರಜಾ ಸೌದ 8 ಕೋಟಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಉನ್ನತೀಕರಣಕ್ಕೆ 44 ಲಕ್ಷ ಅಭಿವೃದ್ಧಿಗೆ ನೀಡಿದ್ದಾರೆ. ಇವು ಯಾವುದೇ ಎಂ.ಎಲ್.ಎ ಫಂಡ್ ಅಲ್ಲ. ನಿಮ್ಮ 3 ಕೋಟಿ ಸನುದಾನ ತೆಗದುಕೊಂಡು ಹೋಗಿ ಚಿಂತಾಮಣಿಯನ್ನು ಸಿಂಗಾಪುರ ಮಾಡಿ ಕೊಳ್ಳುವ ಇರಾದೆ ನಮ್ಮ ಸಚಿವರಿಗೆ ಇಲ್ಲ ಎಂಬುದನ್ನು ಅರಿತರೆ ಒಳಿತು ಎಂದು ಮಾತಿನಲ್ಲೇ ತಿವಿದರು.
ನಿಮಗೆ ಟಿಕೆಟ್ ಕೊಡಿಸಲು ನಾವು ಒತ್ತಾಯ ಮಾಡಿದ್ದೇವೆ.ನಿಮಗೆ ಸೊಂಟದ ಮೇಲೆ ಸರಿಯಾಗಿ ಪ್ಯಾಂಟ್ ನಿಲ್ಲುತ್ತಿರಲಿಲ್ಲ.ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಊರು ಎಲ್ಲಿದೆ ಎಂಬುದು ನಿಮಗೆ ಗೊತ್ತಿಲ್ಲ, ಆದರೂ ನಿಮ್ಮನ್ನು ಹೊತ್ತು ಮೆರೆಸಿಕೊಂಡು ಗೆಲ್ಲಿಸಿ ಕೊಂಡು ಬಂದಿದ್ದೇವೆ.ನಿಮಗೆ ಪರಿಜ್ಞಾನ ಇದೆಯಾ, ನಮ್ಮ ಮೇಲೆ ಎಫ್‌ಐಆರ್ ಆಗಿದೆ. ಇವರಿಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬಂದಿದ್ದೇವೆ.ಸುರ್ಜೆವಾಲ ಮುಂದೆ ಪೆರೇಡ್ ಮಾಡಿ ಗೆಲ್ಲಿಸಿಕೊಂಡು ಬಂದಿದ್ದೇವೆ. ಶಿಡ್ಲಘಟ್ಟ ಶಾಸಕರು ಎಂತಹವರ ಮೇಲೆ ನೀವು ಸೋತಿದ್ದು ಎಂದು ಹೇಳುತ್ತಿದ್ದಾರೆ. ನಿಮಗೇನಾದರೂ ಪರಿಜ್ಞಾನ ಇದೆಯಾ? ನಿಮ್ಮ ಪರಿಶ್ರಮದ್ದು ತೆಗೆದರೆ ಇಷ್ಟು ಇದೆ ಎಂದು ಕಿಡಿಕಿಡಿಯಾದರು.
ಬೀಡಗಾನಹಳ್ಳಿ ಸಡವೆ. ನಂಬರ್ 59/1, 49/1, 19.37 ಕುಂಟೆ ಪೈಕಿ ಸರಕಾರಿ ಬಳಕೆಗೆ ಮೀಸಲಾಗಿರು ಭೂಮಿ ಇರುವ ಸಿಎ ಸೈಟ್ 27 ಸಾವಿರ ಅಡಿ ಪರಿಶ್ರಮ ನೀಟ್ ಅಕಾಡೆಮಿಗೆ ಟೌನ್ ಪ್ಲಾನಿಂಗ್ ಮೂಲಕ ಮಾಡಿಕೊಂಡಿದ್ದೀಯಾ? ಅದು ಗೊತ್ತಿದೆಯಾ. ದೇವರು ಒಳ್ಳೆಯದು ಮಾಡ್ತಾರಾ ಎಂದು ಪ್ರಶ್ನಿಸಿದರು.
ನೀವು ನಮಗೆ ಗೌರವಾನ್ವಿತ ಶಾಸಕರು. ಬಹಳಷ್ಟು ಕೆಲಸ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡಿ ಬೇಡ ಎಂದು ಹೇಳುವುದಿಲ್ಲ. 40 ಕೋಟಿ ಯುಜಿಡಿ ಕೆಲಸ ಮಾಡಿಸಿ. ಕಂದವಾರ ರಸ್ತೆ 3 ಬಾರಿ ಟೆಂಡರ್ ಆಗಿದೆ. ಆದರೂ ರಸ್ತೆ ಆಗಲು ಬಿಟ್ಟಿಲ್ಲ. ತೆಗೆದಿಡಲಾ ನಿಮ್ಮ ಪುಸ್ತಕನಾ? ನಿಮ್ಮ ಕಮಿಷನ್ ಗೋಸ್ಕರ ಕ್ಯಾನ್ಸಲ್ ಮಾಡಿದ್ದೀರಾ?.ಪಕ್ಷದ ಕಾರಣಕ್ಕಾಗಿ ನಾವು ಸುಮ್ಮನಿದ್ದೇನೆ.ಸಾರ್ವಜನಿಕರ ಹಣ ಸಾರ್ವಜನಿಕರಿಗೆ ಬಳಸಿ ಯಾರಪ್ಪನ ಸ್ವತ್ತೂ ಅಲ್ಲಸ್ವಾಮಿ ಎಂದು ಆಕ್ಷೇಪಿಸಿದರು.
ಗಂಗಾಕಲ್ಯಾಣ ಯೋಜನೆಯಲ್ಲಿ ದಲಿತರಿಗೆ ಒಂದು ಬೋರ್ವೆಲ್ ಹಾಕಿಸಿಕೊಡಲು ಡ್ರಿಲ್ಲಿಂಗ್ ಓನರ್ ಬಳಿ ಪ್ರತಿ ಫಲಾನುಭವಿಯಿಂದ ತಪ್ಪು ಅಡಿಗಳ ಲೆಕ್ಕ ನೀಡಿ 1 ಲಕ್ಷ ಲಂಚ ನೀಡಲು ಕದಿಯುತ್ತಿದ್ದಾರೆ. ಶಾಸಕರ ತಮ್ಮ ಪಿ ಎ, ತಮ್ಮ ಈ ದಂಧೆಯಲ್ಲಿ ಮುಳುಗಿದ್ದಾರೆ ಎಂದು ದೂರಿದರು.
ನಮ್ಮ ಸರಕಾರ ಹೈಕಮಾಂಡ್ ಇವರನ್ನು ಸರಿ ಮಾಡುತ್ತಾರೆಂದು ಸುಮ್ಮನಿದ್ದೆವು. ಆದರೂ ಆಕೆಲಸ ಆಗಲಿಲ್ಲ. ಹೀಗಾಗಿ ಮಾತನಾಡಬೇಕಾಗಿದೆ. ಇವರ ಶಾಸಕರಾದ ಮೇಲೆ ಯಾವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ ತಿಳಿಸಲು ಎಂದ ಅವರು ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು 18೮ ಮಂದಿ ಇದ್ದರೂ ಅವರನ್ನು ಪ್ರಾಡ್‌ಗಳು ಎಂದೆಲ್ಲಾ ಅವಮಾನ ಮಾಡಿ ಪಕ್ಷ ಬಿಡುವಂತೆ ಮಾಡಿದರು. ಪಿಎಲ್ಡಿ ಬ್ಯಾಂಕ್ ಒಂದು ಸ್ಥಾನ ಗೆಲ್ಲಲಿಲ್ಲ. ಹಾಲು ಒಕ್ಕೂಟದಲ್ಲಿ ಎಸ್ಸಿಗೆ ಒಂದು ಎಸ್ಟಿಗೆ ಒಂದು ಸ್ಥಾನ ಕೊಡುವುದಾಗಿ ವಾಗ್ದಾನ ನೀಡಿದ್ದರು. ಈ ಕೆಲಸ ಮಾಡಿದ್ದಾರಾ? ಪಕ್ಷ ಗೆದ್ದಿದೆ ಹೇಳಿ, ನಮ್ಮ ಸಮುದಾಯದ ನಾಯಕರ ನಡುವೆ ಬೆಂಕಿ ಇಟ್ಟಿರಿ? ಪೆರೇಸಂದ್ರದಲ್ಲಿ ರಾಜಣ್ಣ ಸೋಲುವಂತೆ ಮಾಡಿದರಿ. ಈಗಲೂ ಅವಕಾಶ ಇದೆ. ಪಕ್ಷದ ಗೌರವ ಕಳೆಯದಂತೆ ನಡೆಸಿಕೊಂಡು ಬನ್ನಿ ನಮಗೆ ಅಷ್ಟೇ ಸಾಕು ಎಂದು ಮಾತು ಮುಗಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಕಲಚಿಂತೆ ರಾಜಣ್ಣ, ಮೋಹನ್‌ರೆಡ್ಡಿ, ಆವುಲರೆಡ್ಡಿ, ಮಂಚೇನಹಳ್ಳಿ ಪ್ರಕಾಶ್, ಶೆಟ್ಟಿವಾರಹಳ್ಳಿ ಶ್ರೀನಿವಾಸ್, ರಾಜೇಶ್, ಶಂಕರ್, ಚಂದ್ರಣ್ಣ, ಜಾವಿದ್ ಪಾಷ, ನುಗಿತಹಳ್ಳಿ ರವಿ ಮತ್ತಿತರರು ಇದ್ದರು.