ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಯುದ್ಧ ನಿಲ್ಲಿಸಲು ಆಗ್ರಹಿಸಿ ಕೆಪಿಆರ್‌ಎಸ್ ಸಂಘಟನೆ ವತಿಯಿಂದ ನಗರದಲ್ಲಿ ಪ್ರತಿಭಟನೆ

ಮೆರಿಕಾ ಇರಾನ್ ದೇಶದ ಯುದ್ಧದಿಂದ ಭಾರತ ದೇಶದಲ್ಲಿ ಅಡುಗೆ ಅನಿಲ ಮತ್ತು ಪೆಟ್ರೋಲ್, ಡಿಸೇಲ್ ಮೇಲೆ ವ್ಯತೀರಿಕ್ತ ಪರಿಣಾಮ ಬೀರುತ್ತಿದೆ. ಅಡುಗೆ ಅನಿಲ ಬುಕ್ಕಿಂಗ್ ತಗೆದುಕೊಳ್ಳು ತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಹಾಸ್ಟೇಲ್, ಶಾಲಾ ಕಾಲೇಜು ಗಳನ್ನು ಮುಚ್ಚಿದ್ದಾರೆ. ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಿಜಿಗಳಲ್ಲಿ ವಾಸ ಮಾಡುತ್ತಿದ್ದು, ಊಟವಿಲ್ಲದ ಪರಿಸ್ಥಿತಿ ನಿರ‍್ಮಾಣವಾಗಿದೆ.

ಚಿಕ್ಕಬಳ್ಳಾಪುರ: ಮಧ್ಯಪ್ರಾಚ್ಯ ದೇಶಗಳ ಯುದ್ಧ(Middle East War)ದಿಂದ ಎದುರಾಗಿ ರುವ ಅಡುಗೆ ಅನಿಲ್ ಕೊರತೆ. ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿರುವ ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್ ಮತ್ತು ಡಿಸೇಲ್ ಕೊರತೆ ಪರಿಸ್ಥಿತಿಯನ್ನು ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರ ನಿಭಾಯಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ ಎಸ್) ಪದಾಧಿಕಾರಿಗಳು ಶನಿವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.    

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಅಮೆರಿಕಾ ಇರಾನ್ ದೇಶದ ಯುದ್ಧದಿಂದ ಭಾರತ ದೇಶದಲ್ಲಿ ಅಡುಗೆ ಅನಿಲ ಮತ್ತು ಪೆಟ್ರೋಲ್, ಡಿಸೇಲ್ ಮೇಲೆ ವ್ಯತೀರಿಕ್ತ ಪರಿಣಾಮ ಬೀರುತ್ತಿದೆ. ಅಡುಗೆ ಅನಿಲ ಬುಕ್ಕಿಂಗ್ ತಗೆದುಕೊಳ್ಳುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಹಾಸ್ಟೇಲ್, ಶಾಲಾ ಕಾಲೇಜು ಗಳನ್ನು ಮುಚ್ಚಿದ್ದಾರೆ. ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಿಜಿಗಳಲ್ಲಿ ವಾಸ ಮಾಡುತ್ತಿದ್ದು, ಊಟವಿಲ್ಲದ ಪರಿಸ್ಥಿತಿ ನಿರ‍್ಮಾಣವಾಗಿದೆ. ಸೆಣ್ಣಪುಟ್ಟ ಕೆಲಸ ಮಾಡುವ ಕೂಲಿ ಕರ‍್ಮಿಕರು, ವ್ಯಾಪರಸ್ಥರು ಎಲ್ಲರಿಗೂ ಏನು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚನ್ನರಾಯಪ್ಪ ಮಾತನಾಡಿ, ಇರಾಕ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಕೂಡಲೇ ನಿಲ್ಲಿಸ ಬೇಕು. ಪ್ರಸ್ತುತ ಜಗತ್ತಿಗೆ ಬೇಕಾಗಿರುವುದು ಶಾಂತಿಯೇ ಹೊರತು ಯುದ್ಧವಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಸರ್ವಾಧಿಕಾರಿ ಧೋರಣೆ ನಿಲ್ಲಿಸಬೇಕು. ಯುದ್ಧದಿಂದ ಹಲವಾರು ಜನರು ನಲುಗಿ ಹೋಗಿದ್ದು, ಹಲವಾರು ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: Chikkaballapur News: ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ, ಬೆಲೆ ಏರಿಕೆ ವಿರೋಧಿಸಿ ಬ್ಲಾಕ್ ಮತ್ತು ಯುವ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

ಹೀಗಾಗಿ ಯುದ್ಧವನ್ನು ನಿಲ್ಲಿಸಬೇಕು . ದೇಶದಲ್ಲಿ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಸರಬರಾಜಿನಲ್ಲಿ ಬಾರಿ ಪರಿಣಾಮ ಬೀರಿದೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ. ಕೋಮುದ್ವೇಷ ಬಿತ್ತುವ ಬಿಜೆಪಿ ಯವರು ಈ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ. ಯುದ್ಧ ನಿಲ್ಲಿಸುವಂತೆ ಮೋದಿಯವರಿಗೆ ಏಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.  

ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಜಯರಾಮರೆಡ್ಡಿ ಮಾತನಾಡಿ,ಇನ್ನಷ್ಟು ದಿನಗಳ ಕಾಲ ಯುದ್ಧ ಮುಂದುವರಿದರೆ ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆಯಾಗ ಲಿದೆ. ಇಂಧನ ಬೆಲೆ ಹೆಚ್ಚಳವಾದರೆ ಸರಕು ಸಾಗಣೆ ವೆಚ್ಚ ಅಧಿಕವಾಗಿ ಎಲ್ಲ ಪದಾರ್ಥಗಳು ದುಬಾರಿಯಾಗಲಿವೆ. ಇದು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಯುದ್ಧ ಆರಂಭವಾದರೆ ಪೆಟ್ರೋಲಿಯಂ ಉತ್ಪಗಳ ಕೊರತೆ ಉಂಟಾಗಲಿದೆ ಎಂಬುದು ಗೊತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಮುನ್ನೆಚ್ಚರಿಕೆ ವಹಿಸಲಿಲ್ಲ. ಆಡಳಿತ ವೈಫಲ್ಯದಿಂದ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗಿದೆ. ಆಡಳಿತ ನಡೆಸಲು ವಿಫಲರಾಗಿರುವ ಮೋದಿ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಡಿ.ಟಿ.ಮುನಿಸ್ವಾಮಿ, ಡಿ.ಸಿ.ಶ್ರೀನಿವಾಸ್, ಎಂ.ಎಂ.ಆದಿನಾರಾಯಣ, ವೆಂಕಟರೆಡ್ಡಿ, ಬಿ.ಕೃಷ್ಣಪ್ಪ, ಜಿ.ಹೆಚ್.ರಾಜಪ್ಪ, ಮತ್ತಿತರರು ಇದ್ದರು.