ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೊಬಳಿ ಕೆಐಎಡಿಬಿ -13 ಹಳ್ಳಿಗಳ ರೈತ ಪರ ಹೋರಾಟ ಸಮಿತಿಯ ವತಿಯಿಂದ ಭಾನುವಾರ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ 2823,ಎಕರೆ ಭೂಮಿಯನ್ನು ಸರ್ಕಾರ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಭೂಸ್ವಾದೀನ ಪ್ರಕ್ರಿಯೆಗೆ 2024ರ ಜೂನ್ 24 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ತ್ತು .
ಈ ಭಾಗದ ಬಹುಪಾಲು ರೈತರು ತಮ್ಮ ತಮ್ಮ ಮಕ್ಕಳ ಮುಂದಿನ ಉದ್ಯೋಗದ ಭವಿಷ್ಯ ಕ್ಕಾಗಿ ಮತ್ತು ಶಿಡ್ಲಘಟ್ಟ ತಾಲೂಕು ಅಭಿವೃದ್ಧಿಯ ಪತದತ್ತ ಕೊಂಡೊಯ್ಯುವ ಸಲುವಾಗಿ ಸ್ವಯಂ ಬೆಂಗಳೂರಿನ ಕೆಐಎಡಿಬಿ,ಕಛೇರಿಗೆ ತೆರಳಿ ಒಪ್ಪಿಗೆ ಸೂಚಿಸಿರುತ್ತಾರೆ.
ಆದರೆ ಅಂದಿನಿಂದ ರೈತರು ಯಾವುದೆ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆಯಲು ಆಗುತ್ತಿಲ್ಲ. ಹೊಸ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಯಾವುದೇ ನೊಂದಣಿಯ ಪರಬಾರೆ, ವಿಭಾಗಪಟ್ಟಿಗಳು ಆಗುತ್ತಿಲ್ಲ .ಹಾಗಾಗಿ ಈ ಕೂಡಲೇ 2823 ಎಕರೆ ಭೂ ಸ್ವಾಧೀ ನದ ಜಮೀನಿನಲ್ಲಿ ಕೃಷಿಗೆ ಯೋಗ್ಯವಾದ ಫಲವತ್ತಾದ ನೀರಾವರಿ ಜಮೀನು ಬಿಟ್ಟು ಉಳಿದ ಜಮೀನುಗಳನ್ನು ಅಂತಿಮ ಕೈಗಾರಿಕಾ ಅಭಿವೃದ್ಧಿ ಬಳಸಿಕೊಳ್ಳಲು ಅದಿಸೂಚನೆ ಹೊರಡಿಸಬೇಕು. ಭೂಮಿ ನೀಡಿದ ರೈತರಿಗೆ ಉತ್ತಮ ಭೂಪರಿಹಾರ ನೀಡಬೇಕು. ಭೂಮಿ ನೀಡಿದ ಪ್ರತಿ ರೈತನ ಕುಟುಂಬಕ್ಕೆ ಒಂದು ಖಾಯಂ ಉದ್ಯೋಗ ನೀಡಬೇಕು,ಹಾಗೂ ಕೆಐಎಡಿಬಿಗೆ ಒಳಪಟ್ಟಿರುವ 2823,ಎಕರೆ ಜಮೀನುವಿನಲ್ಲಿ 525, ಎಕರೆ ಪಿಎಸ್ ಎಲ್. ಕಂಪನಿಗೆ ಒಳಪಟ್ಟಿದ್ದು ಆ ಕಂಪನಿಯ ವಿರುದ್ಧ ಸರ್ಕಾರದಿಂದ ವಕೀಲರನ್ನು ನೇಮಿಸಿ ಆ 525, ಎಕರೆ ಜಮೀನುಗಳ ಭೂ ಪರಿಹಾರ ಮೂಲ ರೈತರಿಗೆ ನೀಡಬೇಕು ಎಂದು ಆಗ್ರಹಿಸಿ ದರು.
ಇದೇ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾನುವಾರದಿಂದ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ರೈತರ ಪರವಾಗಿ ನಿಂತು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ವರೆವಿಗೂ ಈ ನಿರಂತರ ಅಹೋ ರಾತ್ರಿ ಧರಣಿಗೆ ರಕ್ಷಣೆ ನೀಡಬೇಕೇಂದು ಆಗ್ರಹಿಸಿದರು.
ಅನಿರ್ದಿಷ್ಟಾವಧಿ ಧರಣಿಯಲ್ಲಿ ದಲಿತ ಸಂಘರ್ಷ ಸಮಿತಿ ಭೀಮಾ ಮಾರ್ಗ ರಾಜ್ಯ ಸಂಚಾ ಲಕಿ ನಾಗವೇಣಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಯ ತಾಲೂಕು ಸಂಚಾಲಕ ರಾಮಾಂಜಿನೇಯ, ತಾಲೂಕು ಅಧ್ಯಕ್ಷ ಎ.ಎನ್.ಮುನೇಗೌಡ, ಕಾರ್ಯದರ್ಶಿ ನವಿನಾ ಚಾರ್ಯ, ಜಿಲ್ಲಾ ಕಾರ್ಯಧ್ಯಕ್ಷ ಸುಬ್ರಮಣಿ, ಬಸವಪಟ್ಟಣ ಪ್ರಭುಗೌಡ, ವೆಂಕಟೇಶ್, ನಾಗರಾಜ್, ಜಂಗಮ ಕೋಟೆ (ಜೆಸಿ,) ಮಂಜಣ್ಣ, ನಾರಾಯಣದಾಸರಹಳ್ಳಿ ನಾರಾಯಣ ಸ್ವಾಮಿ ಯಣ್ಣಂಗೂರು ಈರಪ್ಪ, ಮದು ನರಸಿಂಹಪ್ಪ, ಚೀಮಂಗಲ ಚನ್ನಪ್ಪ ಶಿಡ್ಲಘಟ್ಟ ನಗರದ ರಾಜೇಶ್, ಪ್ರಭು, ಅಂಬರೀಶ್, ಮೂರ್ತಿ, ನರಸಿಂಹ ಮೂರ್ತಿ ಮತ್ತಿತರರು ಇದ್ದರು.