ಬಾಗೇಪಲ್ಲಿ: ಜನಸ್ನೇಹಿ ವಾತಾವರಣ ನಿರ್ಮಾಣ ಹಾಗೂ ಆಡಳಿತದಲ್ಲಿ ದಕ್ಷತೆ ಹೆಚ್ಚಿಸಲು ಇಲಾಖೆಯು ಮುಂದಾಗಿದ್ದು, ಉತ್ತಮ ಆಡಳಿತ ವ್ಯವಸ್ಥೆಗೆ ಪೋಲೀಸರು ಹಾಗೂ ಮಾಧ್ಯಮದವರ ನಡುವೆ ಸಮನ್ವಯ ಇರಬೇಕು ಎಂದು ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಅಜಯ್ ಸಾರಥಿ(Circle Inspector Ajay Sarathi) ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಪತ್ರಕರ್ತರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.
ಬಾಗೇಪಲ್ಲಿ ತಾಲ್ಲೂಕಿಗೆ ಬಂದಿರುವುದು ನನ್ನ ಭಾಗ್ಯ ಎಂದು ಮಾತು ಆರಂಭಿಸಿ, ಕಾನೂನಿಗೆ ಗೌರವ ಕೊಡುವ ವರಿಗೆ ಸದಾ ಗೌರವ ನೀಡುವುದಾಗಿ, ರಾಜಕೀಯ ಒತ್ತಡ ಎಷ್ಟೇ ಇದ್ದರೂ ಕಾನೂನಾತ್ಮಕವಾಗಿಯೇ ಕೆಲಸ ಮಾಡು ವುದಾಗಿ ಖಡಕ್ ಆಗಿ ನುಡಿದರಲ್ಲದೇ, ಪೊಲೀಸ್ ಎಂದರೆ ಭಯ ಹುಟ್ಟಿಸುವ ಶಕ್ತಿಯಲ್ಲ, ಬದಲಾಗಿ ಸಮಾಜಕ್ಕೆ ಭರವಸೆ ನೀಡುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: Bagepally News: ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಸ್ತೆ ಸುರಕ್ಷತಾ ಮಾಸದ ಬಗ್ಗೆ ಅರಿವು
ಮಾಧ್ಯಮಗಳು ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಸೇತುವೆ ಯಾಗಬೇಕು ಎಂದು ಮನವಿ ಮಾಡಿದ ಅವರು, ಇಲಾಖೆಯ ಉತ್ತಮ ಕೆಲಸಗಳ ಜೊತೆಗೆ ನ್ಯೂನತೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ,ಪ್ರಧಾನ ಕಾರ್ಯದರ್ಶಿ ಸೈಯದ್ ಸಿದ್ದೀಕ್, ಖಜಾಂಚಿ ರಾಮಕೃಷ್ಣ (ಹೆಗಡೆ) ಜಿಲ್ಲಾ ಕಾರ್ಯದರ್ಶಿ ಜಿ.ಕೆ.ಆನಂದ,ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎಸ್.ಸುರೇಶ್ ಹಿರಿಯ ಪತ್ರಕರ್ತರರಾದ ಬಿ.ಟಿ.ಚಂದ್ರಶೇಖರ ರೆಡ್ಡಿ, ಎಸ್.ಎಸ್.ಶ್ರೀನಿವಾಸ್, ಶಂಕರರಾವ್ ಅಬ್ದುಲ್ ಕರೀಂ ಸಾಬ್, ಪಿ.ಎಸ್.ರಾಜೇಶ್, ಡಿ.ವಿ.ಮಂಜುನಾಥ ಹಾಗೂ ಇತರೆ ಪತ್ರಕರ್ತರು ಹಾಜರಿದ್ದರು.