ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lokayukta Raid: ಜಿಲ್ಲಾಧಿಕಾರಿ ಕಚೇರಿ ಎಫ್‌ಡಿಎ ಮನೆಗಳ ಮೇಲೆ ಲೋಕಾ ದಾಳಿ: ಆದಾಯಕ್ಕಿಂತ ಶೇ.138.22ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪ

ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ನಡೆದಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ದರ್ಶನ್ ಗೌಡ ಅವರ ಕಚೇರಿಯಲ್ಲೂ ದಾಖಲೆಗಳನ್ನು ಪರಿಶೀಲಿಸ ಲಾಯಿತು. ಬೆಂಗಳೂರಿನ ಬಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿರುವ ಎರಡು ಮನೆಗಳು, ಮಲ್ಲಸಂದ್ರದ ಎರಡು ಮನೆಗಳು, ಹೆಸರಘಟ್ಟದ ಸೋಲದೇವನಹಳ್ಳಿಯ ಒಂದು ಮನೆ ಹಾಗೂ ಯಶವಂತಪುರದಲ್ಲಿನ ಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.

ಚಿಕ್ಕಬಳ್ಳಾಪುರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಜೆ. ದರ್ಶನ್ ಗೌಡ ಅವರ ಕಚೇರಿ, ನಿವಾಸ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಸುಮಾರು ಎಂಟು ಕಡೆ ಲೋಕಾಯುಕ್ತ(Lokayukta Raid) ಪೊಲೀಸರು ಮಂಗಳವಾರ ದಾಳಿ ನಡೆಸಿದರು.

ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ನಡೆದಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ದರ್ಶನ್ ಗೌಡ ಅವರ ಕಚೇರಿಯಲ್ಲೂ ದಾಖಲೆ ಗಳನ್ನು ಪರಿಶೀಲಿಸಲಾಯಿತು. ಬೆಂಗಳೂರಿನ ಬಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿರುವ ಎರಡು ಮನೆಗಳು, ಮಲ್ಲಸಂದ್ರದ ಎರಡು ಮನೆಗಳು, ಹೆಸರಘಟ್ಟದ ಸೋಲದೇವನಹಳ್ಳಿಯ ಒಂದು ಮನೆ ಹಾಗೂ ಯಶವಂತಪುರದಲ್ಲಿನ ಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.

ಇದನ್ನೂ ಓದಿ: Lokayukta Raid: ಆದಾಯಕ್ಕಿಂತ ಹೆಚ್ಚು ಆಸ್ತಿ ಆರೋಪ: ಜೆಸ್ಕಾಂ ಎಇಇ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಇದಲ್ಲದೆ, ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ವಡನಘಟ್ಟದಲ್ಲಿರುವ ದರ್ಶನ್ ಗೌಡ ಅವರ ಮಾವನ ಮನೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲಿಸಿದ್ದಾರೆ.

ದರ್ಶನ್ ಗೌಡ ಅವರ ಆದಾಯ ಮತ್ತು ಆಸ್ತಿ ಕುರಿತಂತೆ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಅವರ ಕಾನೂನುಬದ್ಧ ಆದಾಯಕ್ಕೆ ಹೋಲಿಸಿದರೆ ಆಸ್ತಿ ಪ್ರಮಾಣವು ಶೇ.138.22 ರಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.

ದಾಳಿಯ ವೇಳೆ ಪತ್ತೆಯಾದ ಆಸ್ತಿ, ದಾಖಲೆಗಳು ಹಾಗೂ ಇತರೆ ಮಾಹಿತಿಯನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಶೋಧ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.