ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande News: ಪ್ರತೀ ತಿಂಗಳು ಬಗರ್ ಹುಕುಂ ಸಮಿತಿ ಸಭೆ ನಡೆಸಲು ಭೂ ಹಕ್ಕುದಾರರ ವೇದಿಕೆ ಆಗ್ರಹ

ತಾಲೂಕಿನಲ್ಲಿರುವ ಅನೇಕ ಭೂ ರಹಿತ ರೈತರು ಸರ್ಕಾರದ ಬಗರ್ ಹುಕುಂ ಯೋಜನೆಯಡಿ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸಿ ಕೊಳ್ಳುತ್ತಿದ್ದಾರೆ. ತಮಗೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಫಾರಂ.೫೦, ೫೩ ಹಾಗೂ ೫೭ ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಗುಡಿಬಂಡೆ: ತಾಲೂಕಿನಾದ್ಯಂತ ಭೂಮಿ ಒಡೆತನ ಹಕ್ಕಿಗಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಜಮೀನು ಮಂಜೂರು ಮಾಡುವ ನಿಟ್ಟಿನಲ್ಲಿ ಪ್ರತಿ ತಿಂಗಳು ಬಗರ್ ಹುಕುಂ ಸಮಿತಿ ಸಭೆಯನ್ನು ನಡೆಸ ಬೇಕೆಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಲಾಯಿತು.

ಈ ವೇಳೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಗುಡಿಬಂಡೆ ತಾಲೂಕು ಸಮಿತಿಯ ಸಂಯೋ ಜಕಿ ಸೌಭಾಗ್ಯಮ್ಮ ಮಾತನಾಡಿ, ತಾಲೂಕಿನಲ್ಲಿರುವ ಅನೇಕ ಭೂ ರಹಿತ ರೈತರು ಸರ್ಕಾರದ ಬಗರ್ ಹುಕುಂ ಯೋಜನೆಯಡಿ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸಿ ಕೊಳ್ಳುತ್ತಿದ್ದಾರೆ. ತಮಗೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈ ಸಂಬAಧ ಫಾರಂ.೫೦, ೫೩ ಹಾಗೂ ೫೭ ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ಸುಮಾರು ೧೫-೨೦ ವರ್ಷಗಳು ಕಳೆದರೂ ಇಲ್ಲಿಯವರೆಗೂ ಫಾರಂ ನಂ ೫೦ ಹಾಗೂ ೫೩ ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಇಂದಿಗೂ ಸಾಗುವಳಿ ಚೀಟಿ ನೀಡಿಲ್ಲ. ಇದರಿಂದ ರೈತರಿಗೆ ಅನ್ಯಾಯ ವಾಗುತ್ತಿದೆ. ಆದ್ದರಿಂದ ಸಮಿತಿಯ ಅಧ್ಯಕ್ಷರಾದ ಶಾಸಕ ಸುಬ್ಬಾರೆಡ್ಡಿಯವರು ಪ್ರತಿ ತಿಂಗಳು ಸಭೆ ನಡೆಸಿ ತ್ವರಿತವಾಗಿ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು ಎಂದರು.

ಇದನ್ನೂ ಓದಿ: Chikkaballapur News: ಕನ್ನಡ ಭಾಷೆ ಹಾಗೂ ಸಾಹಿತ್ಯದ ಒಳಗೊಳ್ಳುವ ಗುಣ ಮನುಕುಲಕ್ಕೆ ಮಾದರಿ

ಇನ್ನೂ ಫಾರಂ ನಂ ೫೭ ರಲ್ಲಿ ಅರ್ಜಿ ಸಲ್ಲಿಸಿ ಅನೇಕ ರೈತರ ಹೆಸರುಗಳು ತಂತ್ರಾಂಶದಲ್ಲಿ ಲಭ್ಯ ವಾಗುತ್ತಿಲ್ಲ. ಕೈ ಬರಹದ ಅರ್ಜಿ ನಕಲು ಪ್ರತಿಗಳು ರೈತರ ಬಳಿಯಿದೆ. ಕೈಬರಹದ ಅರ್ಜಿಗಳನ್ನು ಗಣಕೀಕರಣ ಮಾಡುವ ಜವಾಬ್ದಾರಿ ಅಧಿಕಾರಿಗಳಿಗೆ ಸೇರಿದ್ದು, ಆದರೆ ಈ ಕೆಲಸ ಅಧಿಕಾರಿಗಳು ಮಾಡಿಲ್ಲ. ಇದರಿಂದ ಅನೇಕ ರೈತರಿಗೆ ಅನ್ಯಾಯವಾಗಲಿದೆ. ಜೊತೆಗೆ ಕೆಲವೊಂದು ಜಮೀನುಗಳು ಪರಿಭಾವಿತ ಅರಣ್ಯ ಎಂದು ಘೋಷಣೆ ಮಾಡಿದ್ದಾರೆ.

ಇದರಿಂದಾಗಿ ಅರಣ್ಯ ಇಲಾಖೆಯವರು ರೈತರು ಉಳುಮೆ ಮಾಡುತ್ತಿರುವ ಜಮೀನಿನ ಮೇಲೆ ಬೀಳುತ್ತಿದ್ದಾರೆ. ಕಂದಾಯ ಇಲಾಖೆಯವರು ಅರಣ್ಯ ಇಲಾಖೆಯ ಎನ್.ಒ.ಸಿ ಕೇಳುತ್ತಾರೆ. ಅದನ್ನು ಕಂದಾಯ ಇಲಾಖೆಯ ಅಧಿಕಾರಿಗಳೇ ಪಡೆದುಕೊಳ್ಳಬೇಕು. ಸಾಮಾನ್ಯ ರೈತರಿಗೆ ಈ ಕೆಲಸ ಮಾಡ ಲು ಆಗುವುದಿಲ್ಲ. ಇದರ ಜೊತೆಗೆ ಫಾರಂ ನಂ ೫೦, ೫೩ ರಲ್ಲಿ ಅರ್ಜಿ ಸಲ್ಲಿಸಿದ ರೈತರ ವಿವರಗಳನ್ನು ತಾಲೂಕು ಕಚೇರಿಯ ನೊಟೀಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಲಲಿತಮ್ಮ, ರಾಮಸ್ವಾಮಿ, ನಾರಾಯಣಪ್ಪ, ಗೌಸ್ ಪೀರ್, ಪ್ರಮೀಳಮ್ಮ, ಮಾಧವಿ, ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಸಿಬ್ಬಂದಿಯಾದ ಸಂತೋಷ್ ಕುಮಾರ್ ಹಾಗೂ ಅನುಷಾ ಸೇರಿದಂತೆ ಹಲವರು ಇದ್ದರು.