ಚಿಂತಾಮಣಿ: ಮುಂಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಸೇರಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಶಕ್ತಿಯುತವಾಗಿ ಸಂಘಟಿಸಲು ತಾಲೂಕಿನ ಮುರುಗಮಲ್ಲ ಹೋಬಳಿ ಮಟ್ಟದ ಮುಖಂಡರ ಸಭೆ ನಗರದ ಹೊರವಲಯದ ಜೆಕೆ ಭವನದಲ್ಲಿ ನಡೆಯಿತು.
ಈ ವೇಳೆ ಜೆಡಿಎಸ್ ಪಕ್ಷದ ಕೋರ್ ಕಮಿಟಿ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಮುಖಂಡರು ಹಾಗೂ ಕಾರ್ಯಕರ್ತರಿಂದ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಇದನ್ನೂ ಓದಿ: Chinthamani News: ವಯೋನಿವೃತ್ತ ವೆಂಕಟಚಲಪತಿ ಎನ್.ದಂಪತಿಗೆ ಗಣ್ಯರಿಂದ ಆತ್ಮೀಯ ಸನ್ಮಾನ
ಇದೇ ವೇಳೆ, ಮುರುಗಮಲ್ಲ ಹೋಬಳಿ ಮಟ್ಟದ ಸಮಿತಿಯನ್ನು ರಚಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಸಂಘಟಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುಡೇ ಶ್ರೀನಿವಾಸರೆಡ್ಡಿ,ಮುಖಂಡರಾದ ದಿನ್ನಿಮಿಂದಹಳ್ಳಿ ಬೈರಾರೆಡ್ಡಿ,ಮಿಲ್ಟಿ ಶ್ರೀನಿವಾಸ್ ಇದ್ದರು.