ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ ಅವರೇ ನಿಮಗೆ ತಾಕತ್ತಿದ್ದರೆ ಮಂಡಿಕಲ್ಲಿಗೆ ಬಂದು ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಲ್ಲು? ಅಥವಾ ತಾಕತ್ತಿದ್ದರೆ ಯಾರನ್ನು ನಿಲ್ಲಿಸುತ್ತೀಯೋ ನಿಲ್ಲಿಸು.ಕಾಂಗ್ರೆಸ್ ಪಕ್ಷದಲ್ಲಿ ನಾನೂ ನಿಂತುಕೊಳ್ಳುತ್ತೇನೆ.ಯಾರು ಗೆಲ್ಲುತ್ತಾರೋ ನೋಡೇ ಬಿಡೋಣ. ಮನುಷ್ಯರನ್ನು ಕಡೆಗಣಿಸಬಾರದು.ಸಹನೆ ಕಳೆದುಕೊಳ್ಳುವಷ್ಟು ಹಿಯಾಳಿಸಬಾರದು ಎಂದು ಕಾಕಲ ಚಿಂತೆ ರಾಜಣ್ಣ ನೋವಿನಿಂದ ನುಡಿದರು.
ನಗರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದರು
ಶಾಸಕ ಪ್ರದೀಪ್ ಈಶ್ವರ್ ಅವರಿಗೆ ನನ್ನ ಪ್ರಶ್ನೆ ನೀವು ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುತ್ತಿದ್ದೀರೋ? ಇಲ್ಲವೋ ಬಿಜೆಪಿಗೆ ಕೆಲಸ ಮಾಡುತ್ತಿದ್ದೀರೋ ತಿಳಿಸಿ ? ಯಾಕೆಂದರೆ ಚಿಮುಲ್ ಚುನಾವಣೆಯಲ್ಲಿ ಪೆರೇಸಂದ್ರ ಕ್ಷೇತ್ರಕ್ಕೆ ಅಭ್ಯರ್ಥಿ ಹಾಕುವ ಸಾಮರ್ಥ್ಯ ಇರಲಿಲ್ಲವೆ? ಎಂದರು.
ನೀವೊಬ್ಬ ಎಂಎಲ್‌ಎ ಆಗಿ ಚಿಮುಲ್ ಚುಕ್ಕಾಣಿ ಹಿಡಿಯಬೇಕಾದರೆ ಅಭ್ಯರ್ಥಿ ಹಾಕಿಸಬೇಕಿತ್ತು. ಯಾಕೆ ನಿಮಗೆ ಅರ್ಹ ಅಭ್ಯರ್ಥಿಗಳು ಯಾರೂ ಸಿಗಲಿಲ್ಲವಾ? ಯಾಕೆ ಹಾಕಿಸಲಿಲ್ಲ? ಎಂದ ಅವರು ನಿಮಗೆ ಯೋಗ್ಯತೆಯಿಲ್ಲ ಎಂಬುದನ್ನು ಅರಿತು, ಇಡೀ ಜಿಲ್ಲೆಯಲ್ಲಿ ಪೆರೇಸಂದ್ರದಲ್ಲಿ ಮಾತ್ರ ಯುನಾನಿಮಸ್ ಆಯ್ಕೆಯಾದರೆ ಪಕ್ಷಕ್ಕೆ ಮರ್ಯಾದೆ ಇರಲ್ಲ ಎಂದು ಭಾವಿಸಿ ಜಿಲ್ಲಾ ಉಸ್ತುವಾರಿ ಸಚಿವರು ನನ್ನನ್ನು ಅಭ್ಯರ್ಥಿ ಮಾಡಿದರು.ನೀವು ಶಾಸಕರಾಗಿ ನನ್ನ ಪರವಾಗಿ ಕೆಲಸ ಮಾಡಬೇಕಿತ್ತು ಮಾಡಿದಿರಾ? ಎಂದು ಪ್ರಶ್ನಿಸಿದರು.
ನಾನು ಕಾಂಗ್ರೆಸ್ ಅಭ್ಯರ್ಥಿ ಆದರೂ ಕೂಡ ನನ್ನ ತಾಯಿ ಕಾಂಗ್ರೆಸ್ ಎನ್ನುವ ನೀವು ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡಬೇಕಿತ್ತು ಅಲ್ಲವಾ? ನಾಚಿಕೆಯಾಗಬೇಕು ನಿಮಗೆ ಯಾರಿಗೆ ಸಹಾಯ ಮಾಡಿದಿರಿ ನೆನಪಿಸಿಕೊಳ್ಳಿ ಎಂದರು.
ಆಯಿತು ನಾನು ಇಲ್ಲಿಗೆ ಬರುವ ಮುಂಚೆ ಎಲ್ಲಿದ್ದೆ? ಬಿಜೆಪಿಯಲ್ಲಿದ್ದೆ.ನನ್ನ ಮನೆಗೆ ಬಂದು ಪಕ್ಷಕ್ಕೆ ಕರೆದಿದ್ದು ಯಾರು? ಯಾಕಾಗಿ ಕರೆತಂದಿರಿ? ನಿಮಗೆ, ಉಸ್ತುವಾರಿ ಸಚಿವರಿಗೆ, ಮಾಜಿ ಸಚಿವ ಶಿವಶಂಕರ್ ಅವರಿಗೆ ಗೌರವಕೊಟ್ಟು ಪಕ್ಷಕ್ಕೆ ಬಂದೆ. ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಮಾಡ ಬೇಕೋ ಬಿಜೆಪಿಗೆ ಸಹಾಯ ಮಾಡಬೇಕೋ? ನಾಳೆ ಬೆಳಿಗ್ಗೆ ಎಂಎಲ್‌ಎ ಎಲೆಕ್ಷನ್ ಬಂದೇ ಬರಲಿದೆ. ನೀವು ಪಾರ್ಟಿಯಿಂದ ಟಿಕೆಟ್ ತೆಗೆದುಕೊಂಡಾಗ ಗೊತ್ತಾಗುತ್ತೆ ಆಬಾಧೆ ಏನು ಎಂದು. ನಾನು ಆಬಾಧೆ ಅನುಭವಿಸಿದ್ದೇನೆ.ನಿಮಗೆ ಯೋಗ್ಯತೆ ಇದ್ದಿದ್ದರೆ ನಾನು ಮಾಡಲ್ಲ ಎಂದು ಸುಮ್ಮನಿರ ಬಹುದಿತ್ತು. ನನಗೆ ಇಷ್ಟವಿಲ್ಲ ಎಂದು ಚುನಾವಣೆಯಿಂದ ದೂರ ಉಳಿಯಬಹುದಿತ್ತು. ಆದರೆ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದುಕೊಂಡು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದೀರಿ? ಒಳ್ಳೆಯದಾಗಲ್ಲ ನಿಮಗೆ ಎಂದರು.
ನಾನು ಒಂದು ಸಲ ಯಾರಿಗಾದರೂ ಮಾತು ಕೊಟ್ಟರೆ ಆ ಮಾತಿಗೆ ಕಟ್ಟು ಬೀಳುವ ವ್ಯಕ್ತಿ ನಾನು. ನೀನು ನನ್ನ ಸಂಬAಧಿ, ಮೇಲಾಗಿ ಸಮುದಾಯದವರೇ ಆಗಿರಬಹುದು.ಡಾ.ಕೆ.ಸುಧಾಕರ್‌ಗೆ ಮಾತು ಕೊಟ್ಟಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ನಿಮ್ಮತ್ತಿರ ಹಣಕ್ಕೆ ಆಸೆ ಪಡುವವ ನಾನಾಗಿದ್ದಿದ್ದರೆ ನಿನ್ನ ಹಿಂದೆಯೇ ಬರುತ್ತಿದ್ದೆ. ನನಗೆ ಹಣ ಬೇಕಾಗಿಲ್ಲ. ರಾಜಣ್ಣಗೆ ಸುಧಾಕರ್ 2 ಕೋಟಿ ಹಣ ಕೊಟ್ಟಿದ್ದಾರಂತೆ ಅದಕ್ಕಿಂತ ಹೆಚ್ಚಿಗೆ ಕೊಟ್ಟರೆ ಬರುತ್ತಾರಂತೆ ಎಂದು ಹೇಳಿಕೊಂಡಿದ್ದೀರಿ? ನೋಡಿ ಪ್ರದೀಪ್ ಶಾಸಕರೇ ನನ್ನ ನೀವು ಹಣ ಕೊಟ್ಟು ಕೊಂಡುಕೊಳ್ಳಲಾಗಲ್ಲ. ದುಡ್ಡಲ್ಲಿ ನನ್ನ ಅಳತೆ ಮಾಡಲಾಗಲ್ಲ.ಯಾವೊತ್ತೂ ರಾಜಣ್ಣ ಕೊಡುವ ಪೈಕಿನೇ ಹೊರತು ಪಡೆಯುವ ಪೈಕಿ ಅಲ್ಲ.ನನ್ನ 20 ವರ್ಷದ ರಾಜಕೀಯ ಜೀವನದಲ್ಲಿ ಕೈಯಿಂದ ಖರ್ಚು ಮಾಡಿಕೊಂಡು ರಾಜಕೀಯ ಮಾಡಿ ದ್ದೇನೆ. ಇದೇ ಡಾ.ಸುಧಾಕರ್ ಅವರಿಗೆ ಕೂಡ ಖರ್ಚು ಮಾಡಿದ್ದೇನೆ. ನಿಮ್ಮ ಎಲೆಕ್ಷನ್‌ಗೂ ನಾನು ಖರ್ಚು ಮಾಡಿದ್ದೇನೆ.ಆದರೂ ನೀನು ನಿಮ್ಮ ಶಿಷ್ಯರು, ತಮ್ಮ ಸಂಬಂಧಿಕರನ್ನು ಬಿಟ್ಟು ನನ್ನ ಸೋಲಿಸುವ ಕೆಲಸ ಮಾಡಿದೆ.ಬಿಜೆಪಿಗೆ ಓಟು ಹಾಕಿಸಿದೆ. ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ನನ್ನ ತಾಯಿ ಎಂದು ಹೇಳುತ್ತೀಯಾ ಎಂದರು.
ಇನ್ನೂ ಕಾಲ ಮಿಂಚಿಲ್ಲ, ಪಕ್ಷದ ಗೌರವ ಶಾಸಕರ ಗೌರವ ಉಳಿಸಿಕೊಳ್ಳಿ ಪ್ರದೀಪ್ ಉಸ್ತುವಾರಿ ಸಚಿವರ ಬಳಿ ಹೋಗಿ ಕುಳಿತುಕೊಂಡು ನಿಮ್ಮ ಚಲನವಲನಗಳನ್ನು ಸರಿಮಾಡಿಕೊಳ್ಳಿ? ಜೀವನ ಇಷ್ಟಕ್ಕೆ ಮುಗಿದಿಲ್ಲ. ಇದೇ ಬದುಕು ಶಾಶ್ವತವಲ್ಲ. ಕರಗಕ್ಕೆ ಕರೆಯಲು ಹೋದರೆ ನಾನು ತಾಲೂಕಿನ ದಣಿ ಮೊದಲು ನನ್ನ ಕರೆಯಬೇಕು ಎಂದು ತಾಕೀತು ಮಾಡುವುದು ಸರಿಯಲ್ಲ? ಶಾಸಕರ ಸಂಸ್ಕೃತಿ ಯಲ್ಲಿ ತೊಡೆ ತಟ್ಟುವುದು ಭುಜ ತಟ್ಟುವುದು ಇದೆಯಾ? ಜನ ಸೇವೆ ಮಾಡಲು ನಿಮಗೆ ಮತ ನೀಡಿದ್ದಾರೆ. ಖುಸ್ತಿ ಮಾಡಲು ಅಲ್ಲ. ಒಳ್ಳೆಯ ಮಾತಿನ ಮಲ್ಲ ನೀನು. ಅದರ ಜತೆಗೆ ಒಳ್ಳೆಯ ಕೆಲಸ ಮಾಡಿ ಜನರಿಗೆ ಹತ್ತಿರವಾಗಿ. ಅದನ್ನು ಬಿಟ್ಟು ಪಕ್ಷಕ್ಕೆ ದ್ರೋಹ ಮಾಡಿಕೊಂಡು ನಮ್ಮನ್ನೇ ಸೋಲಿಸುವ ಕೆಲಸ ಮಾಡಿದರೆ ಜನತೆ ನಿನ್ನನ್ನು ಸೋಲಿಸುತ್ತಾರೆ. ಆಯಿತು ನಿಮ್ಮ ಆಶೀರ್ವಾದ ದಿಂದ ನಾನು ಸೋತೆ?ಹೇಗೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಯನ್ನು ಸೋಲಿಸಿದ ಕೀರ್ತಿ ನಿಮ್ಮದಾಗಲಿ ಎಂದರು.
ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಸೋತ ನನ್ನನ್ನು ನಾಮನಿರ್ದೇಶನ ಸದಸ್ಯರನ್ನಾಗಿ ಮಾಡಿ ದ್ದಾರೆ. ನಾನು ಬೈಬರ್ಥ್ ಕಾಂಗ್ರೆಸ್ ಸದಸ್ಯ. ಏನೋ ಮಧ್ಯೆ ಜಿ.ಪಂ ಸೀಟು ಸಿಗಲಿಲ್ಲ ಎಂದು ಕೋಪಗೊಂಡು ಜೆಡಿಎಸ್‌ಗೆ ಹೋದೆ. ಬೈ ಎಲೆಕ್ಷನ್‌ನಲ್ಲಿ ಆಂಜಿನಪ್ಪ ಜೊತೆಯಲ್ಲಿ ಮತ್ತೆ ಕಾಂಗ್ರೆಸ್ ಬಂದೆಮೊನ್ನೆ ಕಾರಣಾಂತರಗಳಿAದ ಬೆಜೆಪಿಗೆ ಹೋಗಿದ್ದು ನಿಜ. 6 ತಿಂಗಳು ಕೂಡ ಇರಲಿಲ್ಲ ವಾಪಸ್ಸು ಕಾಂಗ್ರೆಸ್ಗೆ ಬಂದೆ.. ದುಡ್ಡಿನ ಆಸೆಯಿಂದ ಬಿಜೆಪಿಗೆ ಹೋಗಲಿಲ್ಲ. ನೀವೇನೂ ಕೊಡ ಬೇಕಾಗಿಲ್ಲ. ಭಗವಂತ ನನಗೂ ಹಣ ಕೊಟ್ಟಿದ್ದಾನೆ.ಯಾವುದೇ ಕಾರಣಕ್ಕೆ ನನ್ನ ವಿರುದ್ಧ ಹೋರಾಟ ಮಾಡಬೇಕಿದ್ದರೆ ನೇರವಾಗಿ ಮಾಡು.ನಿನ್ನ ಶಿಷ್ಯ ತಮ್ಮಂದಿರ ಕಳಿಸಿ ಕಾಂಗ್ರೆಸ್‌ಗೆ ದ್ರೋಹ ಮಾಡ ಬೇಡ. ಹಿಂಬಾಗಿಲ ರಾಜಕೀಯ ಮಾಡಬೇಡಿ.ಹಣ ಅಧಿಕಾರ ಎಂದೂ ಕೂಡ ಶಾಶ್ವತ ಅಲ್ಲ.ಎಲ್ಲವೂ ಕಡಿಮೆ ಆಗಲೇ ಬೇಕು.ಮಂಡಿಕಲ್ ಹೋಬಳಿಗೆ ನೀವೆಂದೂ ಬರೋದೆ ಇಲ್ಲವಾ? ನಾನು ನಿಕ್ಕರ್ ಹಾಕಿಕೊಂಡಾಗಿನಿಂದಲೂ ರಾಜಕೀಯ ಮಾಡುತ್ತಿದ್ದೇನೆ. ಅಂತಹ ಕೇಶವರೆಡ್ಡಿ ಯನ್ನೇ ಎದುರು ಹಾಕಿಕೊಂಡವನು ನಾನು. ನೀನ್ಯಾವ ಮಹಾ ನನಗೆ. ತಾಕತ್ತಿದ್ದರೆ ನಾನು ತೋರಿಸೇ ಬಿಡುತ್ತೇನೆ ಬಾ ಮಂಡಿಕಲ್ಲಿಗೆ ಎಂದು ಪಂಥಾಹ್ವಾನ ನೀಡಿದರು.
ಇನ್ನ ಮೇಲಾದರೂ ತಿದ್ದಿಕೋ?ನಿಮಗೆ ರಾಜಕೀಯ ಭವಿಷ್ಯ ಇನ್ನೂ ಇದೆ.ಚಿಕ್ಕ ಹುಡುಗ ನೀನು. ಒಳ್ಳೆಯದಾಗಲಿ ಎಂದು ನಾವು ಬಯಸಿದರೆ , ನಮಗೆ ಕೆಟ್ಟದ್ದನ್ನು ಬಯಸುತ್ತೀಯಾ? ಈ ರೀತಿ ಮಾಡಲು ನಿಮಗೆ ನಾಚಿಕೆ ಆಗಬೇಕು. ದಯವಿಟ್ಟು ಹೇಳುತ್ತೇನೆ. ಪ್ರದೀಪ್ ಇನ್ನ ಮೇಲಾದರೂ ತಿದ್ದಿಕೋ?ಕಾಂಗ್ರೆಸ್ ಪಕ್ಷವನ್ನು ಕಟ್ಟು. ಬೆಳೆಸು ನಾವೆಲ್ಲಾ ನಿಮ್ಮ ಜತೆಗಿರುತ್ತೇವೆ. ಆದರೆ ಇದೇ ಥರ ಆಡುತ್ತಿದ್ದರೆ ಪರಿಣಾಮ ಬೇರೆಯೇ ಇರಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಕಾಕಲಚಿಂತೆ ರಾಜಣ್ಣ, ಮೋಹನ್‌ರೆಡ್ಡಿ, ಆವುಲರೆಡ್ಡಿ, ಮಂಚೇನಹಳ್ಳಿ ಪ್ರಕಾಶ್, ಶೆಟ್ಟಿವಾರಹಳ್ಳಿ ಶ್ರೀನಿವಾಸ್, ರಾಜೇಶ್, ಶಂಕರ್, ಚಂದ್ರಣ್ಣ, ಜಾವಿದ್ ಪಾಷ, ನುಗಿತಹಳ್ಳಿ ರವಿ ಮತ್ತಿತರರು ಇದ್ದರು.