ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shidlaghatta News: ನರಸಿಂಹಸ್ವಾಮಿ ಕೃಪೆಯಿಂದ ಗ್ರಾಮ ಸುಭಿಕ್ಷವಾಗಲಿ: ಪುಟ್ಟು ಆಂಜಿನಪ್ಪ

ಗುಡಿಹಳ್ಳಿ ಗ್ರಾಮದ ಜನರಿಗೆ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬೆಳೆಯಬೇಕು, ಎಲ್ಲರಿಗೂ ಉತ್ತಮ ಆರೋಗ್ಯ ಲಭಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ದೊರೆಯಬೇಕು. ಶ್ರೀ ನರಸಿಂಹ ಸ್ವಾಮಿಯ ಕೃಪೆಯಿಂದ ಗ್ರಾಮದಲ್ಲಿ ಸುಭಿಕ್ಷ, ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಪುಟ್ಟು ಆಂಜಿನಪ್ಪ ಹೇಳಿದರು.

ಶಿಡ್ಲಘಟ್ಟ: ಗುಡಿಹಳ್ಳಿ ಗ್ರಾಮದ ಜನರಿಗೆ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬೆಳೆಯಬೇಕು, ಎಲ್ಲರಿಗೂ ಉತ್ತಮ ಆರೋಗ್ಯ ಲಭಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ದೊರೆಯಬೇಕು. ಶ್ರೀ ನರಸಿಂಹಸ್ವಾಮಿಯ ಕೃಪೆಯಿಂದ ಗ್ರಾಮದಲ್ಲಿ ಸುಭಿಕ್ಷ, ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ಪುಟ್ಟು ಆಂಜಿನಪ್ಪ ಹೇಳಿದರು.

ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಶೇಷರೂಡ ಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ದೇವಸ್ಥಾನದಲ್ಲಿ ಈಗಾಗಲೇ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಪ್ರತಿಷ್ಠಾಪನೆಗೊಂಡಿದ್ದು, ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಿರುವುದು ಸಂತಸದ ಸಂಗತಿ. ಇದೀಗ ಎಲ್ಲರ ಸಹಕಾರದಿಂದ ಧ್ವಜಸ್ತಂಭ ಪ್ರತಿಷ್ಠಾಪನೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Shidlaghatta News: ಗುರುಗಳ ಮಾರ್ಗದರ್ಶನವೇ ಯಶಸ್ಸಿನ ಮೊದಲ ಮೆಟ್ಟಿಲು: ಅರುಣ್ ಚಕ್ರವರ್ತಿ

ದೇವಸ್ಥಾನದ ಪುನರ್‌ಪ್ರತಿಷ್ಠಾಪನೆ ಕಾರ್ಯಕ್ಕೆ ಸಹಕಾರ ನೀಡಿದ ದಾನಿಗಳು, ಗ್ರಾಮಸ್ಥರು ಹಾಗೂ ಯುವಕರ ಸೇವೆ ಶ್ಲಾಘನೀಯವಾಗಿದೆ. ನರಸಿಂಹಸ್ವಾಮಿ ವಿಗ್ರಹವು ಭಕ್ತರಲ್ಲಿ ಭಕ್ತಿಭಾವ ಮೂಡಿಸು ವಂತಿದ್ದು, ದೇವರ ಅನುಗ್ರಹ ಎಲ್ಲರಿಗೂ ದೊರೆಯಲಿ ಎಂದು ಆಶಿಸಿದರು.

ಕಲ್ಯಾಣೋತ್ಸವದ ಅಂಗವಾಗಿ ವಾಸ್ತು ಹೋಮ, ವಾಸ್ತು ಮಂಡಲ, ರಕ್ಷಾಬಂಧನ, ಅಂಕುರಾರ್ಪಣೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಗ್ರಾಮದ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚಂದ್ರು, ಮದು, ಮಂಜುನಾಥ, ಮುನಿಯಪ್ಪ, ಮುನಿತಿಮ್ಮಪ್ಪ, ದ್ಯಾವಪ್ಪ, ಪ್ರಿಂಟಿಂಗ್ ಪ್ರೆಸ್ ನಾರಾಯಣಸ್ವಾಮಿ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.