ಚಿಕ್ಕಬಳ್ಳಾಪುರ : ಈ ಬಾರಿ ಎಸ್,ಎಸ್,ಎಲ್,ಸಿ, ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಪ್ರಣತಿ ರಾಜ್ ಜಿ 625ಕ್ಕೆ 624 ಅಂಕಗಳಿಸುವ ಮೂಲಕ ಜ್ಞಾನದ ಶಿಖರ ಏರಿದ್ದಾರೆ. ಇವರ ಭವಿಷ್ಯ ಹಸನಾಗಿರಲಿ ಎಂದು ಹಾರೈಸಿ ಆತ್ಮೀಯವಾಗಿ ಅಭಿನಂದಿಸಿದ್ದೇವೆ ಎಂದು ವಕೀಲ ಆರ್. ಮಟಮಪ್ಪ ತಿಳಿಸಿದರು.
ತಾಲೂಕಿನ ಮಂಚನಬಲೆ ಗ್ರಾಮದ ವಕೀಲರಾದ ಗಂಗರಾಜು ಅವರ ಮನೆಗೆ ತೆರಳಿ ಅವರ ಮಗಳಾದ ಕುಮಾರಿ ಪ್ರಣತಿರಾಜ್ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಪ್ರಣಿತಿರಾಜ್ ನಂತರ ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ ಧನುಶ್ರೀ.ಸಿ 625ಕ್ಕೆ 621 ಇವರಿ ಬ್ಬರೂ ನಮ್ಮ ಆತ್ಮೀಯ ವಕೀಲ ಮಿತ್ರರ ಮಕ್ಕಳೆಂಬುದು ಹೆಮ್ಮೆಯ ಸಂಗತಿ. ಇವರಿಬ್ಬರೂ ಕೂಡ ತಾಲೂಕಿನ ಮಂಚನಬಲೆ ಬಿ,ಜಿ,ಎಸ್ ಪ್ರೌಢಶಾಲೆ ಹಾಗೂ ಅಗಲ ಗುರ್ಕಿ ಬಿ.ಜಿ.ಎಸ್ ಶಾಲೆಯಲ್ಲಿ ಸಾಧನೆಯನ್ನು ಮಾಡಿರುತ್ತಾರೆ. ಹಾಗಾಗಿ ಇಬ್ಬರು ಹೆಣ್ಣು ಮಕ್ಕಳಿಗೂ ವಕೀಲ ವೃಂದ ಹೋಗಿ ಸನ್ಮಾನ ಮಾಡಿ ಶುಭ ಕೋರಲಾಯಿತು.
ಇದನ್ನೂ ಓದಿ: Chikkaballapur News: ಗುರುತಿನ ಚೀಟಿಯಿರುವ ಶಾಲಾ ಮಕ್ಕಳಿಗೆ 10 ದಿನಗಳ ವಿಶೇಷ ರಿಯಾಯಿತಿ ಘೋಷಣೆ
ಈ ಹೆಣ್ಣು ಮಕ್ಕಳ ಸಾಧನೆಗೆ ಸಹಕರಿಸಿದ ತಂದೆ ತಾಯಿಗಳಿಗೆ ಹಾಗೂ ಬಿ.ಜಿ.ಎಸ್ ನ ಎಲ್ಲಾ ಉಪಾಧ್ಯಾಯರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
"ಸಾಧನೆ ಎಂಬುದು ಯಾರೊಬ್ಬರ ಸ್ವತ್ತಲ್ಲ ಅದು ಸಾಧಿಸಿದವರ ಸ್ವತ್ತಾಗಿರುತ್ತದೆ" ಎಂಬು ದಕ್ಕೆ ಇಬ್ಬರು ಹೆಣ್ಣುಮಕ್ಕಳು ಉದಾಹರಣೆಯಾಗಿ ನಿಲ್ಲುತ್ತಾರೆ. ಇಬ್ಬರ ಹೆಣ್ಣು ಮಕ್ಕಳಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಇವರ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸುತ್ತೇವೆ ಎಂದರು.
ಚಿಕ್ಕಬಳ್ಳಾಪುರದ ಹಿರಿಯ ವಕೀಲರಾದ ಬಾಲಸುಬ್ರಮಣ್ಯಂ, ಚಂದ್ರಪ್ಪ ಶ್ರೀರಾಂಪುರ ನರಸಿಂಹಮೂರ್ತಿ, ಮಂಚನಬೆಲೆ ಗಂಗರಾಜು ಹಾಗೂ ಯುವ ವಕೀಲರಗಳಾದ ಮುನಿರಾಜು, ಶ್ರೀ ಕೃಷ್ಣ, ಮಂಜುನಾಥ್ ರೆಡ್ಡಿ, ಅಮರ್ ಉಸ್ಮಾನ್. ಹಾಗೂ ಇತರರು ಹಾಜರಿದ್ದರು.