ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ವೀರರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ದಂಗೆಯೆದ್ದ ಮೊದಲ ಮಹಿಳಾ ಆಡಳಿತಗಾರ್ತಿ :  ಗ್ರೇಡ್ ೨ ತಹಶೀಲ್ದಾರ್ ರಾಜೀವ್

ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ, ವಿಶೇಷವಾಗಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಆಕೆಯ ಧೈರ್ಯ, ನಾಯಕತ್ವ ಮತ್ತು ದೇಶಭಕ್ತಿಯನ್ನು ಸಾರಿದವರು, ಆಕೆಯ ಪ್ರಮುಖ ಕೊಡುಗೆಗಳಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಿರುದ್ಧ ಕಿತ್ತೂರು ದಂಗೆಯನ್ನು ಮುನ್ನಡೆಸುವುದು, ತಮ್ಮ ರಾಜ್ಯವನ್ನು ರಕ್ಷಿಸಿಕೊಳ್ಳಲು ಆಕ್ರಮಣಕಾರಿ ಬ್ರಿಟಿಷ್ ನೀತಿಗಳ ವಿರುದ್ಧ ದೃಢವಾಗಿ ನಿಲ್ಲುವುದು ಎಂದರು.

ಶೌರ್ಯ ಪರಾಕ್ರಮದ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅತ್ಯವಶ್ಯಕ

-

Ashok Nayak Ashok Nayak Oct 23, 2025 11:59 PM

ಶಿಡ್ಲಘಟ್ಟ: ಕಿತ್ತೂರಿನ ವೀರರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ದಂಗೆಯೆದ್ದ ಮೊದಲ ಮಹಿಳಾ ಆಡಳಿತಗಾರರಲ್ಲಿ ಒಬ್ಬರಾಗಿದ್ದಾರೆ. ಚೆನ್ನಮ್ಮ ಅವರ ಶೌರ್ಯ ಪರಾಕ್ರಮದ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅತ್ಯವಶ್ಯಕವಾಗಿದೆ ಎಂದು ಗ್ರೇಡ್ ೨ ತಹಶೀಲ್ದಾರ್ ರಾಜೀವ್ ಹೇಳಿದರು.

ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ಸಮುದಾಯದ ವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ: Shidlaghatta News: ನರೇಗಾ ಮತ್ತು ವಿವಿಧ ಯೋಜನೆಗಳ ಕಾಮಗಾರಿ ವೀಕ್ಷಿಸಿದ: ಜಿಪಂ ಉಪಕಾರ್ಯದರ್ಶಿ

ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ, ವಿಶೇಷವಾಗಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಆಕೆಯ ಧೈರ್ಯ, ನಾಯಕತ್ವ ಮತ್ತು ದೇಶಭಕ್ತಿಯನ್ನು ಸಾರಿದವರು, ಆಕೆಯ ಪ್ರಮುಖ ಕೊಡುಗೆಗಳಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಿರುದ್ಧ ಕಿತ್ತೂರು ದಂಗೆಯನ್ನು ಮುನ್ನಡೆಸುವುದು, ತಮ್ಮ ರಾಜ್ಯವನ್ನು ರಕ್ಷಿಸಿಕೊಳ್ಳಲು ಆಕ್ರಮಣಕಾರಿ ಬ್ರಿಟಿಷ್ ನೀತಿಗಳ ವಿರುದ್ಧ ದೃಢವಾಗಿ ನಿಲ್ಲುವುದು ಎಂದರು.

ಸಂದರ್ಭದಲ್ಲಿ ಬಿ ಇ ಓ ರವೀಂದ್ರ ಕುಮಾರ್, ಅಖಿಲ ಭಾರತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಸವರಾಜು, ರಾಜ್ಯ ನೇಕಾರ ಸಂಘದ ಅಧ್ಯಕ್ಷ ಗಣೇಶ್, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ನಂದೀಶ್, ಕಸಾಪ ಅದ್ಯಕ್ಷ ಪಟೇಲ್ ನಾರಾಯಣಸ್ವಾಮಿ,ಕಾರ್ಯದರ್ಶಿ ಚಂದ್ರಶೇಖರ್ ಬಾಬು, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಮಂಜುನಾಥ್,ಜಿಲ್ಲಾ ಸಪಾಯಿ ಕರ್ಮಚಾರಿ ಸದಸ್ಯ ಲಕ್ಷ್ಮಣರಾಜು, ಸೇರದಂತೆ ಮತ್ತಿತರು ಹಾಜರಿದ್ದರು.