ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chinthamani News: ಕುರುಬೂರು ರೇಷ್ಮೆ ಬೆಳೆಗಾರರ  ವಾರ್ಷಿಕ ಮಹಾಸಭೆ : ಜಿಲ್ಲೆಯಲ್ಲಿ ಮಾದರಿ ಸಂಘದ ಕಟ್ಟಡ ನಿರ್ಮಾಣ

ಸಂಘದ ಎಲ್ಲಾ ನಿರ್ದೇಶಕರು ರೈತರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಸರ್ಕಾರದಿಂದ ಬರುವ ಸೌಲತ್ತು ಗಳು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದ ಅವರು ಸಹಕಾರ ಸಂಘಗಳಲ್ಲಿ ಸಾಲ ಪಡೆದಂತಹವರು ಸಕಾಲಕ್ಕೆ ಸಾಲ ಮರುಪಾವತಿಸಿದಾಗ ಬೇರೆ ರೈತರಿಗೂ ಸಾಲ ಕೊಡಬಹುದು ಜೊತೆಗೆ ಸಂಘವೂ ಸಹ ಅಭಿವೃದ್ದಿಯಾಗುತ್ತದೆ.

ಕುರುಬೂರು ರೇಷ್ಮೆ ಬೆಳೆಗಾರರ  ವಾರ್ಷಿಕ ಮಹಾಸಭೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಕಟ್ಟಡ ಮಾದರಿಯಾಗಿದೆ ಎಂದು ಅಧ್ಯಕ್ಷರಾದ ವೆಂಕಟರೆಡ್ಡಿ ಎಂ ಹೇಳಿದರು. -

Ashok Nayak Ashok Nayak Sep 26, 2025 12:32 AM

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಕಟ್ಟಡ ಮಾದರಿಯಾಗಿದೆ ಎಂದು ಅಧ್ಯಕ್ಷರಾದ ವೆಂಕಟರೆಡ್ಡಿ ಎಂ ಹೇಳಿದರು.

ಇಂದು ಚಿಂತಾಮಣಿ ತಾಲೂಕಿನ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು ಈ ಭಾಗದ ರೈತರ ಹಾಗೂ ಪ್ರತಿಯೊಬ್ಬರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಮಾದರಿ ನೂತನ ಕಟ್ಟಡ ನಿರ್ಮಾಣವಾಗಿದೆ.

ಸಂಘದ ಎಲ್ಲಾ ನಿರ್ದೇಶಕರು ರೈತರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಸರ್ಕಾರದಿಂದ ಬರುವ ಸೌಲತ್ತುಗಳು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದ ಅವರು ಸಹಕಾರ ಸಂಘಗಳಲ್ಲಿ ಸಾಲ ಪಡೆದಂತಹವರು ಸಕಾಲಕ್ಕೆ ಸಾಲ ಮರುಪಾವತಿಸಿದಾಗ ಬೇರೆ ರೈತರಿಗೂ ಸಾಲ ಕೊಡಬಹುದು ಜೊತೆಗೆ ಸಂಘವೂ ಸಹ ಅಭಿವೃದ್ದಿಯಾಗುತ್ತದೆ.

ಇದನ್ನೂ ಓದಿ: Chinthamani News: ವರ್ಗಾವಣೆಯಾದ ಉಪನೋಂದಣಾಧಿಕಾರಿಗೆ ಸನ್ಮಾನಿಸಿದ ಪತ್ರ ಬರಹಗಾರರು

ಸಹಕಾರ ಸಂಘಗಳು ಷೇರುದಾರರು ಹಾಗೂ ರೈತರ ಅಭಿವೃದ್ದಿಗಾಗಿ ಕೆಲಸ ಮಾಡುತ್ತವೆ.ಈ ಸಹಕಾರ ಸಂಘಗಳು ಅಭಿವೃದ್ದಿಯಾಗಬೇಕು,ಎಲ್ಲರಿಗೂ ಸಾಲಗಳು ನೀಡಬೇಕು ಎಂದಾದರೇ ಸಾಲ ತೆಗೆದುಕೊಂಡವರು ಸಕಾಲಕ್ಕೆ ಮರುಪಾವತಿ ಮಾಡಬೇಕು. ಆಗ ಎಲ್ಲರಿಗೂ ಸಾಲ ನೀಡಲು ಸಾಧ್ಯವಾಗುತ್ತದೆ.ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ರೈತರಿಗೆ ಸಾಲ ನೀಡಲು ಶ್ರಮಿಸಲಾಗು ವುದು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ರೈತರು ಗೊಬ್ಬರ,ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೃಷ್ಣಪ್ಪ ಕೆ ಎಂ,ನಿರ್ದೇಶಕರಾದ ಮಂಜುನಾಥ್ ಕೆ ಎಂ,ನಟರಾಜ್ ಕೆಎಂ,ಶಿವಾರೆಡ್ಡಿ ಎಂ, ಶ್ರೀನಿವಾಸ್ ಗೌಡ, ನೇತಾಜಿ ಗೌಡ, ವಿಶ್ವನಾಥ್ ರೆಡ್ಡಿ,ಮುನಿವೆಂಕಟಪ್ಪ,ಕೃಷ್ಣಪ್ಪ ಎಜೆ, ಚಂದ್ರಕಲಾ,ಗAಗಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ವೆಂಕಟೇಶಮೂರ್ತಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.