ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gudibande News: ಎಲ್ಲವನ್ನೂ ನೀಡುವ ಭೂ ತಾಯಿಯನ್ನು ನಾವು ಸಂರಕ್ಷಿಸೋಣ : ನಾಗಮಣಿ

ಇಂದು ಭೂಮಿ ನಮಗೆ ಸಾಕಷ್ಟು ನೀಡಿದೆ. ಆದರೆ ನಾವು ಭೂಮಿಯನ್ನು ನಾಶ ಮಾಡುತ್ತಿದ್ದೇವೆ. ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಭೂಮಿ ಹಂತ ಹಂತವಾಗಿ ನಾಶವಾಗುತ್ತಿದೆ. ಭೂಮಿ ಇಲ್ಲ ಅಂದರೇ ಇಡೀ ವಿಶ್ವವೇ ನಾಶವಾಗುತ್ತದೆ. ಆದ್ದರಿಂದ ನಾವೆಲ್ಲರೂ ಭೂಮಿಯನ್ನು ಕಾಪಾಡು ವಂತಹ ಕೆಲಸ ಮಾಡಬೇಕು. ಇದೀಗ ಉಪ್ಪಾರಹಳ್ಳಿ ಗ್ರಾಮದಲ್ಲಿ ಪುರಾತನ ಕಲ್ಯಾಣಿಯನ್ನು ಸ್ವಚ್ಛ ಗೊಳಿಸಲಾಗಿದೆ.

ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಕಲ್ಯಾಣಿ ಸ್ವಚ್ಚತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗುಡಿಬಂಡೆ: ಭೂಮಿಯ ಮೇಲೆ ಪ್ರಾಣಿಗಳು ಹುಟ್ಟಿದಾಗಿನಿಂದಲೂ ಎಲ್ಲವನ್ನೂ ನೀಡುವಂತಹ ಭೂಮಿಯನ್ನು ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದ್ದು, ಪ್ರತಿಯೊಬ್ಬರೂ ಭೂಮಿ ಕಾಪಾಡುವಂತಹ ಕೆಲಸಗಳನ್ನು ಮಾಡಬೇಕೆಂದು ತಾಪಂ ಇಒ ನಾಗಮಣಿ ತಿಳಿಸಿದರು.

ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ,  ತಾಲೂಕು ಪಂಚಾಯತಿ ರವರುಗಳ ಸಹಯೋಗದಲ್ಲಿ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಲ್ಯಾಣಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ: Gudibande News: ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಒಗ್ಗಟ್ಟಿನ ಹೋರಾಟಕ್ಕೆ ಮುಖಂಡರ ನಿರ್ಧಾರ

ಇಂದು ಭೂಮಿ ನಮಗೆ ಸಾಕಷ್ಟು ನೀಡಿದೆ. ಆದರೆ ನಾವು ಭೂಮಿಯನ್ನು ನಾಶ ಮಾಡುತ್ತಿದ್ದೇವೆ. ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಭೂಮಿ ಹಂತ ಹಂತವಾಗಿ ನಾಶವಾಗುತ್ತಿದೆ. ಭೂಮಿ ಇಲ್ಲ ಅಂದರೇ ಇಡೀ ವಿಶ್ವವೇ ನಾಶವಾಗುತ್ತದೆ. ಆದ್ದರಿಂದ ನಾವೆಲ್ಲರೂ ಭೂಮಿಯನ್ನು ಕಾಪಾಡು ವಂತಹ ಕೆಲಸ ಮಾಡಬೇಕು. ಇದೀಗ ಉಪ್ಪಾರಹಳ್ಳಿ ಗ್ರಾಮದಲ್ಲಿ ಪುರಾತನ ಕಲ್ಯಾಣಿಯನ್ನು ಸ್ವಚ್ಛ ಗೊಳಿಸಲಾಗಿದೆ. ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನದಂತೆ ತಾಲೂಕಿ ನಲ್ಲಿರುವ ಕಲ್ಯಾಣಿಗಳ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎಂದರು.

ಬಳಿಕ ವಕೀಲರ ಸಂಘದ ಅಧ್ಯಕ್ಷ ಅಶ್ವತ್ಥರೆಡ್ಡಿ ಮಾತನಾಡಿ, ಸಂವಿಧಾನ ಬದ್ಧವಾಗಿ ಪ್ರತಿಯೊಬ್ಬ ಪ್ರಜೆಯೂ ಪರಿಸರವನ್ನು ರಕ್ಷಿಸುವ ಮೂಲಭೂತ ಕರ್ತವ್ಯವನ್ನು ಹೊಂದಿದ್ದಾನೆ. ಕಾನೂನು ಅರಿವಿನ ಜೊತೆಗೆ ಪರಿಸರ ಕಾಳಜಿಯನ್ನೂ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ. ಭೂಮಿಯ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಇಂದು ವಿಶ್ವ ಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಜಲಮೂಲಗಳನ್ನು ಸಂರಕ್ಷಣೆ ಮಾಡಬೇಕಾದ ಅಗತ್ಯ ತೆ ಇದೆ. ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸುವುದರಿಂದ ಪ್ರಾಣಿ ಪಕ್ಷಿಗಳಿಗೆ ಹಾಗೂ ಜನರಿಗೂ ಸಹ ನೀರಿನ ಸಮಸ್ಯೆ ತೀರುತ್ತದೆ ಎಂದರು.

ಈ ಸಮಯದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಸಿ.ವಿ.ಮಂಜುನಾಥ, ಪ್ಯಾನೆಲ್ ವಕೀಲರಾದ ಪವಿತ್ರ, ಎಲ್ಲೋಡು ಪಿ.ಡಿ.ಓ, ಶ್ರೀನಿವಾಸ್, ದಪ್ಪರ್ತಿ ಪಿ.ಡಿ.ಓ ರಾಮಾಂಜಿ, ಉಲ್ಲೋಡು ಪಿ.ಡಿ.ಓ ಶ್ರೀನಿವಾಸ,  ನ್ಯಾಯಾಲಯದ ಸಿಬ್ಬಂದಿ ಸುರೇಶ್ ಪಂಚಾಯಿತಿಗಳ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು.