ಚಿಕ್ಕಬಳ್ಳಾಪುರ : ಕೇಂದ್ರ ಸರಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಟ್ರಾನ್ಸ್ ಜೆಂಡರ್ 2026ರ ಮಸೂದೆ(Transgender Bill 2026)ಯನ್ನು ಈ ಕೂಡಲೇ ವಾಪಸ್ಸು ಪಡೆಯಬೇಕು. ಸದರಿ ಕಾಯ್ದೆಯು ಟ್ರಾನ್ಸ್ ಜೆಂಡರ್ ಸಮುದಾಯದ ವೈಯಕ್ತಿಕ ಹಕ್ಕು, ಘನತೆಯ ಬದುಕು ಮತ್ತು ಗುರುತನ್ನು ಸಮರ್ಪಕವಾಗಿ ರಕ್ಷಿಸುವಲ್ಲಿ ವಿಫಲವಾಗಲಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಬಸ್‌ನಿಲ್ದಾಣದ ಬಳಿ ಭಾನುವಾರ ಏರ್ಪಡಿಸಿದ್ದ 2026ರ ಕಾಯ್ದೆಯ ವಿರುದ್ಧದ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರಕಾರವು ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ 2019(Sexual Minorities Act 2019)ಕ್ಕೆ ತಿದ್ದುಪಡಿ ಮಾಡಲು ಮುಂದಾಗಿದೆ. ಈ ಸಂಬಂಧ ಲೋಕಸಭೆ, ರಾಜ್ಯಸಭೆ(Lok Sabha, Rajya Sabha)ಯಲ್ಲಿ ಮಸೂದೆ ಅಂಗೀಕಾರವೂ ಆಗಿದೆ. ನಿಜವಾದ ಸಂತ್ರಸ್ತರಿಗೆ ಕಾನೂನಿನ ನೆರವು ಸಿಗುವಂತೆ ಮಾಡುವ ಉದ್ದೇಶದಿಂದ ಮಸೂದೆ ರೂಪಿಸಲಾಗಿದೆ ಎಂದು ಕೇಂದ್ರ ಹೇಳಿದೆ. ಆದರೆ ಲಿಂಗತ್ವ ಅಲ್ಪಸಂಖ್ಯಾತರು ಯಾರು ಎಂಬುದನ್ನು ಸಂಕುಚಿತವಾಗಿ ವ್ಯಾಖ್ಯಾನಿಸಲಾಗಿದೆ. ಅವರ ಲಿಂಗತ್ವದ ಗುರುತಿನ ಸ್ವಯಂ ಘೋಷಣೆ ಮತ್ತು ಇತರೆ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಅಂಶಗಳು ಮಸೂದೆಯಲ್ಲಿವೆ ಎಂದು ಸಂಘಟನೆ ಮುಖಂಡರು ಆರೋಪಿಸಿದರು.
2026ರ ತಿದ್ದುಪಡಿ ಮಸೂದೆಯು ಹಿಜ್ರಾ, ಕಿನ್ನರ್, ಮಂಗಳಮುಖಿ, ತಿರುನಂಬಿ, ನುಪಿಮಾನ್ಬಿ, ಕೋಥಿ, ಶಿವಶಕ್ತಿ, ಜೋಗಿನಿ, ಮರುಳಾಡಿ, ಯೆಜ್ಜೋಡು, ಮತ್ತು ಧುರಾನಿ ಮುಂತಾದ ಟ್ರಾನ್ಸ್ ಜೆಂಡರ್ ಮಹಿಳೆಯರು, ಟ್ರಾನ್ಸ್ಜೆಂಡರ್‌ಗಳು, ಇಂಟರ್‌ಸೆಕ್ಸ್ ಮತ್ತು ಲಿಂಗ ವೈವಿಧ್ಯಮಯ ಸಮುದಾಯದ ಹಿತಾಸಕ್ತಿಗಾಗಿ ಕೇಂದ್ರ ಈ ಕೂಡಲೇ 2026ರ ಮಸೂದೆ ವಾಪಸ್ಸು ಪಡೆಯಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ವರ್ಸಸ್ ಭಾರತ ಒಕ್ಕೂಟ ಎನ್‌ಎಲ್‌ಎಸ್‌ಎ- 2026ರ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಲಿಂಗ ಗುರುತಿನ ಕಾನೂನು ಮಾನ್ಯತೆಯನ್ನು ಜೈವಿಕ ಸಂಗತಿಗಳಿಗಿಂತ ವ್ಯಕ್ತಿಯ ಸ್ವಯಂ ಗ್ರಹಿಕೆಯೇ ಆಧಾರವಾಗಿತ್ತು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವೀರೇಂದ್ರ ಕುಮಾರ್(Minister Dr. Virendra Kumar) ಅವರು ಮಾ.12ರಂದು ಲೋಕಸಭೆಯಲ್ಲಿ ಮಂಡಿಸಿದ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ-2026 ತಮ್ಮದೇ ಆದ ತಪ್ಪಿಲ್ಲದೆ ಮತ್ತು ತಮ್ಮದೇ ಆದ ಆಯ್ಕೆ ಯಿಲ್ಲದೆ ಜೈವಿಕ ಕಾರಣಗಳಿಂದ ತೀವ್ರ ಸಾಮಾಜಿಕ ಬಹಿಷ್ಕಾರ ಎದುರಿಸುವವರನ್ನು ಮಾತ್ರ ರಕ್ಷಿಸುವ ಉದ್ದೇಶ ಹೊಂದಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಶಿಲ್ಪಾ ಮಾತನಾಡಿ, 2019ರ ಕಾಯ್ದೆಯ ಪ್ರಕಾರ ಲಿಂಗತ್ವ ಅಲ್ಪಸಂಖ್ಯಾತರು ಎಂದರೆ ಹುಟ್ಟಿ ನಿಂದ ದತ್ತವಾದ ಲಿಂಗತ್ವಕ್ಕಿಂತ ಭಿನ್ನವಾದ ಲಿಂಗತ್ವ ಹೊಂದಿರುವವರು. ಅಂದರೆ ಹುಟ್ಟಿದಾಗ ಗಂಡಾಗಿದ್ದು ನಂತರ ಹೆಣ್ಣಾಗಿ ಬದಲಾಗಿರಬಹುದು. ಹುಟ್ಟಿದಾಗ ಗಂಡಾಗಿ ಇದ್ದವರು ನಂತರ ಹೆಣ್ಣಾಗಿರಬಹುದು. ಅಂತರ ಲಿಂಗತ್ವ ಹೊಂದಿರಬಹುದು. ಇಲ್ಲವೆ ಕಿನ್ನರ್, ಹಿಜ್ರಾ ಅರವಣೆ, ಮತ್ತು ಜೋಗತಿ ಇಂತಹ ಸಾಮಾಜಿಕ ಸಾಂಸ್ಕೃತಿಕ ಚಹರೆ ಗಳನ್ನು ಹೊಂದಿರುವವರು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಲೇಸರ್ ಥೆರಪಿ, ಹಾರ್ಮೋನ್ ಥೆರಪಿ ಇತಾದಿಗಳಿಗೆ ಒಳಗಾಗಿರಬಹುದು.ಇಲ್ಲದಿರಬಹುದು, ಎಲ್ಲರನ್ನೂ ವಿಶಾಲ ಅರ್ಥದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಂದೇ ಗುರುತಿಸಲಾಗುತ್ತಿತ್ತು.
ಆದರೆ 2019ರ ಕಾಯ್ದೆಯಲ್ಲಿನ ಕೆಲವು ವಿಚಾರಗಳಲ್ಲಿ ಗೊಂದಲಗಳಿವೆ,ಅವು ಕಾಯ್ದೆ ಜಾರಿ ಮಾಡಲು ಅಡ್ಡಿಯಾಗಿವೆ. ಲಿಂಗತ್ವ ಅಲ್ಪಸಂಖ್ಯಾತರೆಂದರೆ ಯಾರು? ಅವರನ್ನು ಹೇಗೆ ಗುರುತಿಸಲಾಗುತ್ತಿದೆ ಎನ್ನುವ ಅಂಶಗಳೇ 2026ರ ಕಾಯ್ದೆ ಜಾರಿಯಲ್ಲಿ ನಿರ್ಣಾಯಕವಾಗಿವೆ ಎನ್ನುವ ಕೇಂದ್ರ ಸರಕಾರ ಈ ಅಂಶಗಳನ್ನು 2026ರ ಮಸೂದೆಯಲ್ಲಿ ಬದಲಾವಣೆ ಮಾಡ ಲಾಗಿದೆ. ಇದರ ವಿರುದ್ಧ ಸಿಡಿದೆದ್ದಿರುವ ಟ್ರಾನ್ಸ್ ಜೆಂಡರ್ ಸಮೂಹ 2026ರ ಮಸೂದೆಯು ಗಂಭೀರವಾದ ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳ ಕಾಳಜಿಯನ್ನು ಹುಟ್ಟು ಹಾಕಿದೆ. ಇದು ನಮ್ಮ ಗುರುತುಗಳನ್ನು ಅಳಿಸಿ ಹಾಕುವ ಅಪಾಯದಿಂದ ಕೂಡಿದೆ. ಮೇಲಾಗಿ ವೈವಿಧ್ಯಮಯವಾದ ಲಿಂಗಗುರುತುಗಳ ಜೀವಂತ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ದೂರಿದರು.
2019ರ ಕಾಯ್ದೆಯು ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಲಿಂಗತ್ವದ ಗ್ರಹಿಕೆಯ ಆಧಾರ ಮೇಲೆ ಲಿಂಗತ್ವ ಅಲ್ಪಸಂಖ್ಯಾತರೆಂದು ಸ್ವಯಂ ಗುರುತಿಸಿಕೊಳ್ಳಲು 2019ರ ಕಾಯ್ದೆ ಸೆಕ್ಷನ್ 4(2)ರಂತೆ ಅವಕಾಶ ಕಲ್ಪಿಸಿತ್ತು. 2026ರ ಮಸೂದೆಯಲ್ಲಿ ಇದನ್ನು ಕೈಬಿಡಲಾಗಿದೆ. ಈ ಮಸೂದೆಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರೆಂದರೆ ಯಾರು ಎಂಬುದನ್ನು ಸೀಮಿತವಾಗಿ ವ್ಯಾಖ್ಯಾನಿಸಲಾಗಿದೆ ಇದು ತಪ್ಪು. 2019ರ ಕಾಯ್ದೆ ಪ್ರಕಾರ ಜಿಲ್ಲಾಧಿಕಾರಿಗಳು ಲಿಂಗತ್ವ ಅಲ್ಪಸಂಖ್ಯಾತರೆಂದು ಪ್ರಮಾಣ ಪತ್ರ ಕೊಡುತ್ತಿದ್ದರು.
ಆದರೆ ಹೊಸ ತಿದ್ದುಪಡಿ ಮಸೂದೆ ಪ್ರಕಾರ ಗುರುತಿನ ಚೀಟಿ ನೀಡಲು ವೈದ್ಯಕೀಯ ಮಂಡಳಿ ತಪಾಸಣೆಗೆ ಮಾಡುತ್ತದೆ. ಅದರ ಆಧಾರದಲ್ಲಿ ಸರಕಾರಕ್ಕೆ ಶಿಫಾರಸ್ಸು ಮಾಡು ತ್ತದೆ. ಜತೆಗೆ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ದೃಢೀಕರಿಸುವ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಬೇಕು.
ಸೆಕ್ಷನ್ 5 (1) ಎ ಪ್ರಕಾರ ಅವುಗಳನ್ನು ಪರಿಶೀಲಿಸಿ ವ್ಯಕ್ತಿಗೆ ಗುರುತಿನ ಚೀಟಿ ನೀಡಬೇಕೆ ಬೇಡವೆ ಎನ್ನುವ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ, 100ಕ್ಕೂ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವರು ಭಾಗಿಯಾಗಿ ಸಹಿ ಸಂಗ್ರಹ ಮಾಡಿ ರಾಷ್ಟ್ರಪತಿಗಳಿಗೆ ಕಳಿಸಿಕೊಡುವ ಕೆಲಸ ಮಾಡಿದರು.
ಭಾನುವಾರದ ಸಹಿಸಂಗ್ರಹದ ಅಭಿಯಾನದಲ್ಲಿ ಭೂಮಿ ಹಕ್ಕು ಸಂಘಟನೆ ಮುಖಂಡರು, ಹಳ್ಳಿ ಮಕ್ಕಳ ಸಂಘದ ಮುಖಂಡರು,ವಿಶೇಷ ಚೇತನ ಸಂಘದ ಮುಖಂಡರು ಭಾಗಿ ಯಾಗಿದ್ದರು.