ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಮಾನಸಿಕ ಅಸ್ವಸ್ಥತೆ ಕಾಯಿಲೆ ಅಲ್ಲ ಅದೊಂದು ಸಮಸ್ಯೆ: ಎನ್.ನಾಗರಾಜ್

ಮಾನಸಿಕ ಅಸ್ವಸ್ಥತೆಯನ್ನು ಲಘುವಾಗಿಯೂ ಪರಿಗಣಿಸಬಾರದು. ಈ ಸಮಸ್ಯೆಯು ವ್ಯಕ್ತಿಯನ್ನು ಅಲ್ಲದೆ ಸುತ್ತಮುತ್ತಲಿನ ಸಮಾಜಕ್ಕೂ ಸಮಸ್ಯೆ ತಂದೊತ್ತದೆ. ಆದ್ದರಿಂದ ಪ್ರಜ್ಞಾ ಟ್ರಸ್ಟ್ ವತಿಯಿಂದ ವಾರಕ್ಕೆ ಒಂದು ದಿನದಂತೆ ಪ್ರತಿ ಶನಿವಾರ ಆರು ತಿಂಗಳ ಅವಧಿಯ ತರಬೇತಿ ಮತ್ತು ಆಪ್ತ ಸಮಾ ಲೋಚನಾ ಕಾರ್ಯಕ್ರಮ ನಡೆಸಲಾಗುತ್ತದೆ. ಸಮಸ್ಯೆಯಿರುವವರು ಇಲ್ಲಿ ಬಂದು ಚಿಕಿತ್ಸೆ ಪಡೆಯ ಬಹುದು

ಮಾನಸಿಕ ಅಸ್ವಸ್ಥತೆ ಕಾಯಿಲೆ ಅಲ್ಲ ಅದೊಂದು ಸಮಸ್ಯೆಯಾಗಿದ್ದು ವೈದ್ಯರ ಆಪ್ತಸಮಾಲೋಚನೆಯಿಂದ ಗುಣಪಡಿಸಬಹುದು  ಎಂದು ಪ್ರಜ್ಞಾನ ಸಂಸ್ಥಾಪಕ -ಕಾರ್ಯನಿರ್ವಾಹಣಾಧಿಕಾರಿ ಎನ್.ನಾಗರಾಜ್ ತಿಳಿಸಿದರು.

ಗೌರಿಬಿದನೂರು: ಮಾನಸಿಕ ಅಸ್ವಸ್ಥತೆ ಕಾಯಿಲೆ ಅಲ್ಲ ಅದೊಂದು ಸಮಸ್ಯೆಯಾಗಿದ್ದು ವೈದ್ಯರ ಆಪ್ತಸಮಾಲೋಚನೆಯಿಂದ ಗುಣಪಡಿಸಬಹುದು  ಎಂದು ಪ್ರಜ್ಞಾನ ಸಂಸ್ಥಾಪಕ -ಕಾರ್ಯ ನಿರ್ವಹಣಾಧಿಕಾರಿ ಎನ್.ನಾಗರಾಜ್ ತಿಳಿಸಿದರು.

ನಗರದಲ್ಲಿ ಪ್ರಜ್ಞಾ ಟ್ರಸ್ಟ್ ಅರುಣೋದಯ ವಿಶೇಷ ಶಾಲೆಯ ಪ್ರಾಂಗಣದಲ್ಲಿ ಏರ್ಪಡಿಸಿದ್ದ “ಮಾನಸಿಕ ಅಸ್ವಸ್ಥತೆ ಮಾರ್ಗೋಪಾಯ ತರಬೇತಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಾನಸಿಕ ಅಸ್ವಸ್ಥತೆಯನ್ನು ಲಘುವಾಗಿಯೂ ಪರಿಗಣಿಸಬಾರದು. ಈ ಸಮಸ್ಯೆಯು ವ್ಯಕ್ತಿಯನ್ನು ಅಲ್ಲದೆ ಸುತ್ತಮುತ್ತಲಿನ ಸಮಾಜಕ್ಕೂ ಸಮಸ್ಯೆ ತಂದೊತ್ತದೆ. ಆದ್ದರಿಂದ ಪ್ರಜ್ಞಾ ಟ್ರಸ್ಟ್ ವತಿಯಿಂದ ವಾರಕ್ಕೆ ಒಂದು ದಿನದಂತೆ ಪ್ರತಿ ಶನಿವಾರ ಆರು ತಿಂಗಳ ಅವಧಿಯ ತರಬೇತಿ ಮತ್ತು ಆಪ್ತ ಸಮಾ ಲೋಚನಾ ಕಾರ್ಯಕ್ರಮ ನಡೆಸಲಾಗುತ್ತದೆ. ಸಮಸ್ಯೆಯಿರುವವರು ಇಲ್ಲಿ ಬಂದು ಚಿಕಿತ್ಸೆ ಪಡೆಯ ಬಹುದು ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಾಣ ಸಮಾಜದ ಎಲ್ಲರ ಹೊಣೆ : ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎನ್.ರಮೇಶ್

ತರಬೇತಿಗೆ ಹಾಜರಾಗುವವರು ವಿರಂಡಹಳ್ಳಿ ಪ್ರಜ್ಞಾ ಟ್ರಸ್ಟ್ ಅರುಣೋದಯ ವಿಶೇಷ ಶಾಲೆಯಲ್ಲಿ ಖುದ್ದಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಸಮಾಜದಲ್ಲಿ ಅದರ ಅವಶ್ಯಕತೆ ಇರುವವರಿಗೆ ಈ ಬಗ್ಗೆ ಸಲಹೆ ನೀಡಬಹುದು ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜ್ಞಾಟ್ರಸ್ಟ್ನ ಅಧ್ಯಕ್ಷರಾದ ಶ್ರೀಮತಿ ಎಸ್ ವಿಜಯಲಕ್ಷ್ಮಿ ವಹಿಸಿದ್ದು ಸಂಪನ್ಮೂಲ ವ್ಯಕ್ತಿಯಾಗಿ ನಿಮಾನ್ಸ್ನಲ್ಲಿ ಪಿಹೆಚ್‌ಡಿ ಮಾಡುತ್ತಿರುವ ಕುಂದರ್ತಿ ವೆಂಕಟೇಶ್ ಮಾನಸಿಕ ಆರೋಗ್ಯ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು ಕೂಡ ಭಾಗವಹಿಸಿದ್ದರು.  

ಈ ವೇಳೆ ರಮಾದೇವಿ, ಹರಣಿ ಪ್ರಕಾಶ್, ಸಂಯೋಜಕಿ ಶಾಂತ ಮಹೇಶ್, ಉಷಾ ಕೆ. ಎನ್, ಸವಿತಾ, ಶಾಂತ ಲಕ್ಷ್ಮಿ, ತುಳಸಿ, ಮಂಜುಳಾ ಸಾವಿತ್ರಮ್ಮ ಇದ್ದರು.