ಚಿಕ್ಕಬಳ್ಳಾಪುರ: ಇಂದು ಕನ್ನಡ ಭನವದಲ್ಲಿ ಹತ್ತಾರು ವರ್ಷ ಅಂಬೇಡ್ಕರ್ ಅವರನ್ನು ಓದಿ ಎದೆಗಿಳಿಸಿಕೊಂಡ ಪರಿಣಾಮ ಅಂಬೇಡ್ಕರ್ ಕೊಲಾಜ್ ಎಂಬ ನಾಟಕ ರಂಗರೂಪ ದಲ್ಲಿ ನಿಮ್ಮ ಮುಂದೆ ಬರಲಿದೆ ಎಂದು ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ಕೊಲಾಜ್ ನಾಟಕ ಪ್ರದರ್ಶನ ಸಂಬಂಧ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರನ್ನು ಹಲವು ಕೋನಗಳಲ್ಲಿ ತೋರಿಸುವ ಈ ನಾಟಕ ಮಾ.26ರಂದು ಸಂಜೆ 6.30ಕ್ಕೆ ಕನ್ನಡ ಭವನದಲ್ಲಿ ನಡೆಯಲಿದೆ.ಕುಟುಂಬ ಸಮೇತ ಬಂದು ನಾಟಕ ನೋಡಿ ಮಾತಕತೆ ನಡೆಸಿ ಎಂದು ಆಹ್ವಾನ ನೀಡಿದರು.
ಅಂಬೇಡ್ಕರ್ ಅವರ ಬಾಲ್ಯ ವಿದ್ಯಾಭ್ಯಾಸ, ನಿಮ್ನ ವರ್ಗಗಳ ಹಕ್ಕುಗಳಿಗಾಗಿ ನಡೆಸಿದ ಹೋರಾಟ, ಸಂವಿಧಾನ ರಚನೆ, ಬೌದ್ಧ ಧಮ್ಮ ಸ್ವೀಕಾರದಂತಹ ಘಟನೆಗಳನ್ನು ಒಂದರ ಹಿಂದೊಂದರಂತೆ ಭಿನ್ನ ಭಿನ್ನ ದೃಶ್ಯಗಳ ಮೂಲಕ ಕೋಲಾಜ್ ಶೈಲಿಯಲ್ಲಿ ಈ ನಾಟಕ ಕಟ್ಟಿಕೊಡಲಾಗಿದೆ. ಈ ನಾಟಕ ನೋಡುವ ಮೂಲಕ ನಿಜದ ಅಂಬೇಡ್ಕರ್ ಅವರನ್ನು ಅರಿಯುವ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ: Chikkaballapur News: ನಾಗಮೋಹನ್‌ದಾಸ್ ವರದಿ ತಿರಸ್ಕರಿಸಿ, ಹಳೆಯ ಮೀಸಲಾತಿಯಡಿ ನೇಮಕಾತಿ ನಡೆಯಬೇಕು : ಕೈವಾರ ಮಂಜುನಾಥ್ ಆಗ್ರಹ
ಈ ನಾಟಕದ ಸಾಹಿತ್ಯ ನನ್ನದೇ ಇದ್ದು ರಂಗನಿರ್ದೇಶಕ ಚಿದಂಬರ್‌ರಾವ್ ಜಂಬೆ ಅವರ ನಿರ್ದೇಶನದಲ್ಲಿ ಈ ನಾಟಕ ಮೂಡಿ ಬಂದಿದೆ. ಮೈಸೂರಿನ ರಂಗಾಯಣ ಕಲಾವಿದರು ಪ್ರದರ್ಶಿಸುವ ಇತಿಹಾಸ ಪ್ರಸಿದ್ದ ನಾಟಕ ಇದಾಗಿದೆ. ಅಂಬೇಡ್ಕರ್ ಬದುಕು ಬರಹ ಹೋರಾಟ ತಾತ್ವಿಕತೆ ಇತ್ಯಾದಿ ವಿವಿಧ ಮಜಲುಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಈ ನಾಟಕದಲ್ಲಿ ಆಗಿದೆ. ಸಹೃದಯ ಮನಸ್ಸುಗಳು ಮಾ.26ರಂದು ಕನ್ನಡ ಭವನಕ್ಕೆ ಬಂದು ನಾಟಕ ನೋಡಿ ಅಭಿಪ್ರಾಯ ತಿಳಿಸುವಂತೆ ಕೋರಿದರು.
ಸುಧಾ ವೆಂಕಟೇಶ್ ಮಾತನಾಡಿ, ನಮ್ಮ ನಡುವಿರುವ ಸೂಕ್ಷö?? ಸಂವೇಧನೆಯ ಬರಹ ಗಾರ, ದಸಂಸ ಬಂಡಾಯ ಸೇರಿದಂತೆ ಜನ ಚಳವಳಿಗಳ ಜೀವಾಳವಾದ ಕೋಟಿಗಾನಹಳ್ಳಿ ರಾಮಯ್ಯ ಅವರ ಅಂಬೇಡ್ಕರ್ ಕೊಲಾಜ್ ನಾಟಕ ಇವತ್ತಿನ ತುರ್ತು. ಅಂಬೇಡ್ಕರ್ ಪ್ರೇಮಿಗಳು, ಸಮ ಸಮಾಜದ ಆಶಯವುಳ್ಳ ದೊಡ್ಡ ಮನಸ್ಸುಗಳು ಮಾ.26ರಂದು ಕನ್ನಡ ಭವನಕ್ಕೆ ಬಂದು ನಾಟಕ ನೋಡುವ ಮೂಲಕ ಹಿರಿಯ ಬರಹಕ್ಕೆ ಬೆಂಬಲ ನೀಡಬೇಕು. ಟಿಕೆಟ್‌ದರ 100 ರೂಪಾಯಿ ಇದೆ. ಕುಟುಂಬ ಸಮೇತ ಬಂದು ಅಂಬೇಡ್ಕರ್ ಅವರನ್ನು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ.ಆನಂದ್ ಮಾತನಾಡಿ, ಕೋಟಿಗಾನಹಳ್ಳಿ ರಾಮಣ್ಣ ಎಂದರೆ ವಿಶೇಷವಾದ ಶಕ್ತಿ ಎಂದರೆ ಅತಿಶಯೋಕ್ತಿ ಅಲ್ಲ. ದಸಂಸ ಹೋರಾಟಕ್ಕೆ ಭದ್ರವಾದ ಸಾಂಸ್ಕೃತಿಕ ಬುನಾದಿ ಹಾಕಿರುವ ಬಹುದೊಡ್ಡ ಕಾಲಜ್ಞಾನಿ. ಅವರು ಬರೆದಿರುವ ಕೊಲಾಜ್ ನಾಟಕದಲ್ಲಿ ಈ ಕಾಲಜ್ಞಾನದ ಮಹಿಮೆ ಕಾಣಬಹುದು. ಎಲ್ಲಾ ಜಾತಿ ಜನವರ್ಗಗಳು ಕೂತು ನೋಡಬಹುದಾದ ನಾಟಕ ಇದಾಗಿದೆ. ಬನ್ನಿ ಚಿಕ್ಕಬಳ್ಳಾಪುರ ದಲ್ಲಿ ನಾಟಕ ನೋಡಿ ಅವರನ್ನು ಅಪ್ಪಿಕೊಳ್ಳೋಣ ಎಂದರು.
ವೇದಿಕೆಯಲ್ಲಿ ಹೋರಾಟದ ಸಂಗಾತಿ ಹೆಬ್ಬಾಳದ ವೆಂಕಟೇಶ್, ಕೆ.ಸಿ,ರಾಜಾಕಾಂತ್, ತಿಪ್ಪೇನ ಹಳ್ಳಿ ನಾರಾಯಣ್, ದಸಂಸ ತಾಲೂಕು ಸಂಚಾಲಕ ಎನ್.ಪರಮೇಶ್, ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ರಂಗನಿರ್ದೇಶಕ ದಿಲೀಪ್ ಕುಮಾರ್ ಮತ್ತಿತರರು ಇದ್ದರು.