ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

75th Birthday of Vishnuvardhan: ಕನ್ನಡ ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಗಳಿಸಿಕೊಂಡಿದ್ದ ಅಸಾಧಾರಣ ಪ್ರತಿಭೆಯುಳ್ಳ ನಟ ವಿಷ್ಣುವರ್ಧನ್

ಸಿನಿಮಾ ಮಾತ್ರವಲ್ಲದೇ ಸಮಾಜ ಸೇವಾ ಕಾರ್ಯದಲ್ಲಿಯೂ ವಿಷ್ಣುವರ್ಧನ್ ಅವರು ಮುಂಚುಣಿ ಯಲ್ಲಿದ್ದರು. ಇಷ್ಟೆಲ್ಲ ಸಾಧನೆ ಮಾಡಿರುವ ಅವರು ಇಂದು ಬದುಕಿದ್ದರೆ ತಮ್ಮ 75ನೇ ಹುಟ್ಟುಹಬ್ಬ ವನ್ನು ತಮ್ಮ ಅಭಿಮಾನಿಗಳ ಜೊತೆಗೆ ಅತ್ಯಂತ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಅವರು ನಮ್ಮೊಂದಿಗಿಲ್ಲವಾದರೂ ಅವರು ನಟಿಸಿದ್ದ ಸಿನಿಮಾ ಮೂಲಕ ಇಂದಿಗೂ ಜೀವಂತವಾಗಿದ್ದಾರೆ

ಅಸಾಧಾರಣ ಪ್ರತಿಭೆಯುಳ್ಳ ನಟ ವಿಷ್ಣುವರ್ಧನ್

-

Ashok Nayak Ashok Nayak Sep 19, 2025 11:07 PM

ಶಿಡ್ಲಘಟ್ಟ: ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ಸ್ಥಾನವನ್ನು ಗಳಿಸಿಕೊಂಡಿದ್ದ ಅಸಾಧಾರಣ ಪ್ರತಿಭೆಯುಳ್ಳ ನಟ ವಿಷ್ಣುವರ್ಧನ್ ಎಂದು ಕದಂಬ ಸೈನ್ಯ ಕನ್ನಡ ಸಂಘಟನೆ ತಾಲ್ಲೂಕು ಅಧ್ಯಕ್ಷ ಹಾಗೂ ಕಲಾವಿದ ಸಿ.ಎನ್ ಮುನಿರಾಜು ತಿಳಿಸಿದರು.

ಶಿಡ್ಲಘಟ್ಟ ನಗರದ ಹುಲ್ಲೂರುಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕದಂಬ ಸೈನ್ಯ ಕನ್ನಡ ಸಂಘಟನೆ ವತಿಯಿಂದ ಡಾ.ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆ ಪ್ರಯುಕ್ತ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕಗಳು ಮತ್ತು ಜಾಮಿಟೇರಿ ಬಾಕ್ಸ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: Shidlaghatta News: ವಿಶ್ವದ ಮೊದಲ ಎಂಜಿನಿಯರ್ ಸಮುದಾಯ ಎಂದರೆ ವಿಶ್ವಕರ್ಮರಾಗಿದ್ದಾರೆ ಎಂದು ಶಾಸಕ ಬಿ.ಎನ್ ರವಿಕುಮಾರ್

ಸಿನಿಮಾ ಮಾತ್ರವಲ್ಲದೇ ಸಮಾಜ ಸೇವಾ ಕಾರ್ಯದಲ್ಲಿಯೂ ವಿಷ್ಣುವರ್ಧನ್ ಅವರು ಮುಂಚುಣಿ ಯಲ್ಲಿದ್ದರು. ಇಷ್ಟೆಲ್ಲ ಸಾಧನೆ ಮಾಡಿರುವ ಅವರು ಇಂದು ಬದುಕಿದ್ದರೆ ತಮ್ಮ 75ನೇ ಹುಟ್ಟುಹಬ್ಬ ವನ್ನು ತಮ್ಮ ಅಭಿಮಾನಿಗಳ ಜೊತೆಗೆ ಅತ್ಯಂತ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಅವರು ನಮ್ಮೊಂದಿಗಿಲ್ಲವಾದರೂ ಅವರು ನಟಿಸಿದ್ದ ಸಿನಿಮಾ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದರು.

ಕದಂಬ ಸೈನ್ಯ ರಾಜ್ಯ ಉಪಾಧ್ಯಕ್ಷ ಹಾಗೂ ರಂಗಭೂಮಿ ಕಲಾವಿದ ಡಾ.ದೇವನಹಳ್ಳಿ ದೇವರಾಜ್ ಮಾತನಾಡಿ, ಡಾ: ವಿಷ್ಣುವರ್ಧನ್ ರವರು ಆಡು ಮುಟ್ಟದ ಸೊಪ್ಪಿಲ್ಲ ಎಂದಂತೆ ಅವರು ಮಾಡದ ಪಾತ್ರ ಅಭಿನಯ ಇಲ್ಲ. ನಾಟಕದಲ್ಲಿ ಹೆಣ್ಣಿನ ಪಾತ್ರವನ್ನು ಕೂಡ ಮಾಡಿ ಪ್ರೇಕ್ಷಕರ ಮನಸೂರೆ ಗೊಂಡಿದ್ದರು ಹಾಗೂ ಸಮಾಜ ಸೇವೆಯಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿ ಕನ್ನಡಿಗರ ಆಸ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಸಿರೇ ಉಸಿರಿನ ಟ್ರಸ್ಟಿನ ಅಧ್ಯಕ್ಷ ಬೆಟ್ಟ ಅಲಸೂರು ಶ್ರೀನಿವಾಸ್ ಮೂರ್ತಿ ವತಿಯಿಂದ ಕದಂಬ ಸೈನ್ಯ ಕನ್ನಡ ಸಂಘಟನೆಯ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಕದಂಬ ಸೈನ್ಯ ಕನ್ನಡ ಸಂಘಟನೆ ಗೌರವಾಧ್ಯಕ್ಷ ಹಾಗೂ ಸಂಚಾಲಕ ಸ್ಪೋರ್ಟ್ಸ್ ಮುನಿರಾಜು,ಉಪಾಧ್ಯಕ್ಷ ವಿ ವೆಂಕಟೇಶ್, ಕಾರ್ಯದರ್ಶಿ ಶ್ರೀನಿವಾಸ್ ವಿಶ್ವಕರ್ಮ, ಖಜಂಚಿ ಸಿ ಮುಖೇಶ್,ಸುಬ್ಬು ಮಾಸ್ಟರ್ ಫೋಟೋ ಎಸ್ ಮಂಜುನಾಥ್ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.