ಚಿಂತಾಮಣಿ: ಅಂಬೇಡ್ಕರ್ ಭವನವನ್ನು ಸುಸಜ್ಜಿತವಾಗಿ ಆಧುನೀಕರಣ ಸೌಲಭ್ಯಗಳನ್ನು ಒದಗಿಸಲಾಗುವುದೆಂದರು,ವಿರೋಧಿ ಪಕ್ಷದವರು ನನ್ನನ್ನು ಅಂಬೇಡ್ಕರ್ ವಿರೋಧಿಯೆಂದು ಬಿಂಬಿಸಲು ಹೊರಟಿದ್ದಾರೆ ಹವಾನಿಯಂತ್ರಿತ ವ್ಯವಸ್ಥೆ 10 ಅಡಿ ಎತ್ತರದ ಅಂಬೇಡ್ಕರ್ ಪುತ್ಥಳಿ ಯನ್ನು ಸ್ಥಾಪನೆ ಮಾಡುತ್ತಿದ್ದರೂ ಸಹಾ ನನ್ನನ್ನು ಒಂದು ಸಮುದಾಯದವರೊಂದಿಗೆ ಎತ್ತಿ ಕಟ್ಟುವಂತಹ ಕೆಲಸ ನಡೆಯುತ್ತಿದೆಯೆಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್( Dr. M.C. Sudhakar) ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಅರಸನಕೆರೆ ತುಂಬಿ ಕೋಡಿ ಹರಿಯುತ್ತಿದ್ದು ಬಾಗಿನ ಅರ್ಪಿಸಿ ಮಾತನಾಡಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 5.5ಕೋಟಿ ಹೆಚ್ಚುವರಿ ಹಣವನ್ನು ಒದಗಿಸಲಾ ಗುತ್ತಿದ್ದು,ಜಿಲ್ಲಾಧಿಕಾರಿಗಳಿಗೆ ಪತ್ರವು ನಡೆದಿದೆ.ಕಾಮಗಾರಿಯನ್ನು ಪೂರ್ಣಗೊಳಿಸಿಕೊಳ್ಳಬೇಕೆಂಬ ಇಚ್ಛೆಯೊಂದಿಗೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ಮಾಣಗೊಳ್ಳಲು ಮುಂದಾಗಿದ್ದು,ಒಳಗಿನ ಅಲಂಕಾರಿಕ ವ್ಯವಸ್ಥೆ ತಡವಾಗ ಬಹುದು,ಆದರೆ ಏಪ್ರಿಲ್ ನೊಳಗೆ ಪೂರ್ಣಗೊಳಿಸುವ ಎಲ್ಲಾ ಪ್ರಯತ್ನ ಗಳನ್ನು ಮಾಡಲಾಗುವುದೆಂದರು.
ಕೆಲವರು ಬಕೆಟ್ ಹಿಡಿಯುವವರು ಎಂದು ಹೇಳಿದವರು ಮತ್ತೆ ಬಕೇಟ್ ಹಿಡಿಯುವವರ ಬಳಿಗೆ ದೊಡ್ಡ ಬಕೇಟ್ ಹಿಡಿಯಲು ಹೋಗಿದ್ದು ಅಂತಹ ವರ ಬ್ಲಾಕ್‌ಮೇಲ್ ತಂತ್ರಗಾರಿಕೆಗೆ ಜಗ್ಗುವುದಿಲ್ಲ. ಬಗ್ಗುವುದಿಲ್ಲ ಅವೆಲ್ಲವು ನಮ್ಮ ಬಳಿ ನಡೆಯುವುದಿಲ್ಲ,ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಅಂಶಗಳನ್ನು ಹರಿದಾಡುತ್ತಿದ್ದು ಅವುಗಳ ಬದಲಾಗಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾವುದೇ ಚಿಂತನೆಯಾಗಲಿಲ್ಲವೆಂದು ವಿರೋಧಿ ಪಕ್ಷದವರಿಗೆ ಟಾಂಗ್ ನೀಡಿದರು.
ಇದನ್ನೂ ಓದಿ: Chikkaballapur News: ಮೂಲವ್ಯಾಧಿ ಬಗ್ಗೆ ಜಾಗೃತೆಯಿರಲಿ ; ನಕಲಿ ವೈದ್ಯರ ಬಳಿ ಚಿಕಿತ್ಸೆ ಖಂಡಿತ ಬೇಡ : ಡಾ.ಮಾದೇಶ್
ಭಕ್ತರಹಳ್ಳಿ ಅರಸನ ಕೆರೆಯು ಕೇವಲ ಅವರೊಬ್ಬರಿಂದಲೇ ಆಗಲಿಲ್ಲ ಬದಲಾಗಿ ಎಲ್ಲರ ಸಹಕಾರ ದಿಂದ ಹಿಂದಿನ ಹಲವು ರಾಜಕೀಯ ನೇತಾರರ ಪ್ರತಿಫಲ ವಾಗಿ ಭಕ್ತರಹಳ್ಳಿ ಅರಸನಕೆರೆಯ ನೀರು ನಗರ ಭಾಗಕ್ಕೆ ಹರಿಯುವಂತಾಗಿದೆಯೆಂದರು.ನಾಗರೋತ್ಥಾನದ ಹಣದಲ್ಲಿ ಈ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು ಅವರು ಯಾವುದೇ ಹೆಚ್ಚುವರಿ ಹಣವನ್ನು ಒದಗಿಸಿಲ್ಲವೆಂದರು.
ವಿರೋಧಿ ಪಕ್ಷದವರು ರಾಜಕೀಯ ಕಾರಣಕ್ಕಾಗಿ ಮಾತ್ರ ರಾಜ್ಯ ಸರ್ಕಾರ ದಿವಾಳಿಯಾಗಿದೆ ಅಂತ ಅಪಪ್ರಚಾರಮಾಡಿ ಲೋಕಸಭಾ ಚುನಾವಣೆಯಲ್ಲಿ ವೋಟ್ ಜೋರಿಯ ಮೂಲಕ ಮತಗಳನ್ನು ಪಡೆದು 3ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದರು.ಈ ಭಾಗದಲ್ಲಿರುವ ರೈತರು ದೊಡ್ಡ ಮಟ್ಟದ ವಿರೋಧ ಮಾಡಿದರು ಈ ಭಾಗದರೈತರ ಜೀವಾಳದ ಕೆರೆಯಿಂದ ನೀರನ್ನು ನಗರಕ್ಕೆ ತೆಗೆದುಕೊಂಡು ಹೋಗ ದಂತೆ ಕೋರ್ಟ್ ಮೆಟ್ಟಿಲೇರಿದ್ದರು.ಆದರೆ ಸ್ಪಷ್ಟ ಆದೇಶ ಆಚ್ಚುಕಟ್ಟುದಾರರಿಗೆ ತೊಂದರೆ ಯಾಗದ ರೀತಿಯಲ್ಲಿ ಈ ಕೆರೆಯ ನೀರನ್ನು ಚಿಂತಾಮಣಿ ನಗರದ ವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸುವಂತಹ ಷರತ್ತಿನ ಮೇರೆಗೆ ಸಣ್ಣ ನೀರಾವರಿ ಇಲಾಖೆಯು ನಗರಸಭೆಗೆ ಈ ಕೆರೆಯನ್ನು ಹಸ್ತಾಂತರಿಸಿತು.
ಈ ಭಾಗದ ಹಳ್ಳಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವುದರ ಮೂಲಕ ಈ ಭಾಗದ ಕೊಳವೆ ಮಾರ್ಗ ದು ಹಳ್ಳಿಗೆ ನೀರು ಶುದ್ದಿಕ ಕರಣ ಮಾಡಿ ನೀರನ್ನು ಒದಗಿಸುವ ವ್ಯವಸ್ಥೆಯಾಗಬೇಕೆಂದು ಹೇಳಿದ್ದು, ಅವೈಜ್ಞಾನಿಕ ಆದೇಶದಿಂದ ಕೇತನಾಯಕನಹಳ್ಳಿ,ಯಶ್ವಂತಪುರ, ಭಕ್ತರಹಳ್ಳಿ ಈ ಮೂರು ಗ್ರಾಮ ಗಳಿಗೆ ನೀರು ಒದಗಿಸುವ ವ್ಯವಸ್ಥೆಯಿಲ್ಲ ದಂತಾಗಿದೆ.ಇದಕ್ಕೆ ಪರ್ಯಾಯ ಮಾರ್ಗ ಕಂಡು ಹಿಡಿಯ ಬೇಕಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಈ ಭಕ್ತರಹಳ್ಳಿ ಅರಸನಕೆರೆಗೆ ನೀರು ಬಂದಿದ್ದು ಎಂಸಿಎಫ್‌ಟಿ 27 ಗೆ ಇಳಿದಿದೆ ಪೂರ್ಣ ನಗರಕ್ಕೆ ಭಾಗದ ರೈತರಿಗೆ ಅನಾನುಕೂಲ ವಾಯಿತು. ಕೊಳವ ವಿದ್ಯುತ್ ಕಂಬಿಗಳು ಇರಬಾರದು ಅಂತ ಭೂಮಿಯಲ್ಲಿ ಹೈ ಟೆನ್ಸನ್ ವೈರ್ ಅಳವಡಿಕೆ ನಂತರ ಎಲ್ ಟಿ ಕೇಬಲ್ ಅಳವಡಿಕೆ ಇನ್ನೂ 55 ಹಳ್ಳಿಗಳಲ್ಲಿ ವಾಟರ್ ಫಿಲ್ಟರ್ ಅಳವಡಿಸಿದರೆ ಎಲ್ಲಾ ಮುಗಿಯುತ್ತೆ.ಆಧುನಿಕ ವಿದ್ಯುತ್ ಚಿತಾಗಾರ ವ್ಯವಸ್ಥೆ ಇದನ್ನು ನೋಡಿ ರಾಜ್ಯದಲ್ಲಿ ಅಳವಡಿಕೆ ಚಿಂತಾಮಣಿ ಮೂಲದ ಅಮೆರಿಕ ಪ್ರಜೆ 9 ಕೋಟಿ ಉಚಿತವಾಗಿ ಆಸ್ಪತ್ರೆಗೆ ಕೊಡಲುಒಪ್ಪಿದ್ದಾರೆ.ನಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೆರೆಯಲ್ಲಿಯಾವುದೇ ತ್ಯಾಜ್ಯ ನೀರು ಹರಿಯಲು ಬಿಟ್ಟಿರಲಿಲ್ಲ ಆದರೆ ನಂತರ ಚುನಾವಣೆಯಲ್ಲಿ ಸೋತ ನಂತರ ಗೆದ್ದವರನೆ ನೆಕ್ಕುಂದಿ ಕೆರೆಗೆ ಒಳಚರಂಡಿ ನೀರು ಹರಿಯುವಂತೆ ಮಾಡಿ ಅದರಲ್ಲಿ ಇಲ್ಲಸಲ್ಲದ ಗಿಡಗಳು ಬೆಳೆಯುವಂತೆ ಆಗಿ,ಮೀನು ಸಾಗಾಣಿಕೆಗೂ ಅವಕಾಶ ಮಾಡಿದ್ದರ ಫಲವಾಗಿ ನೀರು ಶೇಖರಣಾ ಸಾಮರ್ಥ್ಯ ಕಡಿಮೆ ಯಾಗು ವಂತೆ ಮಾಡಿದೆ. ಇದಕ್ಕೆ ಕಾರಣಯಾರೆಂದು ನಿಮಗೆ ನಾಶಕ್ಕೆ ಗೊತ್ತಿದೆ ಇದರ ಕಾರಣರಾ ದವರಿಗೆ ತಿಳಿದಿದೆ.
ಯಾವುದೇ ಕಾಮಗಾರಿ ಮಾಡಬೇಕಾದರೆ ನಮ್ಮ ಸ್ವಂತ ಹಣದಿಂದ ಯಾರು ಮಾಡುವುದಿಲ್ಲ ಬದಲಾಗಿಜನರು ಪಾವತಿಸಿದ ತೆರಿಗೆಯಿಂದಲೇ ಮಾಡುತ್ತಾರೆ ಆದರೆ ಕೆಲವು ವಿರೋಧಿಗಳಿಗೆ ವಿದ್ಯಾಭ್ಯಾಸದ ಕೊರತೆಯಿಂದ ನಾವು ತಂದು ಹಾಕಿದ ಹಣದಿಂದಯಾವುದೇ ಅಭಿವೃದ್ಧಿ ನಡೆದಿಲ್ಲ ವೆಂದು, ಅವರು ತಂದು ಹಾಕಿದರೆ ಅದು ಅಭಿವೃದ್ಧಿಗೆ ಸಂಕೇತವೆಂದು ಹೇಳುತ್ತಾರೆ.
ಗ್ರಾಮ ಪಂಚಾಯತಿ ಸದಸ್ಯರಿಂದ ಹಿಡಿದು ಹಿಡಿದು ಪ್ರಧಾನಿಮಂತ್ರಿಯ ವರೆಗೆ ಪ್ರತಿಯೊಬ್ಬ ರಾಜಕಾರಣಿ ಯೂ ಜನರು ಪಾವತಿಸಿದ ತೆರಿಗೆಯ ಹಣವನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿ ಕೆಲಸಗಳನ್ನು ಮಾಡುತ್ತಾ ರಂಬ ಅಲ್ಪಜ್ಞಾನವು ಇಲ್ಲದೆ ವಿರೋಧಿಗಳು ಮಾತನಾ ಡುತ್ತಾರೆಂದು ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿರ ವಿರುದ್ಧ ಪರೋಕ್ಷವಾಗಿ ಗುಡುಗಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸುದರ್ಶನ್ ಯಾದವ್,ತಾಲೂಕು ಪಂಚಾಯತಿ ಇ ಓ ಎಸ್.ಆನಂದ್, ನಗರಸಭೆ ಅಧ್ಯಕ್ಷ ಆರ್.ಜಗನಾಥ್, ಉಪಾಧ್ಯಕ್ಷೆ ರಾಣೆಯಮ್ಮ, ಕತ್ತರಿಗುಪ್ಪೆ ಗ್ರಾಮ ಪಂಚಾಯತಿ ಅಧ್ಯಕ್ಷೆ ನಿರ್ಮಾಲ ಆಂಜನೇಯರೆಡ್ಡಿ ,ಡಿವೈಎಸ್‌ಪಿ ಪಿ.ಮುರಳೀಧರ್, ಪೌರಾಯುಕ್ತ ಜಿ.ಎನ್.ಚಲಪತಿ, ನಗರಸಭಾ ಸದಸ್ಯರು, ಪಿಡಬ್ಲ್ಯೂಡಿ ನಾಗರಾಜ್ ಮುಖಂಡರು ಉಪಸ್ಥಿತರಿದ್ದರು.