Chikkaballapur News: ನಮ್ಮ ಸಂಸ್ಕೃತಿಯ ಕುರುಹಗಳನ್ನು ರಕ್ಷಿಸುತ್ತಾ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದದ್ದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ
‘ನಮ್ಮಲ್ಲಿ ಲಭ್ಯವಿರುವ ಪುರಾತನ ವಸ್ತುಗಳು, ಶಿಲಾ ಶಾಸನಗಳು, ತಾಮ್ರಪಟಗಳು, ಕಟ್ಟಡಗಳು, ಪುರಾ ತನ ಕಡತಗಳು, ನಾಣ್ಯಗಳು ಗತ ಇತಿಹಾಸವನ್ನು ಹೇಳುತ್ತವೆ. ಇಂತಹ ಅಮೂಲ್ಯ ಪುರಾತನ ಉಳಿಕೆಗಳು ಕಾಲಕಾರಣವಾಗಿ ಅಥವಾ ಮಾನವ ನಿರ್ಲಕ್ಷ್ಯದಿಂದ ನಾಶವಾಗದಂತೆ ರಕ್ಷಿಸುವ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು

ಪ್ರಾಚೀನ ದೇವಾಲಯಗಳು, ಸ್ಮಾರಕಗಳು, ನಮ್ಮ ಸಂಸ್ಕೃತಿಯ ಕುರುಹಗಳು ಅವುಗಳನ್ನು ರಕ್ಷಿಸುತ್ತಾ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ್ದದ್ದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಶಾಸನ ತಜ್ಞರು, ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯ ಪ್ರೊ. ಕೆ.ಆರ್.ನರಸಿಂಹನ್ ಹೇಳಿದರು.

ಬಾಗೇಪಲ್ಲಿ: ಪ್ರಾಚೀನ ದೇವಾಲಯಗಳು, ಸ್ಮಾರಕಗಳು, ನಮ್ಮ ಸಂಸ್ಕೃತಿಯ ಕುರುಹಗಳು ಅವು ಗಳನ್ನು ರಕ್ಷಿಸುತ್ತಾ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದದ್ದು ನಮ್ಮೆಲ್ಲರ ಹೊಣೆಗಾರಿಕೆ ಯಾಗಿದೆ ಎಂದು ಶಾಸನ ತಜ್ಞರು, ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯ ಪ್ರೊ.ಕೆ.ಆರ್.ನರ ಸಿಂಹನ್ ಹೇಳಿದರು. ಪಟ್ಟಣದ ಜ್ಞಾನದೀಪ್ತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತಿಹಾಸಕ್ಕೆ ಆಧಾರಗಳಾಗಿರುವ ಶಾಸನಗಳು, ಶಿಲ್ಪಗಳು , ನಾಣ್ಯಗಳು, ಕೋಟೆ ಕೊತ್ತಲಗಳು, ನಾಡಿನ ಗತವೈಭವ ಸಾರಿ ಸಾರಿ ಹೇಳು ತ್ತಿವೆ ಇವುಗಳನ್ನು ರಕ್ಷಿಸಲು ಯುವಜನತೆ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಇಂದಿನ ದಿನಗಳಲ್ಲಿ ಇತಿಹಾಸ ಪ್ರಜ್ಞೆ ಪ್ರತಿಯೊಬ್ಬರಿಗೂ ಅವಶ್ಯಕತೆ ಇದ್ದು, ಭಾರತೀಯ ಪುರಾತನ ದೇವಾಲಯಗಳು, ಸ್ಮಾರಕಗಳು ಶಾಸನಗಳನ್ನು ಸಂರಕ್ಷಿಸುವ ಕಾರ್ಯವನ್ನು ಯುವ ಸಮುದಾಯ ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಆಚರಣೆ
ಬಾಗೇಪಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ತಾಲ್ಲೂಕು ಅದ್ಯಕ್ಷ ಬಿ.ಆರ್.ಕೃಷ್ಣ ಮಾತನಾಡಿ, ‘ನಮ್ಮಲ್ಲಿ ಲಭ್ಯವಿರುವ ಪುರಾತನ ವಸ್ತುಗಳು, ಶಿಲಾ ಶಾಸನಗಳು, ತಾಮ್ರಪಟಗಳು, ಕಟ್ಟಡಗಳು, ಪುರಾತನ ಕಡತಗಳು, ನಾಣ್ಯಗಳು ಗತ ಇತಿಹಾಸವನ್ನು ಹೇಳುತ್ತವೆ. ಇಂತಹ ಅಮೂಲ್ಯ ಪುರಾತನ ಉಳಿಕೆಗಳು ಕಾಲಕಾರಣವಾಗಿ ಅಥವಾ ಮಾನವ ನಿರ್ಲಕ್ಷ್ಯದಿಂದ ನಾಶವಾಗದಂತೆ ರಕ್ಷಿಸುವ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಇದುವರೆವಿಗೂ 85 ಶಾಸನಗಳು ಬೆಳಕು ಕಂಡು ಪ್ರಕಟಿತವಾಗಿವೆ. ಜೊತೆಗೆ ಆಗಾಗ್ಗೆ ಅಪ್ರಕಟಿತ ಶಾಸನಗಳು, ಮಾಸ್ತಿಗಲ್ಲು, ವೀರಗಲ್ಲು ಮತ್ತಿತರೆ ಸ್ಮಾರಕಗಳು ಬೆಳಕಿಗೆ ಬರುತ್ತಲೇ ಇವೆ.
ಇದೇ ಬಾಗೇಪಲ್ಲಿ ತಾಲ್ಲೂಕಿನ ರೆಡ್ಡಿವಾರಿಪಲ್ಲಿಯಲ್ಲಿ. ಚೇಳೂರಿನ ಹುಣಸೆ ತೋಪಿನಲ್ಲಿ ನೊಳಂ ಬರ ಕದನ ವೀರಗಲ್ಲು ಶಾಸನವಿದೆ. ಅನೇಕ ಕಡೆ ವೀರಗಲ್ಲುಗಳು, ಮಾಸ್ತಿ ಗಲ್ಲುಗಳು ಹಾಗೂ ಮಹಾಸತಿಗಲ್ಲುಗಳು ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪ್ರಾಗೈತಿಹಾಸಿಕ ಕುರುಹುಗಳು ಕಂಡುಬAದಿವೆ. ಜಡಮಡುಗು ಅಕ್ಕಮ ಬೆಟ್ಟದಲ್ಲಿ ಪ್ರಾಗೈತಿಹಾಸಿಕ ಬೃಹತ್ ಶಿಲಾಯುಗದ ಮಾನವ ರೂಪೀಕರಿಸಲಾದ ಕಲ್ಗೋರಿಗಳು ಇವೆ.
ಇಂತಹ ಅನೇಕ ಇತಿಹಾಸ ಪೂರ್ವ ಮತ್ತು ಇತಿಹಾಸ ಕಾಲಕ್ಕೆ ಸೇರಿರುವ ಅನೇಕ ಸ್ಮಾರಕಗಳು ದಿಕ್ಕು ಕಾಣದೆ ಅನಾಥವಾಗಿ ಇದ್ದು, ತಮ್ಮ ವ್ಯಥೆಯ ಕಥೆಯನ್ನು ಹೇಳುತ್ತಿವೆ, ಆದರೆ ಅದನ್ನು ಕೇಳಿಸಿ ಕೊಳ್ಳುವ ಮನಸ್ಸುಗಳು ವಿರಳವಾಗು ತ್ತಿರುವ ಈ ಕಾಲಘಟ್ಟದಲ್ಲಿ ಅವುಗಳ ಮಹತ್ವ ತಿಳಿಸಿ ಸಂರ ಕ್ಷಣೆ ಮಾಡಬೇಕಾದ ಅನಿವಾ ರ್ಯತೆ ಇದೆ. ಅವುಗಳನ್ನು ಸಂರಕ್ಷಣೆ ಮಾಡುವುದರಿಂದ ಮತ್ತಷ್ಷು ವಿಷಯಗಳನ್ನು ತಿಳಿಯಲು ಸಾಧ್ಯವೂ ಮತ್ತು ಮತ್ತಷ್ಷು ಸಂಶೋಧನೆ ಮಾಡಲು ಸಾಧುವೂ ಹೌದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಶಾಸನ ಸಂಶೋಧಕರಾದ ಧನ್ ಪಾಲ್, ಎ.ಕೆ.ನಿಂಗಪ್ಪ,ಕೆ.ಟಿ.ವೀರಾAಜನೇಯಲು, ಎ.ನಂಜುಂಡಪ್ಪ, ಶ್ರೀನಾಥ್, ನಾರಾಯಣ್, ರಾಮಯ್ಯ, ಪಿ.ವೆಂಕಟರಾಮ್, ಚಂದ್ರೇ ನಾಯಕ್,ವೆಂಕಟೇಶ್ ಬಾಬು, ಪಿ.ಮಂಜುನಾಥ ರೆಡ್ಡಿ, ಸೈಯದ್ ಸಿದ್ದಿಕ್, ಜಿ.ಕೆ.ಆನಂದ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.