ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA Dr.M.C.Sudhakar: ಕೆಂಪೇಗೌಡ ಜಯಂತಿ ಆಚರಣೆ: ಪಕ್ಷಾತೀತವಾಗಿ ಪಾಲ್ಗೊಂಡ ನಾಗರಿಕರಿಗೆ ಶಾಸಕ ಡಾ.ಎಂ.ಸಿ. ಸುಧಾಕರ್ ಶ್ಲಾಘನೆ

ಸಮಾಜದ ಚಿಂತಕರು ಮತ್ತು ಸಾಧಕರ ಜಯಂತೋತ್ಸವಗಳನ್ನು ಆಚರಿಸುವ ಮುಖ್ಯ ಉದ್ದೇಶ, ನಮ್ಮ ಮುಂದಿನ ಪೀಳಿಗೆಗೆ ಅವರ ಸಾಧನೆಗಳು, ಕೊಡುಗೆಗಳು ಹಾಗೂ ಆದರ್ಶಗಳ ಪರಿಚಯ ಮಾಡಿಕೊಡುವು ದಾಗಿದೆ. ಯುವ ಪೀಳಿಗೆಯು ಇಂತಹ ಮಹನೀಯರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಲು ಇದು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿಂತಾಮಣಿ: ಯಾವುದೇ ಒಂದು ಜಯಂತಿ ಅಥವಾ ಮಹಾಪುರುಷರ ಸ್ಮರಣೆ ಕೇವಲ ಒಂದು ನಿರ್ದಿಷ್ಟ ಜಾತಿ ಅಥವಾ ವರ್ಗಕ್ಕೆ ಸೀಮಿತವಾಗಬಾರದು. ಸಮಾಜದ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕು ಎಂದು ಮಾಜಿ ಸಚಿವ ಹಾಲಿ ಶಾಸಕ ಡಾ!ಎಂ ಸಿ ಸುಧಾಕರ್(Former Minister and current MLA Dr.M.C.Sudhakar) ಕರೆ ನೀಡಿದರು.

ಇಂದು ಚಿಂತಾಮಣಿ ನಗರದಲ್ಲಿ ತಾಲೂಕ ಆಡಳಿತ ತಾಲೂಕ ಪಂಚಾಯತಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಚಿಂತಾಮಣಿ ತಾಲ್ಲೂಕು ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ನಾಡ ಪ್ರಭು ಕೆಂಪೇಗೌಡರ 517 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು ಚಿಂತಾಮಣಿಯ ಸಮಸ್ತ ನಾಗರಿಕರು ಯಾವುದೇ ಪಕ್ಷ ಭೇದವಿಲ್ಲದೆ, ಒಗ್ಗಟ್ಟಿನಿಂದ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿರುವುದನ್ನು ಶ್ಲಾಘಿಸಿದರು.

ಇದನ್ನೂ ಓದಿ: Chinthamani News: ಮಾವಿನ ಬೆಲೆ ಕುಸಿತ:ಬೆಂಬಲ ಬೆಲೆಗೆ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ

ಸಮಾಜದ ಚಿಂತಕರು ಮತ್ತು ಸಾಧಕರ ಜಯಂತೋತ್ಸವಗಳನ್ನು ಆಚರಿಸುವ ಮುಖ್ಯ ಉದ್ದೇಶ, ನಮ್ಮ ಮುಂದಿನ ಪೀಳಿಗೆಗೆ ಅವರ ಸಾಧನೆಗಳು, ಕೊಡುಗೆಗಳು ಹಾಗೂ ಆದರ್ಶಗಳ ಪರಿಚಯ ಮಾಡಿಕೊಡುವುದಾಗಿದೆ. ಯುವ ಪೀಳಿಗೆಯು ಇಂತಹ ಮಹನೀಯರ ಗುಣಗಳನ್ನು ತಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಸಮಾಜದಲ್ಲಿ ವಿವಿಧ ಭಾಷೆ, ಜಾತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳಿವೆ. ಈ ಎಲ್ಲ ವೈವಿಧ್ಯತೆಗಳ ನಡುವೆಯೂ ನಾವೆಲ್ಲರೂ ಒಟ್ಟಾಗಿ ಭವ್ಯ ಭಾರತವನ್ನು ನಿರ್ಮಾಣ ಮಾಡಲು ಶ್ರಮಿಸಬೇಕಿದೆ.ಇಂತಹ ದೃಷ್ಟಿಕೋನದಿಂದಲೇ ಸರ್ಕಾರಗಳು ಮಹಾಪುರುಷರ ಜಯಂತಿಗಳನ್ನು ಅಧಿಕೃತವಾಗಿ ಆಯೋಜಿಸುತ್ತಿವೆ" ಎಂದು ತಿಳಿಸಿದರು.

ಯಾವುದೇ ಒಂದು ಕಾರ್ಯಕ್ರಮ ನಡೆದಾಗ ಅದು ನಮಗೆ ಸಂಬಂಧಿಸಿದ್ದಲ್ಲ ಎಂಬ ಭಾವನೆ ಬರಬಾರದು. ಸಮಾಜವನ್ನು ಒಡೆಯುವ ಉದ್ದೇಶ ಯಾರಿಗೂ ಇರಬಾರದು ಎಂದು ಕಿವಿಮಾತು ಹೇಳಿದರು.

drmcs

ಇಂದಿನ ಯುವ ಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿ ಮತ್ತು ಭಾಷೆಯ ಪ್ರಭಾವಕ್ಕೆ ಒಳಗಾಗುತ್ತಿರುವು ದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಶಾಸಕರು ನಮ್ಮ ಮಕ್ಕಳು ಈ ಪ್ರಭಾವದಿಂದ ದೂರವಿದ್ದು, ನಮ್ಮದೇ ಆದ ಸಾಧಕರು ಮತ್ತು ಮಹಾಪುರುಷರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಧಕರ ಜಯಂತಿಗಳು ಯುವ ಜನತೆಗೆ ಪ್ರೇರಣೆಯಾಗಲಿವೆ" ಎಂದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಚೌಕಟ್ಟಿನಲ್ಲಿ,ಕೆಂಪೇಗೌಡರು ಹಾಕಿಕೊಟ್ಟಿರುವ ಪ್ರಗತಿಪರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಇಂದಿನ ಆಧುನಿಕ ಕಾಲ ಘಟ್ಟಕ್ಕೆ ತಕ್ಕಂತೆ ಸಮಾಜದ ನಿರ್ಮಾಣವಾಗಬೇಕಿದೆ ಎಂದು ಸುಧಾಕರ್ ಕರೆ ನೀಡಿದರು.

ಮುಂದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸಲು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮಾಜ ವನ್ನು ಬಲಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನುದ್ದೇಶಿಸಿ ಉಪನ್ಯಾಸಕರಾದ ಮುನಿರೆಡ್ಡಿ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ರಾದ ಕೋನಪ ರೆಡ್ಡಿ, ಮಾತನಾಡಿದರು.

ಕಾರ್ಯಕ್ರಮದ ಅಂತಿಮದಲ್ಲಿ ಎಸ್ ಎಸ್ ಎಲ್ ಸಿ, ಮತ್ತು ಪಿ ಯು ಸಿ ಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷರಾದ ಮುನಿನಾರಾಯಣಪ್ಪ, ಜಯರಾಮ್ ರೆಡ್ಡಿ, ಶ್ರೀನಿವಾಸನ್, ಗೊಲಹಳ್ಳಿ ಶಿವಪ್ರಸಾದ್, ಅಶ್ವಥ್ ನಾರಾಯಣ್ ಬಾಬು,ಅವಲಪ್ಪ, ಕೃಷ್ಣಾರೆಡ್ಡಿ, ಕಾರ್ಯಕ್ರಮದ ಸಂಘಟಿಕರಾದ ಈರುಳ್ಳಿ ಕೃಷ್ಣಾರೆಡ್ಡಿ, ಗೋಪಲ್ಲಿ ರಘು, ಸುಬ್ಬ ರೆಡ್ಡಿ, ಶ್ರೀನಾಥ್ ಬಾಬು, ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್,ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ್, ಸೇರಿದಂತೆ ಒಕ್ಕಲಿಗ ಸಮುದಾಯದ ಹಲವು ಮುಖಂಡರು ಗಳು ಭಾಗವಹಿಸಿದ್ದರು.