ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ದೇಶದಲ್ಲಿ ಅಧಿಕಾರಕ್ಕೋಸ್ಕರವೇ ಮತಗಳ್ಳತನ ಎಂಬ ಅಡ್ಡದಾರಿ ಹಿಡಿಯುವುದು ಮಹಾ ಮೋಸ

ದೇಶದಲ್ಲಿ ಬಿಜೆಪಿ ಪಕ್ಷದವರು ಮತ ಕಳ್ಳತನದಂತಹ ದುಸ್ಸಾಹಕ್ಕೆ ಕೈ ಹಾಕಿದ ಪರಿಣಾಮ ವಾಗಿ ದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಬಿಹಾರ್ ಮಾತ್ರ ವಲ್ಲದೇ ರಾಜ್ಯದ ಹಲವು ಕಡೆ ಮತ ಕಳ್ಳತನದಂತಹ ಘಟನೆಗಳು ನಡೆದಿವೆ. ಬಿಜೆಪಿ ಸೇರಿದಂತೆ ಕೋಮುವಾದಿ ಪಕ್ಷಗಳು ದೇಶದಲ್ಲಿ ಅಧಿಕಾರಕ್ಕೋಸ್ಕರ ಆಯೋಗದ ಮೂಲಕ ನಡೆಸುತ್ತಿರುವ ಮತಗಳ್ಳತನ ನಿಲ್ಲಬೇಕು

ಮತಗಳ್ಳತನ ಎಂಬ ಅಡ್ಡದಾರಿ ಹಿಡಿಯುವುದು ಮಹಾ ಮೋಸ

ಶಿಡ್ಲಘಟ್ಟ ನಗರದಲ್ಲಿ ಆಯೋಜಿಸಿದ್ದ ವೋಟ್ ಚೋರಿ ಕುರಿತು ಸಹಿ ಸಂಗ್ರಹ ಅಭಿಯಾನಕ್ಕೆ ಮಾಜಿ ಸಚಿವ ವಿ ಮುನಿಯಪ್ಪ ಚಾಲನೆ ನೀಡಿದರು. -

Ashok Nayak
Ashok Nayak Nov 10, 2025 11:05 PM

ಶಿಡ್ಲಘಟ್ಟ: ಮತಗಳ್ಳತನ ಎಲ್ಲಿಯೂ ಆಗಬಾರದು. ಆ ನಿಟ್ಟಿನಲ್ಲಿ ನಾವು ಚುನಾವಣೆ ಆಯೋಗದ ಕಣ್ಣು ತೆರೆಸಬೇಕಿದ್ದು. ಸಂವಿಧಾನದ ರಕ್ಷಣೆಗಾಗಿ ಮತಗಳ್ಳತನ ಅಭಿಯಾನ ಮಾಡುತ್ತಿದ್ದೇವೆ. ಮತ ಹಾಕೋದು ಪ್ರತಿಯೊಬ್ಬರ ಅಧಿಕಾರವಾಗಿದೆ. ಇದರಲ್ಲಿ ಮೋಸ ಆಗಬಾರದು. ದೇಶದಲ್ಲಿ ಬದಲಾವಣೆಯ ಅವಶ್ಯಕತೆಯಿದ್ದು, ಅದನ್ನೇ ಕಾಂಗ್ರೆಸ್ ಮಾಡು ತ್ತಿದೆ ಎಂದು ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು ಹೇಳಿದರು.

ನಗರದ ಬಸ್ ನಿಲ್ದಾಣದಲ್ಲಿ ಮಾಜಿ ಸಚಿವರಾದ ವಿ.ಮುನಿಯಪ್ಪ ಅವರ ನೇತೃತ್ವದಲ್ಲಿ, ಸೋಮವಾರ ನಡೆದ 'ವೋಟ್ ಚೋರ್, ಗದ್ದಿ ಛೋಡ್' ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಬಿಜೆಪಿ ಪಕ್ಷದವರು ಮತ ಕಳ್ಳತನದಂತಹ ದುಸ್ಸಾಹಕ್ಕೆ ಕೈ ಹಾಕಿದ ಪರಿಣಾಮ ವಾಗಿ ದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಬಿಹಾರ್ ಮಾತ್ರವಲ್ಲದೇ ರಾಜ್ಯದ ಹಲವು ಕಡೆ ಮತ ಕಳ್ಳತನದಂತಹ ಘಟನೆಗಳು ನಡೆದಿವೆ. ಬಿಜೆಪಿ ಸೇರಿದಂತೆ ಕೋಮುವಾದಿ ಪಕ್ಷಗಳು ದೇಶದಲ್ಲಿ ಅಧಿಕಾರಕ್ಕೋಸ್ಕರ ಆಯೋಗದ ಮೂಲಕ ನಡೆಸುತ್ತಿರುವ ಮತಗಳ್ಳತನ ನಿಲ್ಲಬೇಕು ಎಂದರು.

ಇದನ್ನೂ ಓದಿ: Shidlaghatta News: ಎಲ್ಲರೂ ಕೈಜೋಡಿಸಿದರೆ ಉತ್ತಮ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಕಟ್ಟಡ ನಿರ್ಮಿಸಲು ಸಾಧ್ಯ

ಬಿಜೆಪಿ ಸೇರಿದಂತೆ ಕೋಮುವಾದಿ ಪಕ್ಷಗಳು ದೇಶದಲ್ಲಿ ಸರ್ವಾಧಿಕಾರಿಗಳ ಹಾಗೆ ಅಧಿಕಾರ ಕ್ಕೋಸ್ಕರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ಮತಗಳ್ಳತನ ನಿಲ್ಲಬೇಕು. ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ  ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಕಳುವಿನ ವಿರುದ್ಧ ಚಳುವಳಿ ಮಾದರಿಯಲ್ಲಿ ಅಭಿಯಾನವನ್ನು ನಡೆಸುತ್ತಿದೆ ಎಂದರು.

ಸAದರ್ಭದಲ್ಲಿ ಮಾಜಿ ಶಾಸಕ ವಿ.ಮುನಿಯಪ್ಪ,ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಅಚ್ಚು ಕುಬೇರ್,ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಗುಡಿಹಳ್ಳಿ ಚಂದ್ರು,ಬೆಳ್ಳೂಟಿ ವರಲಕ್ಷ್ಮೀ ಸಂತೋಷ್, ಮುಖಂಡರಾದ ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ರಾಮಯ್ಯ, ಮಹಮ್ಮದ್ ಸಾದೀಕ್, ವಿ.ಸುಬ್ರಮಣಿ, ಗೌಡನಹಳ್ಳಿ ಮಂಜುನಾಥ್, ರಾಜ್ ಕುಮಾರ್, ದೊಡ್ಡದಾಸರಹಳ್ಳಿ ದೇವರಾಜು, ಜೆ.ಜೆ.ಮಧು, ಹಿತ್ತಲಹಳ್ಳಿ ಸುರೇಶ್, ರಾಮಾಂಜನೇಯ, ಮುನಿರಾಜು ಬೂದಾಳ ವರದರಾಜು, ಸೇರಿದಂತೆ ಮುಂತಾದವರು ಹಾಜರಿದ್ದರು.