Chikkaballapur News: ಜೈನ್ ಆಸ್ಪತ್ರೆಯ ಉಚಿತ ಡಯಾಲಿಸಿಸ್ ಸೇವೆ ಸಮಾಜಕ್ಕೆ ಮಾದರಿ: ಕೆ.ವಿ.ನವೀನ್ ಕಿರಣ್
ಚಿಕ್ಕಬಳ್ಳಾಪುರದ ಜಿಲ್ಲೆಯ ಜನತೆ ಆರೋಗ್ಯ ಸುಧಾರಣೆಗಾಗಿ ಇಲ್ಲಿಂದ ಬೆಂಗಳೂರಿಗೆ ಹೋಗಬೇಕಾ ಗಿತ್ತು. ಕಳೆದ ಮೂರು ವರ್ಷಗಳಿಂದ ಈ ಅವಲಂಬನೆಯನ್ನು ತಪ್ಪಿಸಿರುವ ಜೈನ್‌ಮಿಷನ್ ಆಸ್ಪತ್ರೆಯು ಗ್ರಾಮೀಣ ಜನರ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ.ಒಬ್ಬ ವ್ಯಕ್ತಿಗೆ ಒಮ್ಮೆಗೆ ಡಯಾಲಿಸಿಸ್ ಮಾಡಿಸ ಬೇಕಾದರೆ ಕನಿಷ್ಟ ೧ ಸಾವಿರ ರೂಪಾಯಿ ಖರ್ಚು ಮಾಡಬೇಕಿದೆ.

ಜೈನ್ ಆಸ್ಪತ್ರೆಯ ಉಚಿತ ಡಯಾಲಿಸಿಸ್ ಸೇವೆ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿದೆ.ಇಲ್ಲಿನ ನುರಿತ ಮತ್ತು ಸೇವಾಮನೋಭಾವದ ವೈದ್ಯರು ಮತ್ತು ಸಿಬ್ಬಂದಿಯ ಕಾರ್ಯತ್ಪರತೆಯಿಂದ ಈ ಆಸ್ಪತ್ರೆ ಹೆಸರು ಜನಮಾನಸದಲ್ಲಿ ನಮ್ಮ ಆಸ್ಪತ್ರೆ ಎಂಬಂತೆ ಬೇರೂರಿದೆ ಎಂದು ಕೆ.ವಿ.ನವೀನ್‌ಕಿರಣ್ ಹೇಳಿದರು. -

ಚಿಕ್ಕಬಳ್ಳಾಪುರ : ಜೈನ್ ಆಸ್ಪತ್ರೆಯ ಉಚಿತ ಡಯಾಲಿಸಿಸ್ ಸೇವೆ ನಿಜಕ್ಕೂ ಸಮಾಜಕ್ಕೆ ಮಾದರಿ ಯಾಗಿದೆ.ಇಲ್ಲಿನ ನುರಿತ ಮತ್ತು ಸೇವಾಮನೋಭಾವದ ವೈದ್ಯರು ಮತ್ತು ಸಿಬ್ಬಂದಿಯ ಕಾರ್ಯ ತ್ಪರತೆಯಿಂದ ಈ ಆಸ್ಪತ್ರೆ ಹೆಸರು ಜನಮಾನಸದಲ್ಲಿ ನಮ್ಮ ಆಸ್ಪತ್ರೆ ಎಂಬಂತೆ ಬೇರೂರಿದೆ ಎಂದು ಕೆ.ವಿ.ನವೀನ್‌ಕಿರಣ್ ಹೇಳಿದರು.
ನಗರ ಹೊರವಲಯ ನಂದಿಕೋಲ್ಡ್ ಸ್ಟೋರೇಜ್ ಎದುರಿಗಿರುವ ಜೈನ್ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ದೀಪಾವಳಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.
ಚಿಕ್ಕಬಳ್ಳಾಪುರದ ಜಿಲ್ಲೆಯ ಜನತೆ ಆರೋಗ್ಯ ಸುಧಾರಣೆಗಾಗಿ ಇಲ್ಲಿಂದ ಬೆಂಗಳೂರಿಗೆ ಹೋಗಬೇಕಾ ಗಿತ್ತು. ಕಳೆದ ಮೂರು ವರ್ಷಗಳಿಂದ ಈ ಅವಲಂಬನೆಯನ್ನು ತಪ್ಪಿಸಿರುವ ಜೈನ್‌ಮಿಷನ್ ಆಸ್ಪತ್ರೆಯು ಗ್ರಾಮೀಣ ಜನರ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ.ಒಬ್ಬ ವ್ಯಕ್ತಿಗೆ ಒಮ್ಮೆಗೆ ಡಯಾಲಿಸಿಸ್ ಮಾಡಿಸಬೇಕಾದರೆ ಕನಿಷ್ಟ ೧ ಸಾವಿರ ರೂಪಾಯಿ ಖರ್ಚು ಮಾಡಬೇಕಿದೆ. ಅಂತಹುದರಲ್ಲಿ ನಯಾ ಪೈಸೆ ಪಡೆಯದೆ ಉಚಿತವಾಗಿ ನಿತ್ಯವೂ ೩೦ ಮಂದಿಗೆ ಉಚಿತವಾಗಿ ಡಯಾಲಿಸಿಸ್ ಮಾಡುತ್ತಿದ್ದಾರೆ.ಅಷ್ಟೇ ಅಲ್ಲದೆ ಸದಾ ಕಾಲ ಆರೋಗ್ಯ ಸಂಬಂಧಿ ಕಾರ್ಯಾಗಾರ ಗಳನ್ನು ಏರ್ಪಡಿಸಿ ನಾಗರೀಕರಿಗೆ ಇರುವ ಆರೋಗ್ಯ ಸಂಬಂಧಿ ಸಲಹೆಗಳನ್ನು ನೀಡುತ್ತಿರುವುದು ಮೆಚ್ಚುಗೆಯ ಕಾರ್ಯವಾಗಿದೆ ಎಂದರು.
ಇದನ್ನೂ ಓದಿ: chitradurga News: ಒಂದೇ ದಿನ ಇಬ್ಬರು ಯುವತಿಯರನ್ನು ಮದುವೆಯಾದ ವರ ಮಹಾಶಯ
ಡಾ.ಸೋಲಂಕಿ ಅವರಂತಹ ನುರಿತ ನೇತ್ರತಜ್ಞರಿಂದ ಉಚಿತವಾಗಿ ಕಣ್ಣಿನ ಪೊರೆ ಚಿಕಿತ್ಸೆ ನಡೆಸುತ್ತಿರುವುದು ಕೂಡ ಹಿರಿಯರಿಗೆ ದಾರಿದೀಪವಾಗಿದೆ.ಕಣ್ಣಿನ ಸಮಸ್ಯೆಗಳು ಏನೇ ಇದ್ದರೂನ ಕೂಡ ಇಲ್ಲಿ ಪೂರ್ಣಪ್ರಮಾಣದ ಚಿಕಿತ್ಸೆ ಲಭ್ಯವಿದೆ.ಸೇವಾಮನೋಭಾವದ ಈ ಆಸ್ಪತ್ರೆ ಚಿಕ್ಕಬಳ್ಳಾಪುರ ಭಾಗದಲ್ಲಿರುವುದು ನಮ್ಮ ಭಾಗ್ಯ ಎಂದರು.
ಡಾ.ನರಪತ್ ಸೋಲಂಕಿ ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.೪೦ ಮಂದಿಯಲ್ಲಿ ಮಧುಮೇಹ ಖಾಯಿಲೆಯಿರುವುದು ಗೊತ್ತಾಗಿದೆ.ಇವನ್ನೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಂಡು ಮುಂಬರುವ ದಿನಗಳಲ್ಲಿ ಜೈನ್ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗ, ನರರೋಗ ವಿಭಾಗ, ಮಧುಮೇಹ ವಿಭಾಗ ತೆರೆಯುವ ಉದ್ದೇಶವಿದೆ.ಜನತೆಯ ಸಹಕಾರ ನೆರವು ಇದ್ದಲ್ಲಿ ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲು ನಾವು ಸಿದ್ಧರಿದ್ದೇವೆ ಎಂದರು.
ಈ ವೇಳೆ ಉತ್ತಮ್‌ಚಂದ್ ಜೈನ್, ರಾಕೇಶ್ ಜೈನ್ ಅವರ ಕುಟುಂಬ ಸದಸ್ಯರು, ಸೇರಿದಂತೆ ವೈದ್ಯರು, ನರ್ಸ್ಗಳು, ಇದ್ದರು.