ಚಿಕ್ಕಬಳ್ಳಾಪುರ: ನೀರು ಜೀವ ಸಂಕುಲಕ್ಕೆ ಅತ್ಯವಶ್ಯವಾದ ದ್ರವರೂಪದ ಆಹಾರವಾಗಿದೆ. ಅದೇ ರೀತಿ ಮೂಕ ಪ್ರಾಣಿಗಳಿಗೂ ನೀರು ಅತ್ಯವಶ್ಯಕ. ಇದನ್ನು ಮನಗಂಡು ಪ್ರತಿಯೊಬ್ಬರೂ ಕೂಡ ತಮಗೆ ಅನುಕೂಲ ಇರುವ ಕಡೆ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ( Justice T.P. Ramalingegowda)ಕರೆ ನೀಡಿದರು.
ಚಿಕ್ಕಬಳ್ಳಾಪುರ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಚಿಕ್ಕಬಳ್ಳಾಪುರ ಹಾಗೂ ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ವಿಶ್ವ ಜಲ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Chikkaballapuara news: ಮಂತ್ರಾಲಯ ಬಳಿ ಭೀಕರ ಅಪಘಾತ, ಚಿಕ್ಕಮಗಳೂರಿನ 8 ಮಂದಿ ಭಕ್ತರು ದುರ್ಮರಣ
ನೀರು ಜೀವ ಸಂಕುಲಕೆ ಅತ್ಯವಶ್ಯಕ ಅದೇ ರೀತಿ ಮೂಕ ಪ್ರಾಣಿಗಳಿಗೂ ನೀರು ಅತ್ಯವಶ್ಯಕ.ಎಲ್ಲರೂ ತಮ್ಮಗೆ ಅನುಕೂಲ ಇರುವ ಕಡೆ ಪ್ರಾಣಿ ಪಕ್ಷಿಗಳಿಗೆ ನೀರು ಇಟ್ಟು ನೀರುಣಿಸುವ ಕಾರ್ಯ ಮಾಡೋಣ ಎಂದರು. ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 5 ಲಕ್ಷ ಗಿಡಗಳನ್ನು ನೆಡಲು ನಿರ್ಧರಿಸಿದ್ದು, ಈಗಾಗಲೇ ಚಾಲನೆ ನೀಡಲಾಗಿದೆ. ಎಲ್ಲರೂ ಈ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲತಾ ಕುಮಾರಿ ಎಂ, ಪ್ರಧಾನ ಕೌಟುಂಬಿಕ ನ್ಯಾಯಾಧೀಶರಾದ ಶಾರದಾ ಬಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿ ಜೆ ಎಂ ಉಮೇಶ್ ಎಚ್ ಕೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಗಳಾದ ಶಿಲ್ಪಾ .ಬಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಮಾನಸ ಶೇಖರ್, ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಶ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್.ಟಿ.ಎಂ ಹಾಗೂ ವಾಟರ್ ಫಾರ್ ವಾಯ್ಸ್ಲೆಸಸ್ ಸಂಸ್ಥೆಯ ಸನ್ನಿ ಹಸ್ತಿಮಾಲ್ ಜೈನ್, ಸುಪ್ರಿಯಾ ಕಿಮಿ ಸನ್ನಿ ಜೈನ್ ಹಾಗೂ ಇತರ ವಕೀಲರು ಕಾರ್ಯಕ್ರಮದಲ್ಲಿ ಹಾಜರಿದ್ದರು.