Chikkaballapur News: ರೈತರ ಜಮೀನಿಗೆ ಹೋಗಲು ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಜಯಲಕ್ಷ್ಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪನೇಂದ್ರ, ಭೂಮಾಪನ ಇಲಾಖೆಯ ಸರ್ವೆಯರ್ ಖಾದರ್ ಸಾಬ್ ಸ್ಥಳಕ್ಕೆ ಭೇಟಿ ನೀಡಿ ಅಳತೆ ಕಾರ್ಯ ಮಾಡಿ ರೈತರ ಅನುಕೂಲಕ್ಕೆ ತಕ್ಕಂತೆ 8 ಅಡಿ ಕಾಲು ದಾರಿಯನ್ನು ಗುರುತಿಸಿ ತೆರವು ಮಾಡಿ ಕೊಟ್ಟ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಿದರು.


ಚಿಂತಾಮಣಿ: ರೈತರ ಜಮೀನಿಗೆ ಕೃಷಿ ಚಟುವಟಿಕೆಗಳು ಮಾಡಲು ದಾರಿ ಇಲ್ಲದೆ ಅನಾನಕೂಲ ವಾಗುತ್ತಿದ್ದ ಕಾರಣ ಅಧಿಕಾರಿಗಳು ಇಂದು ರೈತರಿಗೆ ಅನುಕೂಲವಾಗುವಂತೆ ದಾರಿ ಮಾಡಿಕೊಟ್ಟ ಘಟನೆ ಅಂಬಾಜಿದುರ್ಗ ಹೋಬಳಿಯ ಕೋತ್ತಪ್ಪನಹಳ್ಳಿ ಜಂಗಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: Chikkaballapur News: ಬೋಧಕ ಸಿಬ್ಬಂದಿ ಶಿಸ್ತಿನ ರಾಯಭಾರಿಗಳಾಗಬೇಕು: ಡಾ. ಅಮಿತ್ ನಾಥ್
ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಜಂಗಾಲಹಳ್ಳಿ ಗ್ರಾಮದ ಆಂಜಪ್ಪ ಎಂಬುವರು ಗ್ರಾಮದ ಸರ್ವೆ ನಂ:51/1 ಜಮೀನಿಗೆ ಇರುವ ದಾರಿಯು ಒತ್ತುವರಿ ತೆರವುಗೊಳಿಸಲು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಗಳ ಆದೇಶದಂತೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಜಯಲಕ್ಷ್ಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪನೇಂದ್ರ, ಭೂಮಾಪನ ಇಲಾಖೆಯ ಸರ್ವೆಯರ್ ಖಾದರ್ ಸಾಬ್ ಸ್ಥಳಕ್ಕೆ ಭೇಟಿ ನೀಡಿ ಅಳತೆ ಕಾರ್ಯ ಮಾಡಿ ರೈತರ ಅನುಕೂಲಕ್ಕೆ ತಕ್ಕಂತೆ 8 ಅಡಿ ಕಾಲು ದಾರಿಯನ್ನು ಗುರುತಿಸಿ ತೆರವು ಮಾಡಿಕೊಟ್ಟ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಿದರು.