ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CHIMUL: ರಾಸು ವಿಮಾ ಯೋಜನೆಯಡಿ 6 ಫಲಾನುಭವಿಗಳಿಗೆ 3.75 ಲಕ್ಷ ಪರಿಹಾರ ವಿತರಣೆ ಮಾಡಿದ ಕೆಎಂಎಫ್ ಪ್ರತಿನಿಧಿ ಭರಣಿ ವೆಂಕಟೇಶ್

ಹೈನುಗಾರಿಕೆ ನಡೆಸುವ ರೈತರಿಗೆ ನೆರವಾಗುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಜಾರಿಗೊಳಿಸಿರುವ ರಾಸು ವಿಮಾ ಯೋಜನೆಯಡಿ ವಿವಿಧ ಗ್ರಾಮ ಗಳಲ್ಲಿ ರಾಸುಗಳನ್ನು ಕಳೆದುಕೊಂಡ ಆರು ಫಲಾನುಭವಿಗಳಿಗೆ ಒಟ್ಟು 3.75 ಲಕ್ಷ ಪರಿಹಾರದ ಚೆಕ್‌ಗಳನ್ನು ನಂದಿ ಹೋಬಳಿ ಚಿಮುಲ್ ನಿರ್ದೇಶಕ, ಕೆ.ಎಂ.ಎಫ್ ಪ್ರತಿನಿಧಿ ಭರಣಿ ವೆಂಕಟೇಶ್ ವಿತರಿಸಿದರು

ರಾಸು ವಿಮಾ ಯೋಜನೆಯಡಿ 6 ಫಲಾನುಭವಿಗಳಿಗೆ 3.75 ಲಕ್ಷ ಪರಿಹಾರ ವಿತರಣೆ ಮಾಡಿದ ಕೆಎಂಎಫ್ ಪ್ರತಿನಿಧಿ ಭರಣಿ ವೆಂಕಟೇಶ್ ಚಿತ್ರ

ಚಿಕ್ಕಬಳ್ಳಾಪುರ: ಹೈನುಗಾರಿಕೆ ನಡೆಸುವ ರೈತರಿಗೆ ನೆರವಾಗುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವತಿಯಿಂದ ಜಾರಿಗೊಳಿಸಿರುವ ರಾಸು ವಿಮಾ ಯೋಜನೆಯಡಿ ವಿವಿಧ ಗ್ರಾಮ ಗಳಲ್ಲಿ ರಾಸುಗಳನ್ನು ಕಳೆದುಕೊಂಡ ಆರು ಫಲಾನುಭವಿಗಳಿಗೆ ಒಟ್ಟು 3.75 ಲಕ್ಷ ಪರಿಹಾರದ ಚೆಕ್‌ಗಳನ್ನು ನಂದಿ ಹೋಬಳಿ ಚಿಮುಲ್ ನಿರ್ದೇಶಕ, ಕೆ.ಎಂ.ಎಫ್ ಪ್ರತಿನಿಧಿ ಭರಣಿ ವೆಂಕಟೇಶ್ ವಿತರಿಸಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಚಿಕ್ಕಬಳ್ಳಾಪುರ ಶಿಬಿರ ಕಚೇರಿಯಲ್ಲಿ ಮಂಗಳವಾರ  ಚಿಕ್ಕಬಳ್ಳಾಪುರ ಕ್ಷೇತ್ರದ ನಿರ್ದೇಶಕ ಎನ್.ಸಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಫಲಾನುಭವಿಗಳಿಗೆ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.

ಇದನ್ನೂ ಓದಿ: CHIMUL: ಕ್ಷೀರ ಸಂಜೀವಿನ ಮೂಲಕ ಹಸು ಖರೀದಿಗೆ 45 ಸಾವಿರ ಬಡ್ಡಿರಹಿತ ಸಾಲ : ಭರಣಿ ವೆಂಕಟೇಶ್

ಈ ಸಂದರ್ಭದಲ್ಲಿ ಮಾತನಾಡಿದ ಎನ್.ಸಿ.ವೆಂಕಟೇಶ್, ರಾಸು ವಿಮಾ ಯೋಜನೆಯಿಂದ ದೊರೆತಿರುವ ಪರಿಹಾರ ಮೊತ್ತವನ್ನು ಸದುಪಯೋಗಪಡಿಸಿಕೊಂಡು ಮತ್ತೊಂದು ರಾಸು ಖರೀದಿಸಿ ಬದುಕು ಕಟ್ಟಿಕೊಳ್ಳಬೇಕು.ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಸುವ ಮೂಲಕ ತಾವೂ ಬೆಳೆಯಿರಿ, ಒಕ್ಕೂಟವನ್ನೂ ಬೆಳೆಸಿ ಎಂದು ಫಲಾನುಭವಿಗಳಿಗೆ ಮನವಿ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸ್ವಾವಲಂಬನೆಗೆ ಕಾರಣವಾಗಿರುವ ಹೈನುಗಾರಿಕೆಯನ್ನು ಮುಂದುವರಿಸುವ ಮೂಲಕ ರೈತರು ಸ್ವಾವಲಂಬಿಗಳಾಗಬೇಕು ಎಂದು ಇದೇ ವೇಳೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ಉಪ ವ್ಯವಸ್ಥಾಪಕ ಡಾ. ಮನೋರಂಜನ್ ರೆಡ್ಡಿ ಸೇರಿದಂತೆ ಹಾಲು ಒಕ್ಕೂಟದ ಸಿಬ್ಬಂದಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.