ಹಣ ಪಡೆದು 0G ಫಿಲಂ ಪ್ರದರ್ಶನ ಮಾಡದ ಹಿನ್ನಲೆ, ಪವನ್ ಕಲ್ಯಾಣ್ ಫ್ಯಾನ್ಸ್ ನಿಂದ ಗಲಾಟೆ
ಪವನ್ ಕಲ್ಯಾಣ್ ನಟಿಸಿರುವ 0G ಚಿತ್ರ ಪ್ರದರ್ಶನ ಮಾಡುತ್ತೇವೆ ಎಂದು ಪವನ್ ಕಲ್ಯಾಣ್ ಫ್ಯಾನ್ಸ್ ನಿಂದ ಒಂದು ದಿನ ಮುಂಚೆ ಜನರಿಂದ ಫೋನ್ ಪೇ ಮುಖಾಂತರ ಹಣ ಪಾವತಿಸಿ ಟಿಕೆಟ್ ಬುಕಿಂಗ್ ಮಾಡಿದ ಫ್ಯಾನ್ಸ್ ರಾತ್ರಿ 8 ಗಂಟೆಗೆ ಫಿಲಂ ನೋಡಲು ಚಿತ್ರಮಂದಿರಕ್ಕೆ ಬಂದಿದ್ದಾರೆ. ರಾತ್ರಿ 9ಗಂಟೆ ಯಾದರೂ ಚಿತ್ರ ಪ್ರದರ್ಶನ ಮಾಡದ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿ ಪರದೆ ಹರಿದು ಚೇರುಗಳು ಬೀಸಾಡಿ, ಸಿಸಿ ಟಿವಿ ಕ್ಯಾಮೆರಾಗಳು ಧ್ವಂಸಗೊಳಿಸಿ ಚಿತ್ರಮಂದಿರದಲ್ಲಿ ನೂಕು ನುಗ್ಗಲು ಉಂಟಾಗಿದೆ.

-

ಚಿಂತಾಮಣಿ: ಪವನ್ ಕಲ್ಯಾಣ್ ನಟಿಸಿರುವ ಓ ಜಿ ಚಲನಚಿತ್ರ ಪ್ರದರ್ಶನ ಮಾಡದೆ ಪವನ್ ಕಲ್ಯಾಣ್ ಫ್ಯಾನ್ಸಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಫ್ಯಾನ್ಸ್ ಚಿತ್ರಮಂದಿರದ ಪರದೆ ಹಾಗೂ ವಸ್ತುಗಳು ಧ್ವಂಸಗೊಳಿಸಿ ಗಲಾಟೆ ಮಾಡಿರುವ ಘಟನೆ ಚಿಂತಾಮಣಿ ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಆದರ್ಶ ಚಿತ್ರಮಂದಿರದ ಎದುರುಗಡೆ ನಡೆದಿದೆ.
ಪವನ್ ಕಲ್ಯಾಣ್ ನಟಿಸಿರುವ 0G ಚಿತ್ರ ಪ್ರದರ್ಶನ ಮಾಡುತ್ತೇವೆ ಎಂದು ಪವನ್ ಕಲ್ಯಾಣ್ ಫ್ಯಾನ್ಸ್ ನಿಂದ ಒಂದು ದಿನ ಮುಂಚೆ ಜನರಿಂದ ಫೋನ್ ಪೇ ಮುಖಾಂತರ ಹಣ ಪಾವತಿಸಿ ಟಿಕೆಟ್ ಬುಕಿಂಗ್ ಮಾಡಿದ ಫ್ಯಾನ್ಸ್ ರಾತ್ರಿ 8 ಗಂಟೆಗೆ ಫಿಲಂ ನೋಡಲು ಚಿತ್ರಮಂದಿರಕ್ಕೆ ಬಂದಿದ್ದಾರೆ. ರಾತ್ರಿ 9:00 ಗಂಟೆ ಯಾದರೂ ಚಿತ್ರ ಪ್ರದರ್ಶನ ಮಾಡದ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿ ಪರದೆ ಹರಿದು ಚೇರುಗಳು ಬೀಸಾಡಿ, ಸಿಸಿ ಟಿವಿ ಕ್ಯಾಮೆರಾಗಳು ಧ್ವಂಸಗೊಳಿಸಿ ಚಿತ್ರಮಂದಿರದಲ್ಲಿ ನೂಕು ನುಗ್ಗಲು ಉಂಟಾಗಿದೆ. ಕೂಡಲೇ ಸ್ಥಳಕ್ಕೆ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ ತಮ್ಮ ಸಿಬ್ಬಂದಿ ಯೊಂದಿಗೆ ದೌಡಾಯಿಸಿ ಫಿಲಂ ವೀಕ್ಷಿಸಲು ಬಂದಿದ್ದ ಎಲ್ಲರಿಗೂ ಹೊರ ಹಾಕಿ ಚಿತ್ರಮಂದಿರದ ಗೇಟ್ ಹಾಕಿದ ಹಿನ್ನೆಲೆ ಪವನ್ ಕಲ್ಯಾಣ್ ಫ್ಯಾನ್ಸ್ ನ್ಯಾಯ ಬೇಕು ಹಾಗೂ ನಮಗೆ ಚಿತ್ರ ಪ್ರದರ್ಶನ ಮಾಡುತ್ತೇವೆ ಎಂದು ಫೋನ್ ಪೇ ಹಾಗೂ ಕ್ಯಾಶ್ ಹಣ ಪಡೆದು ಮೋಸ ಮಾಡಿರುವ ಚಿತ್ರಮಂದಿರದ ಮಾಲೀಕರ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ರಸ್ತೆಗೆ ಇಳಿದಿದ್ದಾರೆ.
ಇದನ್ನೂ ಓದಿ: Pawan Kalyan Movie: ಪವನ್ ಕಲ್ಯಾಣ್ ನಟನೆಯ 'ಒಜಿ'ಗೆ ಸಖತ್ ರೆಸ್ಪಾನ್ಸ್- ಸಿನಿಮಾ ನೋಡಿ ಪ್ರಶಾಂತ್ ನೀಲ್ ಫುಲ್ ಖುಷ್!
ಚಿತ್ರಮಂದಿರದ ಎದುರುಗಡೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಂತೆ ತಕ್ಷಣವೇ ನಗರ ಠಾಣೆಯ ಪೊಲೀಸರು, ದಿಬ್ಬೂರಹಳ್ಳಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಪವನ್ ಕಲ್ಯಾಣ್ ಫ್ಯಾನ್ಸ್ ಅನ್ನು ಕಂಟ್ರೋಲ್ ಮಾಡುವ ಎಲ್ಲಾ ರೀತಿಯ ಪ್ರಯತ್ನಪಟ್ಟು ರಾತ್ರಿ 12:00 ಗಂಟೆಗೆ ಚಿತ್ರಮಂದಿರದ ಮಾಲೀಕರೊಂದಿಗೆ ಪೊಲೀಸರು ಮಾತುಕತೆ ನಡೆಸಿ ಚಿತ್ರ ವೀಕ್ಷಿಸಲು ಬಂದಿರುವ ಪವನ್ ಕಲ್ಯಾಣ್ ಫ್ಯಾನ್ಸ್ ಗೆ ಟಿಕೆಟ್ ಕೊಡಿಸಿ 400 ರೂಪಾಯಿ ಹಣವನ್ನು ಬೆಳಗ್ಗೆ ವಾಪಸ್ ಕೊಡಿಸುವ ಭರವಸೆ ಕೊಟ್ಟು ಕಳುಹಿಸಿದ್ದಾರೆ.
ಈ ವೇಳೆ ಮಾತನಾಡಿದ ಪವನ್ ಕಲ್ಯಾಣ್ ಫ್ಯಾನ್ಸ್ ಒಂದು ದಿನ ಮುಂಚಿತವಾಗಿ ಫೋನ್ ಪೇ ಹಾಗೂ ಆನ್ಲೈನ್ ಮುಖಾಂತರ ಪವನ್ ಕಲ್ಯಾಣ್ ನಟಿಸಿರುವ ಓ ಜಿ ಫಿಲಂ ಪ್ರದರ್ಶನ ಮಾಡುತ್ತೇವೆ ಎಂದು ಸುಮಾರು 300 ಜನರಿಂದ ಹಣ ಪಡೆದು ಮೋಸ ಮಾಡಿರುವ ಚಿತ್ರಮಂದಿರದ ಮಾಲೀಕರ ವಿರುದ್ಧ ಅತ್ಯಂತ ಬೇಸರವಾಗಿದೆ. ನಾವು ಬೇರೆ ಊರುಗಳಿಂದ ಫಿಲಂ ನೋಡಲು ಬಂದಿದ್ದೇವೆ, ಆದರೆ ನಮಗೆ ಇಲ್ಲಿ ಮೋಸ ಮಾಡಲಾಗಿದೆ ಎಂದು ಹೇಳಿದರು.