ಜಿಲ್ಲೆಯ ಎಲ್ಲಾ ನಗರಗಳನ್ನು "ಕಸ-ಮುಕ್ತ"ವಾಗಿಸಲು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಕರೆ
ಏಕ ಬಳಕೆ ಪ್ಲಾಸ್ಟಿಕ್ ನ್ನು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಯನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಕಟ್ಟಡ ನಿರ್ಮಾಣ ಮತ್ತು ಹಳೆ ಕಟ್ಟಡ ಕೆಡವುವಿಕೆಯಿಂದ ಸೃಜನೆ ಆಗುವ ತ್ಯಾಜ್ಯವನ್ನು ಮಾರ್ಗಸೂಚಿ ಅನ್ವಯವೇ ವಿಲೇವಾರಿ ಮಾಡಬೇಕು ಆ ನಿಟ್ಟಿನಲ್ಲಿ ಸಾರ್ವಜನಿಕರನ್ನು ಸಹ ಜಾಗೃತ ಗೊಳಿಸಬೇಕು.

-

ಚಿಕ್ಕಬಳ್ಳಾಪುರ: ಸಾರ್ವಜನಿಕರು ಗೃಹ-ಆಧಾರಿತ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ಮೂಲದಲ್ಲೇ ವಿಂಗಡಣೆ ಮಾಡಿ ಕಸ ಸಂಗ್ರಹಣೆ ವಾಹನಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಅವರು ಮನವಿ ಮಾಡಿದರು.
ನಗರ ಹೊರ ವಲಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಪೌರಾಡಳಿತ ನಿದೇರ್ಶನಾಲಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛ ಭಾರತ್ ಮಿಷನ್ (ನ)-2.0 ಯೋಜನೆಯಡಿ ಕಮ್ಯು ನಿಟಿ ಮೊಬಿಲೈಸರ್ ಗಳಿಗೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಏಕ ಬಳಕೆ ಪ್ಲಾಸ್ಟಿಕ್ ನ್ನು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಯನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಕಟ್ಟಡ ನಿರ್ಮಾಣ ಮತ್ತು ಹಳೆ ಕಟ್ಟಡ ಕೆಡವುವಿಕೆಯಿಂದ ಸೃಜನೆ ಆಗುವ ತ್ಯಾಜ್ಯವನ್ನು ಮಾರ್ಗಸೂಚಿ ಅನ್ವಯವೇ ವಿಲೇವಾರಿ ಮಾಡಬೇಕು ಆ ನಿಟ್ಟಿನಲ್ಲಿ ಸಾರ್ವಜನಿಕ ರನ್ನು ಸಹ ಜಾಗೃತಗೊಳಿಸಬೇಕು. ಒಟ್ಟಾರೆ ಜಿಲ್ಲೆಯ ನಗರಗಳನ್ನು ಕಸಮುಕ್ತ ಗೊಳಿಸುವುದು, ಸಮಗ್ರ ತ್ಯಾಜ್ಯ ಮತ್ತು ಕಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ತ್ಯಾಜ್ಯ ಪುನರ್ಬಳಕೆ, ಮರುಬಳಕೆ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ನಗರದಲ್ಲಿಯೂ ಉಲ್ಬಣಿಸಿದ ಸಮಸ್ಯೆ: ದ್ವೀಪದಂತಾದ ಸರಕಾರಿ ಮಹಿಳಾ ಕಾಲೇಜು
ಕಮಿಟಿಯ ಮೊಬಿಲೈಸರ್ ಗಳು ತಮ್ಮ ವ್ಯಾಪ್ತಿಯ 3 ವಾರ್ಡ್ ಗಳನ್ನು ವಿಂಗಡಣೆಮಾಡಿಕೊಂಡು ಪ್ರತಿ ದಿನಕ್ಕೆ 10ರಿಂದ 15 ಮನೆಗಳಿಗೆ ಭೇಟಿನೀಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು.ಪ್ರತಿ ವಾರ್ಡ್ ಗಳಲ್ಲೂ ಸಮುದಾಯ ಸಭೆಯನ್ನು ಏರ್ಪಡಿಸಿ ತ್ಯಾಜ್ಯ ವಿಲೇವಾರಿ ಸ್ವಚ್ಛತಾ ಅಭಿಯಾನದ ಬಗ್ಗೆ ಅರಿವು ಮೂಡಿಸಬೇಕು.ಪರಿಸರ ಮತ್ತು ಸಮಾಜವನ್ನು ಸ್ವಚ್ಛತೆಯೊಂದಿಗೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿ ಆಗಿದೆ. ನಮ್ಮೆಲ್ಲರ ಅರೋಗ್ಯ ಕಾಪಾಡಿ ಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ.ಹಸಿ ಕಸ,ಒಣ ಕಸವನ್ನು ಬೇರ್ಪಡಿಸುವಂತೆ ಪ್ರತಿಯೊಬ್ಬ ಸಾರ್ವಜನಿಕರಿಗೂ ಮನವರಿಕೆ ಮಾಡುವುದು ಅತಿಮುಖ್ಯವಾಗಿದೆ. ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಮಳಿಗೆಗಳ ಮತ್ತು ಬೀದಿ ಬದಿ ವ್ಯಾಪಾರಿಗಳಿಗೂ ತಿಳಿ ಹೇಳುವ ಮೂಲಕ ಅರಿವು ಮಾಡಿಸಬೇಕು ಎಂದು ತಿಳಿಸಿದರು.
ನಗರಗಳನ್ನು ಸಂಪೂರ್ಣವಾಗಿ ಕಸದಿಂದ ಮುಕ್ತಗೊಳಿಸಲು ಮನೆಗಳಲ್ಲಿನ ಕಸವನ್ನು ಮೂಲ ದಲ್ಲಿಯೇ ವಿಂಗಡಿಸಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಿಗೆ ಶಿಕ್ಷಣ ನೀಡಿ ಅಭ್ಯಾಸ ಮಾಡಿಸಬೇಕು.ಕಸವನ್ನು ಕಡಿಮೆ ಮಾಡುವ ಹಾಗೂ ಪುನರ್ಬಳಕೆ ಮಾಡುವ ಮತ್ತು ಮರುಬಳಕೆ ಮಾಡುವ ತತ್ವಗಳನ್ನು ಅನುಷ್ಠಾನಗೊಳಿಸಲು ಮತ್ತು ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಆಧುನಿಕ ತಂತ್ರಜ್ಞಾನವನ್ನು ಬೆಂಬಲಿಸಬೇಕು.ಕಸವನ್ನು ಎಲ್ಲೆಂದರೆ ಅಲ್ಲಿ ಎಸೆಯುದೆ ಸರಿಯಾಗಿ ವಿಲೇವಾರಿ ಮಾಡುವಂತೆ ಜನರ ವರ್ತನೆಯನ್ನು ಬದಲಾಯಿಸುವುದು. ನೀರನ್ನು ಮರುಬಳಕೆ ಮಾಡುವುದು ಮತ್ತು ಜಲಮೂಲಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಗಮನ ಹರಿಸುವುದು.ಜಿಲ್ಲೆಯ ಎಲ್ಲಾ ನಗರಗಳನ್ನು "ಕಸ-ಮುಕ್ತ"ವಾಗಿಸುವುದು ಈ ಕಾರ್ಯ ಕ್ರಮದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನಾಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ್, ಕಾರ್ಯ ನಿರ್ವಾಹಕ ಎಂಜಿನಿಯರ್ ಮಾಧವಿ, ಬಾಗೇಪಲ್ಲಿ ಪೌರಯುಕ್ತ ಶ್ರೀನಿವಾಸ್ , ಟೈಡ್ ಸಂಸ್ಥೆಯ ಪ್ರತಿನಿಧಿಗಳಾದ ಶಶಿಪ್ರಿಯ,ಅಶ್ವಿನ್ ಹಾಗೂ ಕಮ್ಯುನಿಟಿ ಮೊಬಿಲೈಸರ್ ಗಳು ಉಪಸ್ಥಿತರಿದ್ದರು.