ಚಿಕ್ಕಬಳ್ಳಾಪುರ: ಒಳಮೀಸಲು ಜಾರಿಗೆ ತೊಡಕಾಗಿರುವ ಎ.ಕೆ ಎ.ಡಿ ಸಮಸ್ಯೆ ಪರಿಸಹರಿಸಿ 101 ಜಾತಿಗಳಿಗೆ ಸಮಾನ ರೀತಿಯಲ್ಲಿ ಮೀಸಲು ನಿಯಮ ಅನ್ವಯಿಸಿ ಎಂದು ಸರಕಾರ ನೇಮಿಸಿದ್ದ ಜಸ್ಟೀಸ್ ನಾಗಮೋಹನ್‌ದಾಸ್ ಏಕಸದಸ್ಯ ಸಮಿತಿ ನೀಡಿರುವ ಅವೈಜ್ಞಾನಿಕ ವರದಿ ತಿರಸ್ಕರಿಸಿ, ನೇಮಕಾತಿಗಳಲ್ಲಿ ಬಲಗೈ ಸಮುದಾಯಕ್ಕೆ ಎದುರಾಗಿರುವ ರೋಸ್ಟರ್ ಬಿಂದು ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಬೃಹತ್ ಹೋರಾಟ ನಡೆಸಲಾಯಿತು.
ನಗರದ ಅಂಬೇಡ್ಕರ್ ಭವನದಿಂದ ಜಿಲ್ಲಾಡಳಿತ ಭವನದವರೆಗೆ ಮಂಗಳವಾರ ಕಾಲ್ನಡಿಗೆ ಜಾಥಾ ಮಾಡುವ ಮೂಲಕ 2000 ಸಂಖ್ಯೆಯಷ್ಟು ಬೃಹತ್ ಪ್ರಮಾಣದ ಬಲಗೈ ಸಮುದಾ ಯದ ಮುಖಂಡರು ಕಾರ್ಯಕರ್ತರು ನಾಗಮೋಹನ್‌ದಾಸ್ ವರದಿ ತಿರಸ್ಕರಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಆ ಮೂಲಕ ಜಿಲ್ಲಾಡಳಿತ ಮತ್ತು ಸರಕಾರದ ಗಮನ ಸೆಳೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾದರು.
ನಾಗಮೋಹನ್‌ದಾಸ್ ಅವರ ವರದಿ(Nagamohandas's report)ಹೊಲೆಯ ಸಂಬಂಧಿತ ಛಲವಾದಿ, ಚನ್ನದಾಸ, ದಾಸ, ಆದಿಕರ್ನಾಟಕ, ಆದಿ ದ್ರಾವಿಡ ಇತರೆ ಹೊಲೆಯ ಸಂಬಂಧಿತ ಜಾತಿಗಳನ್ನು ಒಟ್ಟುಗೂಡಿಸಿ ಜನಸಂಖ್ಯೆಯನ್ನು ಸಮೂದಿಸಿ ಮೀಸಲು ಹಂಚುವ ಬದಲು ಪ್ರತ್ಯೇಕವಾಗಿ ವಿಭಾಗಿಸುವ ಮುಖಾಂತರ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಿರುವ ನಮಗೆ ಘೋರ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: Chikkaballapur News: ಮಾ.26ಕ್ಕೆ ಅಂಬೇಡ್ಕರ್ ಕೊಲಾಜ್ ನಾಟಕ ನೋಡಿ ಅಂಬೇಡ್ಕರ್ ಬಗ್ಗೆ ಅರಿಯಿರಿ: ಕೋಟಿಗಾನಹಳ್ಳಿ ರಾಮಯ್ಯ
ಹೊಲೆಯ ಸಮುದಾಯ ನಿಖರವಾಗಿ ಜಾತಿ ಸಮೂದಿಸಿದ್ದರೂ, ನಮೂದಾಗಿಲ್ಲ ಎನ್ನು ವಂತೆ ಅಸಂಬದ್ಧ ವರದಿಯನ್ನು ನೀಡಿ ಎಬಿಸಿ ಗುಂಪುಗಳಾಗಿ ವಿಭಾಗಿಸಿರುವ ಈ ವರದಿ ಯನ್ನು ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಅಂಗೀಕರಿಸದೆ ತಿರಸ್ಕರಿಸಬೇಕು. ಹೊಲೆಯ ಸಮುದಾಯದ ಎಲ್ಲಾ ಗುಂಪುಗಳನ್ನು ಒಟ್ಟುಗೂಡಿಸಿ ಎಬಿಸಿವಾರು ವರ್ಗೀ ಕರಿಸದೆ ಮತ್ತೊಮ್ಮೆ ವೈಜ್ಞಾನಿಕವಾಗಿ ನಿರ್ಧಿಷ್ಟ ವರದಿ ತಾಯಾರಿಸುವವರೆಗೆ ನಾಗ ಮೋಹನ್‌ದಾಸ್ ವರದಿಯಂತೆ ಒಳಮೀಸಲಾತಿ ಜಾರಿ ಮಾಡಬಾರದು. 56 ಸಾವಿರ ಉದ್ಯೋಗಗಳನ್ನು ತುಂಬಬಾರದು ಎಂದು ಆಗ್ರಹಿಸಿದರು.
*
ಜಿಲ್ಲೆಯಲ್ಲಿ ಅಂಬೇಡ್ಕರ್ ಅವರ ಆಶಯದಂತೆ ಸರಕಾರದಿಂದ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ,ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಸತಿ ಸಹಿತ ವಿದ್ಯಾರ್ಥಿ ನಿಲಯಗಳಲ್ಲಿ ನಡೆದಿರುವ ಅನ್ನದ ಹಗರಣದ ಬಗ್ಗೆ ಸರಕಾರ ಕೂಡಲೇ ತನಿಖೆ ನಡೆಸಬೇಕು. ಮಕ್ಕಳಿಗೆ ಬರುವ ಅನ್ನದ ಹಣದಲ್ಲಿ ಗೋಲ್ ಮಾಲ್ ಮಾಡಿರುವ ಅಧಿಕಾರಿಗಳು, ವಾರ್ಡನ್‌ಗಳು, ಆಹಾರ ಸರಬರಾಜು ಗುತ್ತಿಗೆದಾರರ ಮೇಲೆ ಕಠಿಣ ಕಾನೂನುಕ್ರಮ ಜರುಗಿಸಬೇಕು. ಹಾಲು ಮೊಸರು ಮೊಟ್ಟೆ ಮೊಟ್ಟೆ ತರಕಾರಿ ಧವಸ ಧಾನ್ಯ ಬಾಳೆಹಣ್ಣುಗಳ ಪ್ರತಿ ಸರಬರಾಜಿನ ಸಂದರ್ಭದಲ್ಲಿ ತೆಗೆಸಿರುವ ಜಿಪಿಎಸ್ ಪೋಟೋ ಗಳನ್ನು ಪರಿಶೀಲಿಸಿ ಪೋಟೋಗಳಲ್ಲಿರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಬೇಕು.
ಮೂಲಸೌಕರ್ಯಗಳಡಿ ನಿಯಮ ಉಲ್ಲಂಘಿಸಿ ಕೊಟೇಷನ್ ಮತ್ತು ಕಟ್ ಬಿಲ್ಲುಗಳ ಮುಖಾಂತರ ನಡೆಸಿರುವ ಅಕ್ರಮವನ್ನು 62ಬಿ ಪ್ರಕಾರ ಎಲ್ಲಾ ಸಾಧಿಲ್ವಾರು ಬಿಲ್ಲುಗಳನ್ನು ಹಿಂದಿನ ೨ ವರ್ಷಗಳ ತನಕ ತನಿಖೆಗೆ ಒಳಪಡಿಸಬೇಕು.ಪಾರದರ್ಶಕ ಟೆಂಡರ್ ಮೂಲಕ ಮೂಲಭೂತ ಸೌಕರ್ಯ ಒದಗಿಸಬೇಕು.ಟೆಂಡರ್ ಪಡೆದ ಮೂಲ ಗುತ್ತಿಗೆದಾರರಿಂದ ನೇರವಾಗಿ ಆಹಾರ ಸರಬರಾಜು ಮಾಡದೆ ತುಂಡು ಗುತ್ತಿಗೆ ನೀಡಿ ಮಕ್ಕಳ ಅನ್ನದ ಹಗರಣ ನಡೆಯಲು ಅವಕಾಶ ನೀಡಿರುವ ಕಾರಣ ಇವರ ಇಎಂಡಿ ಹಣವನ್ನು ಮುಟ್ಟುಗೋಲಿ ಹಾಕಿ ಕಪ್ಪುಪಟ್ಟಿಗೆ ಸೇರಿಸಬೇಕು.
ಈ ಹಗರಣದಲ್ಲಿ ಭಾಗಿಯಾಗಿರುವ 3 ಇಲಾಖೆಗಳ ಎಲ್ಲಾ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಯಬೇಕು. ಹತ್ತಾರು ವರ್ಷಗಳಿಂದ ಬೀಡು ಬಿಟ್ಟಿರುವ ನೌಕರರನ್ನು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗು ವುದು ಎಂದು ಒಕ್ಕೂಟ ಆಗ್ರಹಿಸಿತು.
ಈ ವೇಳೆ, ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾಧ್ಯಕ್ಷ ರಾಮಕೃಷ್ಣ, ಸಲಹಾ ಸಮಿತಿ ಸದಸ್ಯರಾದ ನಾರಾಯಣಪ್ಪ, ಖಜಾಂಚಿ ನರಸಿಂಹಮೂರ್ತಿ, ಕಾರ್ಯದರ್ಶಿ ಗಂಗಾಧರ್, ತಾಲೂಕು ಅಧ್ಯಕ್ಷ ವೆಂಕಟಕೃಷ್ಣ, ಕಾರ್ಯದರ್ಶಿ, ಮಂಜುನಾಥ್, ಚೇಳೂರು ಅಧ್ಯಕ್ಷ ವೈ ಶಂಕರ್, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ರಾಮಚಂದ್ರ, ಗುಡಿಬಂಡೆ ತಾಲೂಕು ಅಧ್ಯಕ್ಷ ಚಿನ್ನಪ್ಪ, ಗೌರಿಬಿದನೂರು ಅಧ್ಯಕ್ಷ ನಾಗರಾಜ್, ಮಂಚೇನಳ್ಳಿ ತಾಲೂಕು ಗೌರೀಶ್, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಚಂದ್ರು, ಚಿಂತಾಮಣಿ ತುಳಸಿ ಕೃಷ್ಣ, ತಾಲೂಕು ಸಲಹಾ ಸದಸ್ಯರಾದ ಗೂಳೂರು ವೇಣು, ಬಾಗೇಪಲ್ಲಿ ಶ್ರೀನಾಥ್, ಕೃಷ್ಣಪ್ಪ, ಸಿಪಿಎಂ ರಮೇಶ್, ಈಶ್ವರ್ ಅಂಜನ್ ವೆಂಕಟರೆಡ್ಡಿ ಆರ್.ಶ್ರೀರಾಮ್ ಎಲ್ಲಾ ತಾಲೂಕು ಅಧ್ಯಕ್ಷರು ಕಾರ್ಯ ದರ್ಶಿ ಖಜಾಂಚಿ ಎಲ್ಲರೂ ಸೇರಿ ಇದ್ದರು.