ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

SriKrishna Janmashtami: ಕೃಷ್ಣ–ರಾಧೆ ವೇಷದಲ್ಲಿ ಕಂಗೊಳಿಸಿದ ಪುಟಾಣಿಗಳು; ಬಾಲಲೀಲೆ ಕಿರು ನಾಟಕ ಪ್ರದರ್ಶನ

ವಿದ್ಯಾರ್ಥಿಗಳು ಶ್ರೀಕೃಷ್ಣನ ಜೀವನ ಹಾಗೂ ಬಾಲಲೀಲೆಯನ್ನು ಆಧರಿಸಿದ ಕಿರು ನಾಟಕವನ್ನು ಮನೋಜ್ಞವಾಗಿ ಪ್ರದರ್ಶಿಸಿದರು. ಶ್ರೀಕೃಷ್ಣನ ಬಾಲ್ಯ, ತುಂಟತನ ಹಾಗೂ ಜೀವನ ಸಂದೇಶಗಳನ್ನು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಿದರು. ಇದೇ ವೇಳೆ ಕೃಷ್ಣನಿಗೆ ಸಂಬಂಧಿಸಿದ ಭಕ್ತಿಗೀತೆಗಳು ಹಾಗೂ ಭಜನೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಯ ಸೊಬಗು ತುಂಬಿದರು.

ಚಿಕ್ಕಬಳ್ಳಾಪುರ: ನಗರದ ಶಾಂತ ವಿದ್ಯಾನಿಕೇತನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ(SriKrishna Janmashtami) ಹಬ್ಬವನ್ನು ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಶಾಲಾ ಆವರಣವು ಕೃಷ್ಣನಾಮ, ಭಜನೆ ಹಾಗೂ ಮಕ್ಕಳ ಉತ್ಸಾಹದಿಂದ ಕಂಗೊಳಿಸಿತು.

ಜನ್ಮಾಷ್ಟಮಿ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ವಿಶೇಷವಾಗಿ ಪುಟಾಣಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಭೂಷಣ ಧರಿಸಿ ಎಲ್ಲರ ಗಮನ ಸೆಳೆದರು. ಪುಟ್ಟ ಕೃಷ್ಣ–ರಾಧೆಯರ ಮನಮೋಹಕ ವೇಷ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಇದನ್ನೂ ಓದಿ: Krishna Janmastami 2026: ಉದ್ಯಾನನಗರಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಶಾಪಿಂಗ್ ಸಡಗರ

ವಿದ್ಯಾರ್ಥಿಗಳು ಶ್ರೀಕೃಷ್ಣನ ಜೀವನ ಹಾಗೂ ಬಾಲಲೀಲೆಯನ್ನು ಆಧರಿಸಿದ ಕಿರು ನಾಟಕವನ್ನು ಮನೋಜ್ಞವಾಗಿ ಪ್ರದರ್ಶಿಸಿದರು. ಶ್ರೀಕೃಷ್ಣನ ಬಾಲ್ಯ, ತುಂಟತನ ಹಾಗೂ ಜೀವನ ಸಂದೇಶಗಳನ್ನು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಿದರು. ಇದೇ ವೇಳೆ ಕೃಷ್ಣನಿಗೆ ಸಂಬಂಧಿಸಿದ ಭಕ್ತಿಗೀತೆಗಳು ಹಾಗೂ ಭಜನೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಯ ಸೊಬಗು ತುಂಬಿದರು.

ಕಾರ್ಯಕ್ರಮದಲ್ಲಿ ಶಾಂತ ಸಮೂಹ ಸಂಸ್ಥೆಗಳ ಡೀನ್ ಅಕಾಡೆಮಿಕ್ ಹಾಗೂ ಸಿಇಒ ಡಾ. ನವೀನ್ ಸೈಮನ್, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಗೋಪಿನಾಥ್, ಶಾಂತ ವಿದ್ಯಾನಿಕೇತನದ ಪ್ರಾಂಶುಪಾಲ ಡಾ. ಪ್ರಸಾದ್ ಅಪ್ಪಲ ಹಾಗೂ ಶಿಕ್ಷಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಯನ್ನು ಮೆಚ್ಚಿ ಪ್ರೋತ್ಸಾಹಿಸಿದರು.